Advertisement

ಆರೋಗ್ಯ ಯೋಧರು: 10 ಲಕ್ಷ ಮಾಸ್ಕ್ ತಯಾರಿಸಿದ ಮಹಿಳೆಯರು

04:18 AM Apr 06, 2020 | Hari Prasad |

ದೇಶವು ಕೋವಿಡ್ ನಂತಹ ಸಂಕಷ್ಟಕ್ಕೆ ಸಿಲುಕಿರುವಾಗ ಒಡಿಶಾದ ಮಹಿಳಾ ಸ್ವಸಹಾಯ ಸಂಘಗಳು ತಮ್ಮ ಕೈಲಾದ ಅಳಿಲುಸೇವೆ ಮಾಡುತ್ತಿವೆ. ಕೆಲವೇ ದಿನಗಳಲ್ಲಿ ಈ ಸಂಘಗಳ ಸದಸ್ಯರು ಸುಮಾರು 10 ಲಕ್ಷ ಮಾಸ್ಕ್ ಗಳನ್ನು ಸಿದ್ಧಪಡಿಸಿ, ಸಾರ್ವಜನಿಕರಿಗೆ ಹಂಚಿದೆ.  ಒಡಿಶಾ ಸರಕಾರದ ಮಿಷನ್‌ ಶಕ್ತಿ ಕಾರ್ಯಕ್ರಮದಡಿ ಕನಿಷ್ಠ 400 ಸಂಘಗಳು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಪ್ರತಿ ದಿನ 50 ಸಾವಿರ ಮಾಸ್ಕ್ ಗಳನ್ನು ತಯಾರಿಸುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರಕಾರದ ಜೊತೆ ಕೈಜೋಡಿಸಿವೆ.

Advertisement

ಅಷ್ಟೇ ಅಲ್ಲ, ಸಂಘಗಳ ಕೆಲವು ಸದಸ್ಯರು ಬೇರೆ ಬೇರೆ ಗ್ರಾಮಗಳಿಗೆ ಭೇಟಿ ನೀಡಿ, ಕೋವಿಡ್ ಕುರಿತು ಜಾಗೃತಿ ಮೂಡಿಸುವ ಹಾಗೂ ಬಡವರಿಗೆ ಆಹಾರವನ್ನು ವಿತರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಒಡಿಶಾದ ಈ ನಾರಿಶಕ್ತಿ ಇಡೀ ದೇಶಕ್ಕೆ ಮಾದರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next