Advertisement

ರಾಷ್ಟ್ರಧ್ವಜದ ಕೇಕ್‌ ಕತ್ತರಿಸುವುದು ರಾಷ್ಟ್ರದ್ರೋಹವಲ್ಲ : ಮದ್ರಾಸ್‌ ಹೈಕೋರ್ಟ್‌ ಆದೇಶ

07:46 PM Mar 22, 2021 | Team Udayavani |

ಚೆನ್ನೈ: ರಾಷ್ಟ್ರಧ್ವಜ ಹಾಗೂ ಅದರ ಮಧ್ಯೆ ಅಶೋಕ ಚಕ್ರವಿರುವ ಚಿತ್ರದ ಕೇಕ್‌ ಕತ್ತರಿಸುವುದು ರಾಷ್ಟ್ರಧ್ವಜಕ್ಕೆ ಅಪಮಾನವಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

Advertisement

ರಾಷ್ಟ್ರಧ್ವಜದ ಚಿತ್ರವುಳ್ಳ ಕೇಕ್‌ ಕತ್ತರಿಸಿರುವುದು ರಾಷ್ಟ್ರೀಯ ಗೌರವಕ್ಕೆ ಧಕ್ಕೆ ತಡೆ ಕಾಯ್ದೆಯಡಿ ಅಪರಾಧ ಅಲ್ಲವೇ ಅಲ್ಲ ಎಂದು ನ್ಯಾಯಪೀಠ ಹೇಳಿರುವುದಾಗಿ “ಬಾರ್‌ ಆ್ಯಂಡ್‌ ಬೆಂಚ್‌’ ವರದಿ ಮಾಡಿದೆ.

2013ರ ಕ್ರಿಸ್ಮಸ್‌ ದಿನದಂದು ನಡೆದಿದ್ದ ದೊಡ್ಡ ಸಮಾರಂಭವೊಂದರಲ್ಲಿ ರಾಷ್ಟ್ರಧ್ವಜವುಳ್ಳ 6×5 ಅಡಿಯ ಕೇಕ್‌ ಕತ್ತರಿಸಿ ಹಂಚಲಾಗಿತ್ತು. ಅದನ್ನು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸುಮಾರು 2,500 ಜನರು ತಿಂದಿದ್ದರು. ಇದನ್ನು ಪ್ರಶ್ನಿಸಿ  ಡಿ. ಸೆಂಥಿಲ್‌ಕುಮಾರ್‌ ಎಂಬುವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾ. ಎನ್‌. ಆನಂದ್‌ ವೆಂಕಟೇಶ್‌, “ರಾಷ್ಟ್ರಧ್ವಜವನ್ನು ಧರಿಸಿದವನು ರಾಷ್ಟ್ರಭಕ್ತನಲ್ಲ, ರಾಷ್ಟ್ರಧ್ವಜದ ಕೇಕ್‌ ಕತ್ತರಿಸಿದವನು ರಾಷ್ಟ್ರ ದ್ರೋಹಿಯೂ ಅಲ್ಲ. ಉತ್ತಮ ಆಡಳಿತಕ್ಕಾಗಿ ಹೋರಾಡುವವನೇ ನಿಜವಾಗಿಯೂ ದೇಶಭಕ್ತ” ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next