Advertisement

3ನೇ ದಿನವೂ ಭಾರತದ ಪದಕ ಬೇಟೆ; ರಾಹುಲ್, ಸತೀಶ್ ಗೆ ಚಿನ್ನ

05:16 PM Apr 07, 2018 | Team Udayavani |

ಗೋಲ್ಡ್ ಕೋಸ್ಟ್: 21ನೇ ಕಾಮನ್ ವೆಲ್ತ್ ಕೂಟದ 3ನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದ್ದು, ಶನಿವಾರ 25ರ ಹರೆಯದ ತಮಿಳುನಾಡಿನ ವೇಟ್ ಲಿಫ್ಟರ್ ಸತೀಶ್ ಶಿವಲಿಂಗಂ(ಇದನ್ನೂ ಓದಿ: ಕಾಮನ್ವೆಲ್ತ್‌ ಗೇಮ್ಸ್‌: ಭಾರತಕ್ಕೆ 3 ನೇ ಚಿನ್ನದ ಪದಕ) 77ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಬೆನ್ನಲ್ಲೇ, ತಮಿಳುನಾಡಿನ ರಾಗಾಲಾ ವೆಂಕಟ್ ರಾಹುಲ್ 85 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತ ನಾಲ್ಕು ಚಿನ್ನದ ಪದಕ ಪಡೆದಂತಾಗಿದೆ.

Advertisement

ಕಾಮನ್ ವೆಲ್ತ್ ಕೂಟದಲ್ಲಿ ಭಾರತ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 4 ಚಿನ್ನ ಸೇರಿದಂತೆ ಆರು ಪದಕಗಳನ್ನು ಪಡೆದಂತಾಗಿದೆ. ಕಾಮನ್ ವೆಲ್ತ್ ಕೂಟದ ಮೊದಲ ದಿನ ಚಿನ್ನ, ಒಂದು ಬೆಳ್ಳಿ ಭಾರತದ ಪಾಲಾಗಿತ್ತು. 2ನೇ ದಿನವಾದ ಶುಕ್ರವಾರ ಒಂದು ಚಿನ್ನ, ಒಂದು ಕಂಚು ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next