Advertisement
ದೆಹಲಿ ವಿಶ್ವವಿದ್ಯಾನಿಲಯದ 35 ವರ್ಷದ ಪ್ರಾಧ್ಯಾಪಕರೊಬ್ಬರು ಇತ್ತೀಚೆಗೆ ಅನಾಮಧೇಯ ಸಂಖ್ಯೆಯಿಂದ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ವಿಡಿಯೋ ಕರೆಯನ್ನು ಸ್ವೀಕರಿಸಿದ್ದು, ಇನ್ನೊಂದು ಬದಿಯಲ್ಲಿ ನಗ್ನ ಹುಡುಗಿ ಕಾಣಿಸಿಕೊಂಡಿದ್ದು, ಅವರು ಕರೆಯನ್ನು ಡಿಸ್‌ಕನೆಕ್ಟ್ ಮಾಡುವ ಮೊದಲೇ, ಸೈಬರ್ ಕ್ರಿಮಿನಲ್‌ಗಳು ಪ್ರೊಫೆಸರ್ ಅಶ್ಲೀಲ ಕ್ಲಿಪ್ ವೀಕ್ಷಿಸುತ್ತಿರುವುದನ್ನು ತ್ವರಿತವಾಗಿ ವಿಡಿಯೋ ಮಾಡಿದರು ಮತ್ತು ಅದನ್ನಿಟ್ಟುಕೊಂಡು ಕಿರುಕುಳ ನೀಡಲು ಆರಂಭಿಸಿದರು.
Related Articles
Advertisement
ವಾಟ್ಸಾಪ್ ಮತ್ತು ಫೇಸ್ಬುಕ್ ಮೆಸೆಂಜರ್ ನಲ್ಲಿ ಇಂತಹ ಅನಾಮಧೇಯ ವೀಡಿಯೊ ಕರೆಗಳು ಭಾರತದಲ್ಲಿ ಹೆಚ್ಚುತ್ತಿದ್ದು ಮತ್ತು ಇಂತಹ ಚಟುವಟಿಕೆಗಳನ್ನು ತಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ಜಮ್ತಾರಾ ಮಾದರಿಯ ಮೊಬೈಲ್ ವಂಚನೆ ಪ್ರಕರಣಗಳನ್ನು ನೆನಪಿಸುವಂತೆ, ಮೇವಾತ್ ಪ್ರದೇಶದ ಕುಖ್ಯಾತ ಗ್ಯಾಂಗ್‌ಗಳು ಮತ್ತೆ ಕಾಣಿಸಿಕೊಂಡಿದ್ದು, ಇಂತಹ ವಾಟ್ಸಾಪ್ ವಿಡಿಯೋ ಕರೆಗಳ ಮೂಲಕ ಜನರನ್ನು ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸೈಬರ್ ತಜ್ಞರು ತಿಳಿಸಿದ್ದಾರೆ.
ಹರ್ಯಾಣದ ಮೇವಾತ್ ಪ್ರದೇಶದಲ್ಲಿ ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ, ಭಿವಾಡಿ, ತಿಜಾರಾ, ಕಿಶನ್‌ಗಢ್ ಬಾಸ್, ರಾಮ್‌ಗಢ್, ಅಲ್ವಾರ್‌ನ ಲಕ್ಷ್ಮಣಗಢ್ ಮತ್ತು ಭರತ್‌ಪುರದ ನಗರ, ಪಹಾಡಿ ಮತ್ತು ಗೋವಿಂದಗಢ್ ಕೂಡ ಈ ಸೈಬರ್ ದರೋಡೆಕೋರರು ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಪ್ರದೇಶಗಳಾಗಿವೆ.
ಅಕ್ಟೋಬರ್‌ನಲ್ಲಿ ದೆಹಲಿ ಪೊಲೀಸ್‌ನ ಅಪರಾಧ ವಿಭಾಗವು ರಾಜಸ್ಥಾನದ ಭರತ್‌ಪುರದಿಂದ ಅಂತರರಾಜ್ಯ ವಂಚನೆ ಗ್ಯಾಂಗ್‌ನ ಮಾಸ್ಟರ್‌ಮೈಂಡ್‌ನನ್ನು ಬಂಧಿಸಿತ್ತು.
ನಾಸಿರ್ (25) ನೇತೃತ್ವದ ತಂಡವು ಪ್ರತಿಷ್ಠಿತ ವ್ಯಕ್ತಿಗಳಿಗೆ ಅವರ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳೊಂದಿಗೆ ಬ್ಲ್ಯಾಕ್‌ಮೇಲ್ ಮಾಡಿ ನಂತರ ಹಣ ವಸೂಲಿ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಕನಿಷ್ಠ 36 ಗ್ಯಾಂಗ್‌ಗಳನ್ನು ಭೇದಿಸಲಾಗಿದ್ದು, 600 ಮಂದಿ ಆರೋಪಿಗಳನ್ನು ಅಲ್ವಾರ್ ಪೊಲೀಸರು ‘ಸೆಕ್ಟ್ರಾಶನ್’ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಇಂತಹ ಚಟುವಟಿಕೆಗಳಲ್ಲಿ ಉಲ್ಬಣ ಕಂಡುಬಂದಿದ್ದು,. ಸೈಬರ್ ಕ್ರಿಮಿನಲ್‌ಗಳು ರೆಕಾರ್ಡ್ ಮಾಡಿದ ಪೋರ್ನ್ ವೀಡಿಯೋಗಳನ್ನು ಚಲಾಯಿಸಿ, ರೆಕಾರ್ಡಿಂಗ್ ಅನ್ನು ಮರಳಿ ಕಳುಹಿಸಿ 10,000 ರೂಪಾಯಿಯಿಂದ ಕೆಲವು ಲಕ್ಷದವರೆಗೆ ಹಣ ಪೀಕಲಾಗುತ್ತಿತ್ತು. ನಿರಾಕರಿಸಿದರೆ, ಅವರು ನಿಮ್ಮ ಅಶ್ಲೀಲ ವೀಡಿಯೊವನ್ನು ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಾರೆ ಮತ್ತು ಮಾನಸಿಕ ಕಿರುಕುಳವು ನಂತರ ಪ್ರಾರಂಭವಾಗುತ್ತದೆ” ಎಂದು ಸ್ವತಂತ್ರ ಸೈಬರ್ ಭದ್ರತಾ ಸಂಶೋಧಕ ರಾಜಶೇಖರ್ ರಾಜಹರಿಯಾ ಐಎಎನ್ಎಸ್ ಗೆ ತಿಳಿಸಿದ್ದಾರೆ.
ನೀವು ಅನಾಮಧೇಯ ವಾಟ್ಸಾಪ್ ಅಥವಾ ಫೇಸ್‌ಬುಕ್ ಮೆಸೆಂಜರ್ ವಿಡಿಯೋ ಕರೆಯನ್ನು ಸ್ವೀಕರಿದರೂ ಸಹ, ನಿಮ್ಮ ಕ್ಯಾಮೆರಾವನ್ನು ಸ್ವಿಚ್ ಆಫ್ ಮಾಡಿ ಅಥವಾ ಕವರ್ ಮಾಡಿ” ಎಂದು ಅವರು ಸಲಹೆ ನೀಡಿದ್ದಾರೆ.