Advertisement

Cyber Crime: ಸೈಬರ್‌ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ

05:26 AM Nov 28, 2024 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಸೈಬರ್‌ ಅಪರಾಧಗಳಲ್ಲಿ ಭಾಗಿಯಾಗಿದ್ದ ಸುಮಾರು 6.69 ಲಕ್ಷ ಸಿಮ್‌ಕಾರ್ಡ್‌ ಗಳನ್ನು ಮತ್ತು 1.32 ಲಕ್ಷ ಐಎಮ್‌ಐಎಗಳನ್ನು ನಿರ್ಬಂಧಿಸಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ.

Advertisement

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖೀತ ರೂಪದಲ್ಲಿ ಉತ್ತರಿಸಿದ ಗೃಹ ಖಾತೆ ಸಹಾಯಕ ಸಚಿವ ಬಂಡಿ ಸಂಜಯ್‌ ಕುಮಾರ್‌, “ಭಾರತೀಯ ಮೊಬೈಲ್‌ ಸಂಖ್ಯೆಗಳನ್ನು ಬಳಸಿ ಅಂತಾರಾಷ್ಟ್ರೀಯ ಸೈಬರ್‌ ಚೋರರು ಜನರಿಗೆ ನಕಲಿ ಕರೆ ಮಾಡುತ್ತಿದ್ದಾರೆ.

ಆದರೆ ಅಂತಹ ಸಂಖ್ಯೆಗಳನ್ನು ನಿರ್ಬಂಧಿಸಲು ಸರಕಾರ ಹಾಗೂ ಟೆಲಿಕಾಂ ಕಂಪೆನಿಗಳು ಸೂಕ್ತ ವ್ಯವಸ್ಥೆ ನಿರ್ಮಿಸಿವೆ. ಮತ್ತು ನ.15, 2024ರ ವರೆಗೆ ಪೊಲೀಸರ ವರದಿಯನುಸಾರ ಒಟ್ಟು 6.69 ಲಕ್ಷ ಸಿಮ್‌ ನಿರ್ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next