ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಮಹಿಳೆಯೊಬ್ಬರನ್ನು ಕೊಲೆಗೈದು ದರೋಡೆ ಮಾಡಿದ ಪ್ರಕರಣದಲ್ಲಿ ಸೈನೈಡ್ ಮಲ್ಲಿಕಾಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆ ರದ್ದು ಮಾಡಿರುವ ಹೈಕೋರ್ಟ್, ಮತ್ತೂಮ್ಮೆ ವಿಚಾರಣೆ ನಡೆಸುವಂತೆ ಅಧೀನ ನ್ಯಾಯಾಲಯಕ್ಕೆ ಆದೇಶಿಸಿದೆ. ಮಲ್ಲಿಕಾಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಕಾಯಂಗೊಳಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಇತ್ಯರ್ಥ ಪಡಿಸಿದ ನ್ಯಾ. ರವಿ ಮಳಿಮs… ಹಾಗೂ ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಸೈನೈಡ್ ಮಲ್ಲಿಕಾಳೇ ಕೊಲೆಮಾಡಿದ್ದಾಳೆ ಎಂಬುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳ ಕೊರತೆಯಿದೆ. ಹೀಗಾಗಿ ಅಧೀನ ನ್ಯಾಯಾಲಯ ಅಕ್ಟೋಬರ್ 30ರೊಳಗೆ ವಿಚಾರಣೆಗೆ ಪರಿಗಣಿಸಬೇಕು. ಈ ವೇಳೆ ಪ್ರಾಸಿಕ್ಯೂಶನ್ ಕೊಲೆಯಾದ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯಾಧಿಕಾರಿಯನ್ನು ಪಾಟಿ ಸವಾಲಿಗೆ ಒಳಪಡಿಸಬೇಕು. ಜನವರಿ 31ರೊಳಗೆ ಅರ್ಜಿ ಇತ್ಯರ್ಥಗೊಳಿಸಿ ಸೂಕ್ತ
ಆದೇಶ ಹೊರಡಿಸಬೇಕು ಎಂದು ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು?: ನಟೋರಿಯಸ್ ಸೀರಿಯಲ್ ಕಿಲ್ಲರ್ ಸೈನೈಡ್ ಮಲ್ಲಿಕಾ ಅಲಿಯಾಸ್ ಸಾವಿತ್ರಮ್ಮ, 2007ರ ಡಿಸೆಂಬರ್ 28ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾವ್ಯಾಪ್ತಿಯಲ್ಲಿ ಕೆ. ನಾಗಲಕ್ಷ್ಮೀ ಎಂಬ ಮಹಿಳೆಯನ್ನು ಕತ್ತುಬಿಗಿದು ಕೊಲೆಗೈದು ಚಿನ್ನಾಭರಣ ದೋಚಿದ್ದಳು. ಈ ಸಂಬಂಧ ಪೊಲೀಸರು ಆಕೆಯ ವಿರುದಟಛಿ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಆರೋಪಿಯನ್ನಾಗಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಸೈನೆಡ್ ಮಲ್ಲಿಕಾಗೆ ಮರಣದಂಡನೆ ಹಾಗೂ 5 ಸಾವಿರ ದಂಡ ವಿಧಿಸಿ 2012 ಮಾರ್ಚ್ 30ರಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿದ್ದ ಮಲ್ಲಿಕಾ, ಅಧೀನ ನ್ಯಾಯಾಲಯ ಕೊಲೆಯಾದ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರನ್ನು ಪಾಟೀ ಸವಾಲಿಗೆ ಒಳಪಡಿಸದೇ ಆದೇಶ ನೀಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಳು.
2008ರಲ್ಲಿ ಕಲಾಸಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದ ಸೀರಿಯಲ್ ಕಿಲ್ಲರ್ ಮಲ್ಲಿಕಾ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿತ್ತು. ರಾಜಧಾನಿ, ತುಮಕೂರು,ಸೇರಿದಂತೆ ವಿವಿಧೆಡೆ ಮಹಿಳೆಯರನ್ನು ಕೊಲೆಗೈದಿದ್ದ ಹಂತಕಿ ಮಲ್ಲಿಕಾ, ಮಹಿಳೆಯರನ್ನು ಕೊಲ್ಲಲು ಸೈನೈಡ್ ಬಳಸುತ್ತಿದ್ದಳು ಎಂಬ ಸಂಗತಿ ಪೊಲೀಸರಿಗೂ ಬೆಚ್ಚಿಬೀಳುವಂತೆ ಮಾಡಿತ್ತು. ಒಂಟಿ ಮಹಿಳೆಯರನ್ನು ಪರಿಚಯ
ಮಾಡಿಕೊಳ್ಳುತ್ತಿದ್ದ ಮಲ್ಲಿಕಾ, ಅವರಿಗೆ ಗೊತ್ತಾಗದಂತೆ ಸೈನೈಡ್ ಉಣಿಸಿ ಕೊಲೆಗೈದು, ಚಿನ್ನಾಭರಣ ದೋಚುತ್ತಿದ್ದಳು. ಹೀಗಾಗಿಯೇ ಆಕೆಗೆ ಸೈನೈಡ್ ಮಲ್ಲಿಕಾ ಎಂದು ಕರೆಯಲಾಗುತ್ತಿತ್ತು.