Advertisement

ಶಾಲೆಯ ಬಳಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಿ: ಆಗ್ರಹ

10:11 PM Feb 20, 2021 | Team Udayavani |

ಪಡುಪಣಂಬೂರು: ಶಾಲಾ ಮುಂಭಾಗದ ರಸ್ತೆಯಲ್ಲಿ ಬೈಕ್‌ಗಳ ಸಹಿತ ಘನ ವಾಹನಗಳು ವಿಪರೀತ ವೇಗದಲ್ಲಿ ಚಲಿಸುತ್ತವೆ. ಇದರಿಂದ ಮಕ್ಕಳು ಹಾಗೂ ಪಾದಚಾರಿಗಳಿಗೆ ವಾಹನಗಳು ಢಿಕ್ಕಿ ಹೊಡೆದು ಸಾವು, ನೋವು ಸಂಭವಿಸಿದ್ದರೂ ವಾಹನಗಳ ವೇಗಕ್ಕೆ ಕಡಿವಾಣ ಇಲ್ಲವಾಗಿದೆ. ಗ್ರಾ.ಪಂ. ಮೂಲಕವಾದರೂ ಇದಕ್ಕೆ ಕಡಿ ವಾಣ ಹಾಕ ಬೇಕು ಎಂದು ಪಡುಪಣಂಬೂರು ಗ್ರಾ.ಪಂ.ನಲ್ಲಿ ಫೆ.20ರಂದು ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳು ಆಗ್ರಹಿಸಿದರು.

Advertisement

ಪಡುಪಣಂಬೂರು ಗ್ರಾ.ಪಂ.ನ ಸಂಜೀವಿನಿ ಕಟ್ಟಡದಲ್ಲಿ ನಡೆದ 2020-21ನೇ ಸಾಲಿನ ಮಕ್ಕಳ ಗ್ರಾಮಸಭೆಯಲ್ಲಿ ತೋಕೂರು ತಪೋವನ ಡಾ| ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವೈಭವ್‌ ಆಗ್ರಹಿಸಿದಾಗ ಇತರ ಶಾಲಾ ವಿದ್ಯಾರ್ಥಿಗಳು ಸಹ ಧ್ವನಿಗೂಡಿಸಿದರು.

ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಿಡಿಒ ಅವರು, ಪ್ರಸ್ತುತ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿರುವುದರಿಂದ ಪಂಚಾಯತ್‌ಗೆ ವೇಗ ನಿಯಂತ್ರಕ ಅಳವಡಿಸಲು ಅವಕಾಶ ಇಲ್ಲ. ಹಲವು ಸಮಯಗಳಿಂದ ಈ ಬಗ್ಗೆ ಪ್ರಸ್ತಾವಿ ಸಲಾಗುತ್ತಿದೆ. ಜಿ.ಪಂ. ಸದಸ್ಯರ ಮೂಲಕ ಇಲಾಖೆಯ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸೋಣ ಎಂದರು.

ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಹಾಗೂ ಪಿಡಿಒ ಅನಿತಾ ಕ್ಯಾಥರಿನ್‌ ಮಕ್ಕಳ ಪ್ರಶ್ನೆಗಳ ಪರಿಹಾರದ ಬಗ್ಗೆ ಪ್ರತಿಕ್ರಿಯಿಸಿ ಬಗೆಹರಿಸುವ ಭರವಸೆ ನೀಡಿದರು.

ತೋಕೂರು ತಪೋವನದ ಡಾ| ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಜ್ಞಾ ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಮಕ್ಕಳ ಹಕ್ಕುಗಳ ಹಾಗೂ ಸಮಾಜದಲ್ಲಿ ಮಕ್ಕಳ ಜಾಗೃತಿ ಬಗ್ಗೆ ನ್ಯಾಯವಾದಿ ಸಂತೋಷ್‌ ಪಿಂಟೊ, ಮಕ್ಕಳಿಗೆ ಸರಕಾರದ ಸವಲತ್ತುಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ನಾಗರತ್ನಾ, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಹ ಸಂಯೋಜಕ ದೀಕ್ಷಿತ್‌ ಮಾಹಿತಿ ನೀಡಿದರು.

ಗ್ರಾ.ಪಂ.ನ ಉಪಾಧ್ಯಕ್ಷೆ ಕುಸುಮಾ, ಸದಸ್ಯರಾದ ಪಿ. ಉಮೇಶ್‌ ಪೂಜಾರಿ, ದಿನೇಶ್‌ ಶೆಟ್ಟಿ , ಪವಿತ್ರಾ ಶಂಕರ, ವಿಜಯಲಕ್ಷ್ಮೀ ಯಾನೆ ತುಳಸಿ, ವಿನೋದ್‌ ಎಸ್‌. ಸಾಲ್ಯಾನ್‌, ಹರಿಪ್ರಸಾದ್‌, ಪುಷ್ಪಾ ಯಾನೆ ಶ್ವೇತಾ, ಪ್ರಮೀಳಾ ಡಿ. ಶೆಟ್ಟಿ , ಸಂತೋಷ್‌ಕುಮಾರ್‌, ಹೇಮನಾಥ ಅಮೀನ್‌, ಜ್ಯೋತಿ ಕುಲಾಲ್‌, ನಮಿತಾ, ಮೋಹನ್‌ದಾಸ್‌, ಅನಿಲ್‌ ಯಾನೆ ಸೀತಾರಾಮ, ನಂದಳಿಕೆ ಗ್ರಾ.ಪಂ. ಅಧ್ಯಕ್ಷ ನಿತ್ಯಾನಂದ ಅಮೀನ್‌, ವಿವಿಧ ಇಲಾಖೆಯ ಅಧಿಕಾರಿಗಳು, ಖಾಸಗಿ ಎನ್‌ಜಿಒಗಳ ಪ್ರಮುಖರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯದರ್ಶಿ ಲೋಕನಾಥ ಭಂಡಾರಿ ಹಾಗೂ ಶರ್ಮಿಳಾ ಹಿಮಕರ್‌ ಕದಿಕೆ ವರದಿ ವಾಚನ ನಡೆಸಿದರು. ತ್ವಿಷಾ ಸ್ವಾಗತಿಸಿದರು. ರೇಷ್ಮಾ ವಂದಿಸಿದರು. ಶ್ರೀ ಸುಬ್ರಹ್ಮಣ್ಯ ಶಾಲೆಯ ಪ್ರತೀಕ್ಷಾ ನಿರೂಪಿಸಿದರು.

ಮಕ್ಕಳಿಂದ ಕೇಳಿಬಂದ ವಿವಿಧ ಬೇಡಿಕೆಗಳು
ಶ್ರೀ ಸುಬ್ರಹ್ಮಣ್ಯ ಸರಕಾರಿ ಅನುದಾನಿತ ಶಾಲೆಯ ಪ್ರತೀಕ್ಷಾ ಪ್ರಶ್ನಿಸಿ, ಶಾಲೆಯಲ್ಲಿಯೇ ಗ್ರಂಥಾಲಯದ ಪುಸ್ತಕಗಳು ಸಿಗುವಂತಾಗಲಿ, ಕೆರೆಕಾಡು ಸರಕಾರಿ ಪ್ರಾಥಮಿಕ ಶಾಲೆಯ ಗೌತಮ್‌ ಅಕ್ಷರ ದಾಸೋಹ ಕಟ್ಟಡ ಸೋರಿಕೆ, 2021ನೇ ಸಾಲಿನ ಸಮವಸ್ತ್ರದ ಕೊರತೆ ಬಗ್ಗೆ ಪ್ರಶ್ನಿಸಿದರು. ಪಡುಪಣಂಬೂರು ಸರಕಾರಿ ಶಾಲೆಯ ರೇಷ್ಮಾ ಹೊಗೆಗುಡ್ಡೆ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವು ಮಾಡಲು ಕೇಳಿಕೊಂಡರು, ಡಾ| ರಾಮಣ್ಣ ಶೆಟ್ಟಿ ಆಂಗ್ಲ ಮಾ.ಶಾಲೆಯ ಸಾಧ್ವಿ, ಸಂತೆಕಟ್ಟೆಯಲ್ಲಿ ದಾರಿದೀಪ ಅಳವಡಿಸಿ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next