Advertisement

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

11:24 AM Nov 06, 2024 | Team Udayavani |

ಬೆಂಗಳೂರು: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರಿಸ್‌ ಮಾಲಿಕ ಮುಖೇಶ್‌ ಅಂಬಾನಿ ಡೀಪ್‌ಫೇಕ್‌ ವಿಡಿಯೋ ಮತ್ತು ಫೋಟೋ ಬಳಸಿ ಸೈಬರ್‌ ವಂಚಕರು ಮಹಿಳೆ ಸೇರಿ ಇಬ್ಬರಿಂದ 86 ಲಕ್ಷ ರೂ. ದೋಚಿರುವ ವಿಚಾರ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮಹಿಳೆಗೆ 63.7 ಲಕ್ಷ ರೂ.  ವಂಚನೆ: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಡೀಪ್‌ ಫೇಕ್‌ ಬಳಸಿ ಎಫ್ಎಕ್ಸ್‌ ರೋಡ್‌ ಫ್ಲಾಟ್‌ ಫಾರ್ಮ್ ಟ್ರೇಡಿಂಗ್‌ ಬಗ್ಗೆ ನಾರಾಯಣಮೂರ್ತಿ ಅವರೇ ಮಾಹಿತಿ ನೀಡಿದಂತೆ ವಂಚಕರು ವಿಡಿಯೋ ಸೃಷ್ಟಿಸಿ ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ, ಈ ಸಂದೇಶವನ್ನು ಬನಶಂಕರಿ ನಿವಾಸಿ ವೀಣಾ(57) ಎಂಬವರ ಇ-ಮೇಲ್‌ ವಿಳಾಸಕ್ಕೂ ಕಳುಹಿಸಿದ್ದು, ನಮ್ಮ ಫ್ಲಾಟ್‌ ಫಾರ್ಮ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ಸಿಗುತ್ತದೆ ಎಂದು ನಂಬಿಸಿದ್ದಾರೆ. ಅದನ್ನು ನಂಬಿದ ವೀಣಾ ಮೊದಲಿಗೆ 1.39 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ 8 ಸಾವಿರ ಲಾಭ ನೀಡಿದ್ದಾರೆ. ಇದೇ ರೀತಿ ಹಂತ -ಹಂತವಾಗಿ 6.7 ಲಕ್ಷ ರೂ. ವರ್ಗಾಯಿಸಿಕೊಂಡು ಬಳಿಕ ವಂಚಿಸಿದ್ದಾರೆ.

ಮತ್ತೂಂದು ವೇದಿಕೆಯಲ್ಲಿ 57 ಲಕ್ಷ ರೂ. ವಂಚನೆ!: ಕೆಲ ದಿನಗಳ ಬಳಿಕ ವರ್ಕ್‌ ಫ್ರಮ್‌ ಹೋಮ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಜಾಹೀರಾತು ಗಮನಿಸಿದ ವೀಣಾ, ಆ ಲಿಂಕ್‌ ಕ್ಲಿಕ್‌ ಮಾಡಿದ್ದಾರೆ. ಆಗ ಟೆಲಿಗ್ರಾಮ್‌ ಮೂಲಕ ಸಂಪರ್ಕಿಸಿದ ವಂಚಕರು, ಎಎಸ್‌ ಒಎಸ್‌ ಫ್ಲಾಟ್‌ ಫಾರ್ಮ್ ನಲ್ಲಿ ಪ್ರಾಡಕ್ಟ್ ಗಳಿಗೆ ರೇಟಿಂಗ್‌ ನೀಡಿ ಹಣ ಸಂಪಾದಿಸಬಹುದು ಎಂದು ಹೇಳಿ ಆರಂಭದಲ್ಲಿ ಲಾಭಾಂಶ ನೀಡಿ ಬಳಿಕ ಮಹಿಳೆಯಿಂದ ಹಂತ-ಹಂತವಾಗಿ 57 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ವೀಣಾ ದಕ್ಷಿಣ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 ಲಕ್ಷ ರೂ. ವಂಚನೆ: ಮತ್ತೂಂದು ಪ್ರಕರಣದಲ್ಲಿ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ರಿಯಲ್ಸ್‌ ಇಂಡಸ್ಟ್ರಿಸ್‌ ಮಾಲೀಕ ಮುಖೇಶ್‌ ಅಂಬಾನಿ ಡೀಪ್‌ ಫೇಕ್‌ ವಿಡಿಯೋ ಮತ್ತು ಫೋಟೋ ಬಳಸಿ ನಿವೃತ್ತ ಅಧಿಕಾರಿ, ಆನೇಕಲ್‌ ನಿವಾಸಿ ಅಶೋಕ್‌ ಕುಮಾರ್‌ ಎಂಬವರಿಗೆ 19 ಲಕ್ಷ ರೂ. ವಂಚಿಸಲಾಗಿದೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಫೇಸ್‌ಬುಕ್‌ನಲ್ಲಿ ನಾರಾಯಣಮೂರ್ತಿ ಹಾಗೂ ಮುಖೇಶ್‌ ಅಂಬಾನಿ ಡೀಪ್‌ ಪೇಕ್‌ ಬಳಸಿ ಎಫ್ಎಕ್ಸ್‌ ರೋಡ್‌ ಫ್ಲಾಟ್‌ ಫಾರ್ಮ್ ಟ್ರೇಡಿಂಗ್‌ ಬಗ್ಗೆ ಮಾಹಿತಿ ನೀಡಲಾಗಿತ್ತು. ಅದನ್ನು ಗಮನಿಸಿದ ಅಶೋಕ್‌ ಕುಮಾರ್‌, ಲಿಂಕ್‌ ಕ್ಲಿಕ್‌ ಮಾಡಿ, ಅದರ ಮ್ಯಾನೆಜರ್‌ಗೆ ಕರೆ ಮಾಡಿ ಮಾತನಾಡಿದ್ದಾರೆ. ಬಳಿಕ ಹಂತ-ಹಂತವಾಗಿ 19 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ಯಾವುದೇ ಲಾಭಾಂಶ ಕೊಡದೆ ವಂಚಿಸಿದ್ದಾರೆ. ಈ ಸಂಬಂಧ ಅಶೋಕ್‌ ಕುಮಾರ್‌ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

ಈ ಸಂಬಂಧ ಬೆಂಗಳೂರು ಗ್ರಾಮಾಂತರ ಸೆನ್‌ ಪೊಲೀಸ್‌ ಠಾಣೆಗೆ ಅಶೋಕ್‌ ದೂರು ಕೊಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next