Advertisement

Iran ಗ್ಯಾಸ್‌ ಸ್ಟೇಷನ್‌ಗಳ ಮೇಲೆ ಹ್ಯಾಕರ್‌ಗಳ ಸೈಬರ್‌ ಅಟ್ಯಾಕ್‌

12:56 AM Dec 19, 2023 | Team Udayavani |

ಟೆಹ್ರಾನ್‌: ಸೈಬರ್‌ ದಾಳಿಯ ಹಿನ್ನೆಲೆಯಲ್ಲಿ ಇರಾನ್‌ನ ಶೇ.70ರಷ್ಟು ಗ್ಯಾಸ್‌ ಸ್ಟೇಶನ್‌ಗಳು ಸೋಮವಾರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು. ಗ್ಯಾಸ್‌ ಸ್ಟೇಶನ್‌ಗಳಲ್ಲಿ ಆದ ಸಮಸ್ಯೆಗೆ ಸಾಫ್ಟ್ವೇರ್‌ ತೊಂದರೆಯೇ ಕಾರಣ. ಗ್ಯಾಸ್‌ ಸ್ಟೇಶನ್‌ಗಳು ಇನ್ನೂ ಕಾರ್ಯಚರಿಸುತ್ತಿದ್ದು, ಜನರು ಗ್ಯಾಸ್‌ಗಾಗಿ ಮುಗಿಬೀಳದೇ, ಶಾಂತರೀತಿಯಲ್ಲಿ ವರ್ತಿಸುವಂತೆ ಇರಾನ್‌ ತನ್ನ ನಾಗರಿಕರಿಗೆ ಮನವಿ ಮಾಡಿದೆ. ಗೊಂಜೆಶೆR ದರಾಂಡೆ ಅಥವಾ ಪ್ರಿಡೇಟರಿ ಸ್ಪೇರೊ ಎನ್ನುವ ಹ್ಯಾಕರ್‌ಗಳ ಗುಂಪು ಈ ಸೈಬರ್‌ ದಾಳಿ ನಡೆಸಿರಬಹುದು ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಇರಾನ್‌ನಲ್ಲಿ ಒಟ್ಟು 33,000 ಗ್ಯಾಸ್‌ ಸ್ಟೇಶನ್‌ಗಳಿವೆ. ಈ ಪೈಕಿ ಶೇ.30ರಷ್ಟು ಗ್ಯಾಸ್‌ ಸ್ಟೇಶನ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಇರಾನ್‌ ಇಂಧನ ಸಚಿವಾಲಯ ಮಾಹಿತಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next