Advertisement
ಪ್ರಯಾಣಪ್ರಯಾಣ ಆರಂಭಿಸಿ 7ನೇ ದಿನ ಶುಕ್ರವಾರ ಕುಂದಾಪುರ ತಲುಪಿದ ಈ ತಂಡ ಸುದಿನ ಜತೆ ಮಾತನಾಡಿತು. ತಂಡದಲ್ಲಿ ಈ ವರ್ಷವಷ್ಟೇ ಪದವಿ ಮುಗಿಸಿದ ಶ್ರೀಜತ್ ಹಾಗೂ ಸಜ್ಞಾ, ಈಗಾಗಲೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗದಲ್ಲಿರುವ ವಿಜಿತ್ ಹಾಗೂ ರಂಜಿತ್ ಇದ್ದರು. ವಿಜಿತ್ ಪೈಂಟಿಂಗ್ ವೃತ್ತಿ, ರಂಜಿತ್ ಮೆಕ್ಯಾನಿಕ್ ಕೆಲಸದವರು. ಎಲ್ಲರೂ ಕೇರಳದ ಮಲಪ್ಪುರಂನವರು. ಸರಿಸುಮಾರು 3 ಸಾವಿರ ಕಿ.ಮೀ.ಗಳ ಸೈಕಲ್‌ಯಾನ. ದಿನಕ್ಕೆ 100 ಕಿ.ಮೀ.ನಷ್ಟು ಹೋಗಬೇಕೆಂಬ ಲೆಕ್ಕಾಚಾರ. ಒಂದೂವರೆ ತಿಂಗಳಲ್ಲಿ ಗುರಿ ತಲುಪುವ ವಿಶ್ವಾಸ.
ಎಲ್ಲಿ ತಲುಪಿದರೋ ಅಲ್ಲೇ ಬಿಡಾರ. ಪರಿಚಿತರ ಮನೆ, ಸ್ನೇಹಿತರ ಮೂಲಕ ದೊರೆತ ವಿಳಾಸದ ಮನೆ ಅಥವಾ ಯಾರಾದರೂ ಸಹೃದಯಿಗಳ ಮನೆಯಲ್ಲಿ ವಾಸ್ತವ್ಯ. ದಾರಿ ಬದಿ ಸಿಕ್ಕ ಹೊಟೇಲ್‌ನ ಆಹಾರ. ಆಯಾಸವಾದಾಗ ತುಸು ವಿಶ್ರಾಂತಿ. ಸೈಕಲಲ್ಲಿ ಲೆಕ್ಕಾಚಾರದ ಬಟ್ಟೆ, ಬ್ಯಾಗ್, ಕುಡಿಯಲು ನೀರು ಅಷ್ಟೇ ಇವರ ಲಗೇಜು. ಇದನ್ನೂ ಓದಿ:ಲಿಂಗಾಯತ ಪ್ರತ್ಯೇಕ ಧರ್ಮ ಕುರಿತ ಹೋರಾಟವನ್ನು ಸದ್ಯಕ್ಕೆ ಮಾಡುವುದಿಲ್ಲ
Related Articles
ಅಷ್ಟೂ ದಿನಕ್ಕೆ ಪ್ರತಿಯೊಬ್ಬರಿಗೂ 10 ರಿಂದ 15 ಸಾವಿರ ರೂ.ಯಷ್ಟು ಖರ್ಚು ತಗಲುವ ಅಂದಾಜು. ಯಾಕಾಗಿ ಈ ಸಾಹಸ ಎಂದರೆ, ಯುವಜನತೆಗೆ ಪ್ರೇರಣೆಯಾಗಲಿ ಎನ್ನುವ ಕಾರಣಕ್ಕಾಗಿ ಸೈಕಲೇರಿದ್ದಾಗಿ ಹೇಳುತ್ತಾರೆ. ಕಾಶ್ಮೀರಕ್ಕೆ ಹೋಗಬೇಕೆನ್ನುವುದು ಬಹಳ ದಿನಗಳ ಕನಸು. ಸೈಕಲಲ್ಲೇ ಹೋಗಬೇಕು ಎನ್ನುವುದು ಸಾಹಸದ ಮನಸು. ಇದಕ್ಕಾಗಿ ಮನೆ ಮಂದಿ ಒಪ್ಪಿದ್ದೇ ಒಂದು ಸೊಗಸು. ಹಾಗಾಗಿ ಎಲ್ಲರ ಹಾರೈಕೆಯಿಂದಿಗೆ ಸಾಧಿಸುವ ಛಲದಿಂದ ನಾವು ಹೊರಟಿದ್ದೇವೆ. ಈವರೆಗೆ ಪ್ರಯಾಣದಲ್ಲಿ ಯಾವುದೇ ಆತಂಕ ಎದುರಾಗಿಲ್ಲ. ಏದುಸಿರು ಬಿಡುತ್ತಾ ಸೈಕಲ್ ತುಳಿಯುತ್ತಿಲ್ಲ. ಆರಾಮವಾಗಿ ಗುರಿ ತಲುಪುವ ವಿಶ್ವಾಸ ಹೊಂದಿದ್ದೇವೆ ಎನ್ನುತ್ತಾರೆ.
Advertisement
ಪ್ರೇರಣೆಯಾಗಲಿನಾನೊಬ್ಬ ಯುವತಿಯಾಗಿ ಇಂತಹ ಸಾಧನೆ ಮಾಡುವುದು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ. ಮನೋಸ್ಥೈರ್ಯ ತುಂಬಲಿ. ನನ್ನೊಬ್ಬಳ ಜತೆ ಈ ಮೂವರು ಯುವಕರೂ ಇರುವುದು ಸಾಧಕರಿಗೆ ಧೈರ್ಯ ತುಂಬಿ ಬರಲಿ. ನಾವು ನಿಶ್ಚಿತ ಗುರಿ ನಿಗದಿಯಂತೆಯೇ ತಲುಪಲಿದ್ದೇವೆ.
-ಸಜ್ಞಾ, ಕೇರಳ