Advertisement
ಸೈಕಲ್ ಪೆಡಲ್ ತುಳಿದರೆಮಾತ್ರ, ಜೀವನ ನಡೆಯುತ್ತದೆ ಸರ್..’ಇದು, ತೈಲ ದರ ಹೆಚ್ಚಳದಿಂದ ಕೆಲಸ ಹಾಗೂಜೀವನ ನಿರ್ವಹಣೆಗೆತೊಂದರೆಯಾಗುತ್ತಿರುವಬಗ್ಗೆ ಜೊಮ್ಯಾಟೋ ಡೆಲಿವರಿಬಾಯ್ ಆನಂದ್ ಬಿಚ್ಚಿಟ್ಟವಾಸ್ತವಾಂಶ. ಇದು, ಕೇವಲ ಒಬ್ಬಉದ್ಯೋಗಿಗೆ ಎದುರಾಗಿರುವಸಮಸ್ಯೆಯಲ್ಲ. ರಾಜಧಾನಿಯ ಬಹುತೇಕಎಲ್ಲ ಉದ್ಯೋಗಿಗಳ ಜೀವನ ನಿರ್ವಹಣೆ ಮೇಲೆತೈಲ ಬೆಲೆ ಹೆಚ್ಚಳ ನೇರವಾಗಿಯೇ ಪರಿಣಾಮ ಬೀರಿದೆ.
Related Articles
Advertisement
ಬಾಡಿಗೆ ಸೈಕಲ್ಗೂ ಹೆಚ್ಚು ಬೇಡಿಕೆ: ನಗರದಲ್ಲಿ ಸೈಕಲ್‌ಜಾಥಾಗಳು, ಅಭಿಯಾನಗಳು ಹೆಚ್ಚಳವಾದ ಹಿನ್ನೆಲೆ ಬಾಡಿಗೆಸೈಕಲ್‌ಗಳಿಗೆ ಬೇಡಿಕೆ ಹೆಚ್ಚಿದೆ. ಜಾಥಾದಲ್ಲಿ ಒಂದು ದಿನಅಥವಾಕೆಲಗಂಟೆಗಳಕಾಲಮಾತ್ರ ಸೈಕಲ್‌ಬಳಸಲಾಗುತ್ತಿದೆ.ಇದಕ್ಕಾಗಿ ಸಾವಿರಾರು ರೂ. ಖರ್ಚುಮಾಡುವ ಬದಲುಬಾಡಿಗೆ ಸೈಕಲ್‌ಗಳನ್ನೇ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತೈಲದರ ಏರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಹಲವರುಸೈಕಲ್‌ಗಳನ್ನು ಬಾಡಿಗೆ ತೆಗೆದುಕೊಂಡಿದ್ದರು. ಇನ್ನುಯುವಕರು, ಸ್ನೇಹಿತರು, ಸಹೋದ್ಯೋಗಿಗಳೊಟ್ಟಿಗೆ ತೆರಳಲುಬಾಡಿಗೆ ಸೈಕಲ್ ಮೊರೆ ಹೋಗುತ್ತಿದ್ದಾರೆ ಎಂದು ಜಾಲಹಳ್ಳಿಕ್ರಾಸ್‌ನ ಬಾಡಿಗೆ ಸೈಕಲ್ ವ್ಯಾಪಾರಿ ಶಿವರಾಜ್ ಹೇಳಿದ್ದಾರೆ.
ಹಳೆಯ ಸೈಕಲ್ ರಿಪೇರಿ: ಮಕ್ಕಳು ಇರುವ ಮನೆಗಳಲ್ಲಿಸಾಮಾನ್ಯವಾಗಿ ಸೈಕಲ್‌ಗಳು ಇರುತ್ತವೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚು ಜನರು ಹಳೆಯ ಸೈಕಲ್‌ಗಳನ್ನುರಿಪೇರಿ ಮಾಡಿಸಿದ್ದಾರೆ. ಪ್ರಸ್ತುತ ಮಕ್ಕಳಿಗೆ ಇನ್ನೂ ಶಾಲೆಗಳುಪ್ರಾರಂಭವಾಗಿಲ್ಲ. ಆದರೆ, ತೈಲ ದರ ಏರಿಕೆಯಾಗಿದೆ. ಈಹಿನ್ನೆಲೆಯಲ್ಲಿ ಪೋಷಕರು ಅಗತ್ಯ ವಸ್ತುಗಳನ್ನು ಖರೀದಿಸಲುಬೈಕ್ ಬಿಟ್ಟು ಮಕ್ಕಳ ಸೈಕಲ್ ಬಳಕೆ ಮಾಡುತ್ತಿದ್ದಾರೆ.
ಲಾಕ್‌ಡೌನ್‌ನಲ್ಲಿ ಬಳಕೆ ಮಾಡದೆ ರಿಪೇರಿಗೆ ಬಂದಿರುವ ಸಾಕಷ್ಟುಸೈಕಲ್‌ಗಳನ್ನು ಈಗ ಮತ್ತೆ ರಿಪೇರಿ ಮಾಡಿಸಲು ತರುತ್ತಿದ್ದಾರೆಎಂದು ಶಿವಾಜಿನಗರ ಸೈಕಲ್ ಶಾಪ್‌ನ ಅಮೀರ್‌ಹೇಳಿದ್ದಾರೆ.
ವಾರಾಂತ್ಯದಲ್ಲಿ ಹೆಚ್ಚು ಸೈಕಲ್ ಸವಾರಿ: ನಗರದಲ್ಲಿಸಾಮಾನ್ಯ ದಿನಗಳಿಗಿಂತ ವಾರಾಂತ್ಯದಲ್ಲಿ ಮೂರು ಪಟ್ಟುಹೆಚ್ಚು ಸೈಕಲ್‌ಗಳು ರಸ್ತೆಗಿಳಿಯುತ್ತಿವೆ. ಈ ಪೈಕಿ ಶೇ.30 ಮಂದಿನಗರದ ಕೇಂದ್ರ ಭಾಗಗಳಾದ ವಿಧಾನಸೌಧ, ಕಬ್ಬನ್‌ಉದ್ಯಾನ, ಎಂ.ಜಿ.ರಸ್ತೆ, ರಾಜಭವನ, ಚರ್ಚ್ ಸ್ಟ್ರೀಟ್, ಕೆ.ಆರ್.ವೃತ್ತ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳು,ಉದ್ಯಾನಗಳು, ಪ್ರವಾಸಿ ಸ್ಥಳಗಳಲ್ಲಿ ಸೈಕಲ್ ಸವಾರಿ ಮೂಲಕಖುಷಿ ಪಡುತ್ತಾರೆ. ಶೇ.50 ನಗರದ ಹೊರಭಾಗದ ಮೈಸೂರುರಸ್ತೆ, ಕನಕಪುರ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಹೆಸರಘಟ್ಟ ರಸ್ತೆ,ಮದ್ರಾಸ್ ರಸ್ತೆ, ವರ್ತುಲ ರಸ್ತೆ, ವಿಮಾನ ನಿಲ್ದಾಣ ರಸ್ತೆಗಳಲ್ಲಿ15ರಿಂದ20ಕಿ.ಮೀ. ಹೋಗಿ ಬರುತ್ತಾರೆ. ಉಳಿದಂತೆ ಶೇ.20ಜನರು ಬೆಂಗಳೂರಿಗೆ ಸಮೀಪವಿರುವ ಸ್ಥಳಗಳು, 50ರಿಂದ70 ಕೀ.ಮೀ. ಆಸುಪಾಸಿನ ಪ್ರವಾಸಿತಾಣಗಳಾದ ನಂದಿಬೆಟ್ಟ,ಶಿವಗಂಗೆ ಬೆಟ್ಟ, ತುಮಕೂರು, ಬನ್ನೇರುಘಟ್ಟಕ್ಕೆವಾರಾಂತ್ಯದಲ್ಲಿ ಸೈಕಲ್ ಸವಾರಿ ಹೋಗಿ ಬರುತ್ತಿದ್ದಾರೆ.
ವಿಕಾಸ್ ಆರ್. ಪಿಟ್ಲಾಲಿ