Advertisement

Cyber fraud : ಲಿಂಕ್‌ ಕ್ಲಿಕ್‌ ಮಾಡಿಸಿ ಗೃಹಿಣಿಗೆ 3.30 ಲಕ್ಷ ರೂ. ವಂಚನೆ

01:07 PM Sep 17, 2023 | Team Udayavani |

ಬೆಂಗಳೂರು: ಬ್ಯಾಂಕ್‌ ಖಾತೆ ಸ್ಥಗಿತಗೊಳ್ಳಲಿದ್ದು, ನಾವು ಕಳುಹಿಸಿರುವ ಲಿಂಕ್‌ ಕ್ಲಿಕ್‌ ಮಾಡುವಂತೆ ಗೃಹಿಣಿಗೆ ಸಂದೇಶ ಕಳುಹಿಸಿದ ಸೈಬರ್‌ ಕಳ್ಳರು 3.30 ಲಕ್ಷ ರೂ. ವಂಚಿಸಿದ್ದಾರೆ.

Advertisement

ಅಮೃತಹಳ್ಳಿಯ ನಿವಾಸಿ ಅಂಬಿಕಾ (37) ವಂಚನೆಗೊಳಗಾದವರು.

ಅಪರಿಚಿತ ನಂಬರ್‌ನಿಂದ ಸೆ.12ರಂದು ಅಂಬಿಕಾ ವಾಟ್ಸ್‌ಆ್ಯಪ್‌ ನಂಬರ್‌ಗೆ “ನಿಮ್ಮ ಬ್ಯಾಂಕ್‌ ಖಾತೆ ಸ್ಥಗಿತಗೊಳ್ಳಲಿದೆ’ ಎಂದು ಸಂದೇಶ ಬಂದಿತ್ತು. ಸಂದೇಶದಲ್ಲಿ ಕಳುಹಿಸಿರುವ ಲಿಂಕ್‌ ಕ್ಲಿಕ್‌ ಮಾಡಿ ಎಂದು ಸೂಚಿಸಲಾಗಿತ್ತು. ಬ್ಯಾಂಕ್‌ ಸಿಬ್ಬಂದಿ ಸಂದೇಶ ಕಳುಹಿಸಿರಬಹುದು ಎಂದು ಭಾವಿಸಿದ ಅಂಬಿಕಾ ಲಿಂಕ್‌ ಅನ್ನು ಕ್ಲಿಕ್‌ ಮಾಡಿದ್ದರು. ಇದಾದ ಕೆಲ ಹೊತ್ತಿನಲ್ಲಿ ಅವರ ಬ್ಯಾಂಕ್‌ ಖಾತೆಯಿಂದ 3.30 ಲಕ್ಷ ರೂ. ಕಡಿತಗೊಂಡಿತ್ತು. ಅನುಮಾನ ಬಂದು ಅಂಬಿಕಾ ಬ್ಯಾಂಕ್‌ ಸಿಬ್ಬಂದಿ ಸಂಪರ್ಕಿಸಿ ಈ ಕುರಿತು ವಿಚಾರಿಸಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next