Advertisement
ಜಿಲ್ಲೆಯಲ್ಲಿ 81 ದಿನಗಳಲ್ಲಿ 370ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಒಂದು ಕೋ.ರೂ.ಗಳಿಗೂ ಅಧಿಕ ಮೊತ್ತದ ವಂಚನ ಪ್ರಕರಣವೊಂದು ಸಿಐಡಿ ತನಿಖೆಗೆ ಒಳಪಡುವ ಸಾಧ್ಯತೆ ಇದೆ. ಒಂದೇ ಸಮನೆ ಏರುತ್ತಿರುವ ಸೈಬರ್ ಪ್ರಕರಣಗಳನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿದೆ.
Related Articles
Advertisement
55ಕ್ಕೂ ಅಧಿಕ ಪ್ರಕರಣ ದಾಖಲು :
ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುವ ಸೆನ್ ಪೊಲೀಸ್ ಠಾಣೆಯಲ್ಲಿ 2020ರಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. 2021ರ ಜನವರಿಯಿಂದ ಮಾರ್ಚ್‌ವರೆಗೆ 55ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಎನ್‌ಸಿಆರ್ (ಗಂಭೀರವಲ್ಲದ) ಪ್ರಕರಣಗಳನ್ನು ಪೊಲೀಸ್ ಠಾಣಾ ಮಟ್ಟದಲ್ಲಿಯೇ ತನಿಖೆ ನಡೆಸಿ ಇತ್ಯರ್ಥ ಮಾಡಲಾಗುತ್ತದೆ.
ಅಮೆರಿಕಗೆ ನಿರಂತರ ಇ-ಮೇಲ್ :
ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಕೆಲವು ಪ್ರಕರಣಗಳನ್ನು ಭೇದಿಸಲು ಸ್ಥಳೀಯ ಪೊಲೀಸರಿಗೆ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂತಹ ಅಂತರ್ಜಾಲ ಸಂಸ್ಥೆಗಳ ಸಹಕಾರ ಅತ್ಯವಶ್ಯ. ಆದರೆ ಸಕಾಲದಲ್ಲಿ ಸಹಕಾರ ದೊರೆಯುತ್ತಿಲ್ಲ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. ವಾಟ್ಸ್‌ಆ್ಯಪ್‌ಗೆ ಸಂಬಂಧಿಸಿದ ಪ್ರತೀ ಪ್ರಕರಣಕ್ಕೂ ಅಮೆರಿಕದಲ್ಲಿರುವ ವಾಟ್ಸ್ ಆ್ಯಪ್ ಸಂಸ್ಥೆಗೆ ಇ-ಮೇಲ್ ಮೂಲಕ ಕೋರಿಕೆ ಸಲ್ಲಿಸಬೇಕು. ಅಲ್ಲಿಂದ ಉತ್ತರ ಬರುತ್ತದೆ. ಕೆಲವೊಮ್ಮೆ ಉತ್ತರ ಬರುವುದಿಲ್ಲ, ಬದಲಾಗಿ ಪ್ರಶ್ನೆಯೇ ಬರುತ್ತದೆ. ಮತ್ತೆ ಅದಕ್ಕೆ ಪ್ರತಿಕ್ರಿಯೆ ನೀಡಬೇಕು. ಇದು ಹಲವು ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಕ್ಲಪ್ತ ಸಮಯಕ್ಕೆ ಸರಿಯಾದ ಮಾಹಿತಿ ದೊರೆಯುವುದಿಲ್ಲ. ಇದು ತನಿಖೆಗೆ ತೊಡಕಾಗಿದೆ. ಕೆಲವು ಬಾರಿ ವಾಟ್ಸ್‌ಆ್ಯಪ್ ಸಂಸ್ಥೆಯವರು ಪೊಲೀಸರ ಎಫ್ಐಆರ್‌ನ್ನು ಪರಿಗಣಿಸದೆ ನ್ಯಾಯಾಲಯದ ಆದೇಶ ಕೇಳುತ್ತಾರೆ. ಇದರಿಂದಾಗಿಯೂ ವಿಳಂಬವಾಗುತ್ತದೆ ಎನ್ನುವುದು ಅಧಿಕಾರಿಗಳ ದೂರು.
ಸೈಬರ್ ಪ್ರಕರಣಗಳನ್ನು ಕೂಡ ಇಲಾಖೆ ಗಂಭೀರವಾಗಿ ಪರಿಗಣಿಸಿ ಹಲವು ಪ್ರಕರಣಗಳನ್ನು ಭೇದಿಸಿದೆ. ಸೈಬರ್ ಠಾಣೆಗೆ ಲ್ಯಾಬ್‌ನ್ನು ಒದಗಿಸಲಾಗಿದೆ. ಅಲ್ಲದೆ ಕೆಲವು ಸಿಬಂದಿಗೆ ಲೆವೆಲ್ 3 ತರಬೇತಿ ಕೂಡ ನೀಡಲಾಗಿದ್ದು ಅವರು ಪರಿಣತರಾಗಿದ್ದಾರೆ. –ಬಿ.ಎಂ. ಲಕ್ಷ್ಮೀಪ್ರಸಾದ್, ಪೊಲೀಸ್ ವರಿಷ್ಠಾಧಿಕಾರಿಗಳು, ದ.ಕ. ಜಿಲ್ಲೆ