Advertisement

ತೈಲ ಬೆಲೆ ಏರಿಕೆ ವಿರೋಧಿ ಸೈಕಲ್‌ ಜಾಥಾ

08:27 AM Jun 30, 2020 | Suhan S |

ಕಲಬುರಗಿ: ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ಸೈಕಲ್‌ ಜಾಥಾ ನಡೆಸಲಾಯಿತು. ಕಾಂಗ್ರೆಸ್‌ ಪಕ್ಷದ ಕಚೇರಿಯಿಂದ ನೆಹರು ಗಂಜ್‌, ತದನಂತರ ಜಿಲ್ಲಾಧಿಕಾರಿ ಕಚೇರಿ ವರೆಗೂ ಸೈಕಲ್‌ ಹಾಗೂ ಟಾಂಗಾದಲ್ಲಿ ತೆರಳಿ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಕೇಂದ್ರ ಸರ್ಕಾರ ತೈಲ ಬೆಲೆದಿನೆ-ದಿನೇ ಹೆಚ್ಚಳ ಮಾಡಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಪಕ್ಷದ ಮುಖಂಡರು ಟೀಕಿಸಿದರು. ಶಾಸಕರಾದ ಡಾ| ಅಜಯಸಿಂಗ್‌, ಖನೀಜಾ ಫಾತೀಮಾ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಕೆ.ಬಿ. ಶಾಣಪ್ಪ, ಮಾಜಿ ಶಾಸಕ ಬಿ.ಆರ್‌. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ, ಮುಖಂಡರಾದ ನೀಲಕಂಠರಾವ್‌ ಮೂಲಗೆ, ಜಗನ್ನಾಥ ಗೋಧಿ, ಶರಣು ಮೋದಿ, ನಾರಾಯಣರಾವ್‌ ಕಾಳೆ, ಫ‌ರಾಜ್‌ ಉಲ್‌ ಇಸ್ಲಾಂ, ಲತಾ ರವಿ ರಾಠೊಡ, ಡಾ| ಕಿರಣ ದೇಶಮುಖ, ಸಂತೋಷ ಪಾಟೀಲ ದುಧನಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next