Advertisement

ಚೀನ ಸೈಬರ್‌ ದಾಳಿ : ಮುಂಬಯಿ ವಿದ್ಯುತ್‌ ವ್ಯತ್ಯಯ ಕುತಂತ್ರ

07:09 AM Mar 02, 2021 | Team Udayavani |

ಹೊಸದಿಲ್ಲಿ: ಗಡಿ ವಿಚಾರದಲ್ಲಿ 2017ರಿಂದೀಚೆಗೆ ಜಗಳ ತೆಗೆಯುತ್ತಲೇ ಬಂದಿರುವ ಚೀನ ಇತ್ತೀಚೆಗೆ ಭಾರತೀಯ ಅಂತರ್ಜಾಲ ಮತ್ತು ಇಲಾಖಾ ಮಟ್ಟದ ಲ್ಯಾನ್‌ (ಲೋಕಲ್‌ ಏರಿಯಾ ನೆಟ್‌ವರ್ಕ್‌) ವ್ಯವಸ್ಥೆಗಳ ಮೇಲೂ ಸೈಬರ್‌ ದಾಳಿ ನಡೆಸಲಾರಂಭಿಸಿದೆ ಎಂಬ ಆತಂಕಕಾರಿ ವಿಚಾರವನ್ನು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

Advertisement

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಂಬಯಿಯಲ್ಲಿ ಉಂಟಾಗಿದ್ದ ಒಂದು ದಿನದ ವಿದ್ಯುತ್‌ ವ್ಯತ್ಯಯಕ್ಕೆ ಚೀನದ ಇಂಥ ಸೈಬರ್‌ ದಾಳಿಯೇ ಕಾರಣ ಎಂದು ಅದು ಹೇಳಿದೆ.

ಏನಾಗಿತ್ತು ಮುಂಬಯಿಯಲ್ಲಿ?
ಕಳೆದ ವರ್ಷ ಅ. 12ರಂದು ಮುಂಬಯಿಯಲ್ಲಿ ಭಾರೀ ಮಟ್ಟದ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಬೆಳಗ್ಗೆ 10ಕ್ಕೆ ವಿದ್ಯುತ್‌ ನಿಲುಗಡೆಯಾಗಿ ಜನರಿಗೆ ತೀವ್ರ ತೊಂದರೆಯಾಗಿತ್ತು. ಅನಂತರ ಮಹಾರಾಷ್ಟ್ರ ವಿದ್ಯುತ್‌ ಇಲಾಖೆಯ ಅಧಿಕಾರಿಗಳು, ತಂತ್ರಜ್ಞರು ಅವಿರತವಾಗಿ ಶ್ರಮಿಸಿ, ಸಮಸ್ಯೆಯನ್ನು ಸರಿಪಡಿಸಿದ್ದರು.

ನಮ್ಮವರಿಗೂ ಮನವರಿಕೆ
ಮುಂಬಯಿಯ ಕಂಪ್ಯೂಟರ್‌ ಆಧಾರಿತ ವಿದ್ಯುತ್‌ ಸರಬರಾಜು ವ್ಯವಸ್ಥೆಯ ಮೇಲೆ ಸೈಬರ್‌ ದಾಳಿಯಾಗಿರಬಹುದೇ ಎಂಬ ಗುಮಾನಿ ಸಮಸ್ಯೆ ನಿವಾರಿಸಿದ ತಂತ್ರಜ್ಞರನ್ನು ಕಾಡುತ್ತಿತ್ತು. ಥಾಣೆ ಜಿಲ್ಲೆಯ ಪಾಗಾ ಎಂಬಲ್ಲಿರುವ ವಿದ್ಯುತ್‌ ಇಲಾಖೆಯ ಪವರ್‌ ಸ್ಟೇಷನ್‌ ಮೂಲಕ ವೈರಸ್‌ಗಳನ್ನು ಹರಿಬಿಡಲಾಗಿದ್ದು ಮಹಾರಾಷ್ಟ್ರ ಸೈಬರ್‌ ಇಲಾಖೆ ನಡೆಸಿದ ತನಿಖೆಯಲ್ಲಿ ಪತ್ತೆಯಾಗಿತ್ತು.

ವರದಿ ಹೇಳುವುದೇನು?
ಅಮೆರಿಕದ “ರೆಕಾರ್ಡೆಡ್‌ ಫ್ಯೂಚರ್‌’ ಎಂಬ ಸಂಸ್ಥೆ ಮುಂಬಯಿಯಲ್ಲಿ ಆದ ವಿದ್ಯುತ್‌ ವ್ಯತ್ಯಯಕ್ಕೆ ಚೀನದ ಸೈಬರ್‌ ದಾಳಿಯೇ ಕಾರಣ ಎಂಬುದನ್ನು ಪತ್ತೆ ಹಚ್ಚಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಹೇಳಿದೆ. ಚೀನದ ಸರಕಾರಿ ಬೆಂಬಲಿತ ಹ್ಯಾಕರ್‌ಗಳು ಅನೇಕ ಮಾಲ್‌ವೇರ್‌ಗಳನ್ನು ಮಹಾರಾಷ್ಟ್ರದ ವಿದ್ಯುತ್‌ ಇಲಾಖೆಯ ಕಂಪ್ಯೂಟರ್‌ಗಳಿಗೆ ವರ್ಗಾಯಿಸಿದ್ದು, ಅವುಗಳಲ್ಲಿ ಕೆಲವು ಕೆಲಸ ಮಾಡಿವೆ. ಅದ ರಿಂದ ಮುಂಬಯಿಯ ವಿದ್ಯುತ್‌ ಸರಬ ರಾಜು ವ್ಯವಸ್ಥೆಗೆ ಮಾತ್ರ ತೊಂದರೆಯಾಯಿತು ಎಂದು ಹೇಳಲಾಗಿದೆ.

Advertisement

ಲಸಿಕೆ ತಯಾರಕರೂ ಗುರಿ
ಕೊರೊನಾ ಲಸಿಕೆ ತಯಾರಕ ಸೀರಂ ಸಂಸ್ಥೆ ಮತ್ತು ಭಾರತ್‌ ಬಯೋಟೆಕ್‌ ಮೇಲೂ ಸೈಬರ್‌ ದಾಳಿ ನಡೆಸಲು ಚೀನದ ಹ್ಯಾಕರ್ಸ್‌ ಸಂಚು ರೂಪಿಸಿದ್ದರು ಎಂಬುದೂ ಬೆಳಕಿಗೆ ಬಂದಿದೆ. ಚೀನದ ಎಪಿಟಿ10 ಎಂಬ ಗ್ರೂಪ್‌ ಈ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಮುಂದಾಗಿತ್ತು ಎಂದು ಹೇಳಲಾಗಿದೆ.

ದೇಶದ ಪವರ್‌ ಸಿಸ್ಟಂ ಆಪರೇಷನ್‌ ಕಾರ್ಪೊರೇಷನ್‌ (ಪೊಸೊಕೊ) ಸದೃಢವಾಗಿದ್ದು, ಈ ವರೆಗೆ ಪೊಸೊಕೊದ ಡೇಟಾದಲ್ಲಾಗಲಿ, ನಿರ್ವಹಣ ವ್ಯವಸ್ಥೆಯಲ್ಲಾಗಲಿ ಮಾಲ್‌ವೇರ್‌ನಿಂದ ತೊಂದರೆ ಆಗಿಲ್ಲ.
– ಕೇಂದ್ರ ಇಂಧನ ಸಚಿವಾಲಯದ ಪ್ರಕಟನೆ

Advertisement

Udayavani is now on Telegram. Click here to join our channel and stay updated with the latest news.

Next