Advertisement
ಅಂಕಿಅಂಶಗಳ ಪ್ರಕಾರ ಎ. 30ರ ವರೆಗೆ ಮುಂಬಯಿ ಪೊಲೀಸರು ನಗರದಾದ್ಯಂತ 777 ಸೈಬರ್ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದು, ರಾಜ್ಯ ಸೈಬರ್ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಆನ್‌ಲೈನ್ ಹಣಕಾಸು ವಹಿವಾಟು ಮಾಡುವಾಗ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಮೊದಲ ನಾಲ್ಕು ತಿಂಗಳಲ್ಲಿ ದಾಖಲಾದ ಹೆಚ್ಚಿನ ಪ್ರಕರಣಗಳು ಕ್ರೆಡಿಟ್ ಕಾರ್ಡ್ ಮತ್ತು ಆನ್‌ಲೈನ್ ವಂಚನೆಗಳಿಗೆ ಸಂಬಂಧಿಸಿದ್ದಾಗಿದ್ದು, ಇಂತಹ 181 ಅಪರಾಧಗಳು ದಾಖಲಾಗಿವೆ. 78 ಪ್ರಕರಣಗಳು ಅಶ್ಲೀಲ ಎಸ್‌ಎಂಎಸ್ ಮತ್ತು ಇ-ಮೇಲ್ ಪ್ರಕರಣಗಳಾಗಿವೆ. ಅಲ್ಲದೆ ಮಾರ್ಫಿಂಗ್ ಇ-ಮೇಲ್‌ಗಳು ಮತ್ತು ನಕಲಿ ಸೋಶಿಯಲ್ ಮೀಡಿಯಾ ಪ್ರೊಫೈಲಿಂಗ್‌ನ 18 ಪ್ರಕರಣಗಳು, ಫಿಶಿಂಗ್‌ನ ನಾಲ್ಕು ಪ್ರಕರಣಗಳು, ಮೂಲ ಕೋಡ್ ಅನ್ನು ಹಾಳು ಮಾಡಿದ ಎರಡು ಪ್ರಕರಣಗಳು ಹಾಗೂ ಇತರ ವಿಭಾಗಗಳಲ್ಲಿ ಬರುವ 493 ಅಪರಾಧಗಳನ್ನು ಎಪ್ರಿಲ್ ಅಂತ್ಯದವರೆಗೆ ದಾಖಲಿಸಲಾಗಿದೆ.
Related Articles
Advertisement
ಒಂದೆರಡು ದಿನಗಳ ಹಿಂದೆ ದಕ್ಷಿಣ ಮುಂಬಯಿಯ ಉದ್ಯಮಿಯೊಬ್ಬರು 1.7 ಕೋಟಿ ರೂ. ಗಳ ವಂಚನೆಗೊಳಗಾಗಿದ್ದರು. ವಂಚಕರು ಕೋವಿಡ್ ಲಸಿಕೆಗಾಗಿ ಸುದ್ದಿಯಲ್ಲಿರುವ ಅಂತಾರಾಷ್ಟ್ರೀಯ ಔಷಧ ಕಂ±ಪೆನಿಯೊಂದರ ಖರೀದಿ ವ್ಯವಸ್ಥಾಪಕನೆಂದು ಹೇಳಿ ಕ್ಯಾನ್ಸರ್ ಔಷಧಕ್ಕಾಗಿ ಕಚ್ಚಾ ವಸ್ತುಗಳ ಮೇಲೆ ಹೂಡಿಕೆ ಮಾಡಲು ಉದ್ಯಮಿಗಳಿಗೆ ಆಮಿಷವೊಡ್ಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೋವಿಡ್ ಸಂಬಂಧಿತ ಔಷಧಗಳ ಕೊರತೆಯೊಂದಿಗೆ ರಾಜ್ಯಾದ್ಯಂತ ಹಲವಾರು ಮಂದಿ ಆನ್‌ಲೈನ್ ವಂಚನೆಗೊಳಗಾಗಿದ್ದು, ಈ ಬಗ್ಗೆ ನಾಗರಿಕರು ಎಚ್ಚರಿಕೆ ವಹಿಸುವಂತೆ ಸೈಬರ್ ಕ್ರೈಂ ವಿಭಾಗದ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.