Advertisement

ವಿಶ್ವಕಪ್ ಸೆಮಿ ಸ್ಥಾನ ಕಸಿದ ‘ನೋ ಬಾಲ್’; ಮಿಥಾಲಿ ಪಡೆಯ ವಿಶ್ವಕಪ್ ಅಭಿಯಾನ ಅಂತ್ಯ!

02:23 PM Mar 27, 2022 | Team Udayavani |

ಕ್ರೈಸ್ಟ್ ಚರ್ಚ್: ಕೊನೆಯ ಎಸೆತದವರೆಗೆ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ಜಯ ಸಾಧಿಸಿದೆ. ಕೊನೆಯ ಎಸೆತದಲ್ಲಿ ಸೋಲನುಭವಿಸಿದ ಮಿಥಾಲಿ ಪಡೆಯ ವಿಶ್ವಕಪ್ ಅಭಿಯಾನ ಅಂತ್ಯಗೊಂಡಿತು.

Advertisement

ಸೆಮಿ ಫೈನಲ್ ಪ್ರವೇಶಕ್ಕೆ ಭಾರತ ತಂಡ ಗೆಲ್ಲಲೇಬೇಕಿತ್ತು. ಆದರೆ ದಕ್ಷಿಣ ಆಫ್ರಿಕಾದ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಸೆಮಿ ಫೈನಲ್ ಪ್ರವೇಶ ಪಡೆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಏಳು ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 275 ರನ್ ಗಳಿಸಿ ಜಯ ಸಾಧಿಸಿತು.

ರೋಚಕ ಅಂತಿಮ ಓವರ್: ಅಂತಿಮ ಆರು ಎಸೆತದಲ್ಲಿ ಏಳು ರನ್ ಅಗತ್ಯವಿತ್ತು. ದೀಪ್ತಿ ಶರ್ಮಾ ಎಸೆದ ಓವರ್ ನ ಮೊದಲ ಎಸೆತದಲ್ಲಿ ಒಂಟಿ ರನ್ ಬಂದರೆ ಎರಡನೇ ಎಸೆತದಲ್ಲಿ ಒಂದು ರನ್ ಮತ್ತು ರನೌಟ್, ಮೂರನೇ ಎಸೆತದಲ್ಲಿ ಒಂದು ರನ್. ನಾಲ್ಕನೇ ಎಸೆತದಲ್ಲಿ ಒಂದು ರನ್ ಬಂತು. ಕೊನೆಯ ಎರಡು ಎಸೆತದಲ್ಲಿ ಮೂರು ರನ್ ಅಗತ್ಯವಿತ್ತು. ಕ್ರೀಸ್ ನಲ್ಲಿದ್ದ ಡು ಪ್ರೀಜ್ ಲಾಂಗ್ ಆನ್ ಕಡೆ ಬಾರಿಸಿದರು. ಫೀಲ್ಡರ್ ಹರ್ಮನ್ ಕೌರ್ ಕ್ಯಾಚ್ ಹಿಡಿದಾಗ ಸಂಪೂರ್ಣ ಭಾರತ ತಂಡ ಗೆದ್ದೆ ಬಿಟ್ಟೆವು ಎಂದು ಸಂಭ್ರಮಾಚರಣೆ ನಡೆಸಿತು. ಆದರೆ ಆ ಎಸೆತ ನೋ ಬಾಲ್ ಆಗಿತ್ತು. ಕೊನೆಯ ಎರಡು ಎಸೆತದಲ್ಲಿ ಎರಡು ರನ್ ಕಸಿದ ಹರಿಣಗಳು ಜಯ ಸಾಧಿಸಿದರು.

Advertisement

ಮಿಥಾಲಿ- ಮಂಧನಾ ಆಟ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಪಡೆಯಿತು. ಮಂಧನಾ ಮತ್ತು ಶಫಾಲಿ ಮೊದಲ ವಿಕೆಟ್ ಗೆ 91 ರನ್ ಒಟ್ಟುಗೂಡಿಸಿದರು. ಮಂಧನಾ 71 ರನ್ ಗಳಿಸಿದರೆ, ಶಫಾಲಿ 53 ರನ್ ಗಳಿಸಿದರು. ನಂತರ ನಾಯಕಿ ಮಿಥಾಲಿ ರಾಜ್ 68 ರನ್, ಉಪ ನಾಯಕಿ ಹರ್ಮನ್ ಕೌರ್ 48 ರನ್ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಮತ್ತೊಂದು ಉತ್ತಮ ಇನ್ನಿಂಗ್ಸ್ ಆಡಿದ ಲೌರಾ ವೊಲ್ವಾಡಾರ್ಟ್ 80 ರನ್ ಗಳಿಸಿದರೆ, ಲಾರಾ ಗೂಡಲ್ 49 ರನ್, ಮರಿಜಾನೆ ಕಪ್ಪ್ 32 ರನ್ ಗಳಿಸಿದರು. ಕೊನೆಯಲ್ಲಿ ದಿಟ್ಟ ಹೋರಾಟ ನಡೆಸಿದ ಮಿಗಾನ್ ಡು ಪ್ರಿಜ್ ಅಜೇಯ 52 ರನ್ ಗಳಿಸಿದರು.

ಇದನ್ನೂ ಓದಿ:ಸೂರತ್ ನಲ್ಲಿ ನಿರ್ಮಾಣವಾಗಿದೆ ದೇಶದ ಮೊದಲ ‘ಉಕ್ಕಿನ ರಸ್ತೆ’; ಏನಿದರ ವಿಶೇಷತೆ?

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ವನಿತಾ ಏಕದಿನ ವಿಶ್ವಕಪ್ ಕೂಟದ ಸೆಮಿ ಫೈನಲ್ ಪ್ರವೇಶಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next