ಬೆಂಗಳೂರು: ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. 100ರೂ. ಖರ್ಚು ಮಾಡುವ ಕಡೆ 50ರೂ. ಖರ್ಚು ಮಾಡಿ ಉಳಿದದ್ದು ದುರುಪಯೋಗ ವಾಗುತ್ತಿದೆ ಎಂಬ ದೂರಿದೆ. ಇದನ್ನು ತಡೆಯಲು ಕ್ರಮ ವಹಿಸುವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಭಾನುವಾರ ಗೃಹ ಕಚೇರಿ “ಕೃಷ್ಣಾ’ದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಎಲ್ಲೆಲ್ಲಿ ಲೋಪ ಗಳಾಗುತ್ತಿವೆ ಎಂಬುದು ಕಂಡುಬಂದರೆ, ಮನವರಿಕೆ ಯಾದರೆ ಅದನ್ನು ಸಚಿವರು ಹಾಗೂ ನನ್ನ ಗಮನಕ್ಕೆ ತಂದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.
ವೈಟ್ ಟಾಪಿಂಗ್ ಯೋಜನೆಯಡಿ ಒಂದು ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 11ರಿಂದ 12 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ ನಾಲ್ಕು ಕೋಟಿ ರೂ.ನಲ್ಲಿ ಇದಕ್ಕಿಂತಲೂ ಉತ್ತಮ ರಸ್ತೆ ನಿರ್ಮಾಣ ಸಾಧ್ಯವಿದೆ. ಯೋಜನೆ ಹೆಸರಿನಲ್ಲಿ ಲೂಟಿ, ಹಗಲು ದರೋಡೆ ನಡೆದಿದೆ ಎಂದು ಸಿಎಂ ಕಿಡಿ ಕಾರಿದರು.
ನಮ್ಮ ವತಿಯಿಂದಲೇ 4 ಕೋಟಿ ರೂ. ವೆಚ್ಚದಲ್ಲಿ ಇದಕ್ಕಿಂತ ಉತ್ತಮ ರಸ್ತೆ ನಿರ್ಮಿಸಲಾಗುವುದು. ಸದ್ಯದಲ್ಲೇ ಕೆಲ ಗುತ್ತಿಗೆದಾರರಿಂದ 10- 12 ಕಿ.ಮೀ. ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗು ವುದು. ಆಗ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗಲಿದೆ. ಕಾಮಗಾ ರಿಗೆ ಹೆಚ್ಚುವರಿ ಹಣ ವೆಚ್ಚ ಮಾಡಲಾಗಿದೆ. ಹಾಗಾಗಿ ತನಿಖೆಗೆ ಸೂಚಿಸಲಾಗಿದ್ದು, ಸಮಿತಿ ವರದಿ ಆಧರಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
15 ದಿನಕ್ಕೊಮ್ಮೆ ನಗರ ತಪಾಸಣೆ: ಸಾಧ್ಯವಾದಷ್ಟೂ 15 ದಿನಕ್ಕೊಮ್ಮೆ ಬೆಂಗಳೂರಿನಲ್ಲಿ ತಪಾಸಣಾ ಭೇಟಿ ನೀಡಿ ಸ್ಥಳದಲ್ಲೇ ಅಗತ್ಯ ಸೂಚನೆ, ನಿರ್ದೇಶನ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ನಗರವಾಗಿರುವ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದು ಸರ್ಕಾರದ ಆದ್ಯತೆ.
ಈ ದೃಷ್ಟಿಯಿಂದ ಸಾರ್ವಜನಿಕರಿಂದಲೇ ಅಭಿಪ್ರಾಯ ಪಡೆಯುವ ಪ್ರಯತ್ನ ಮಾಡಿದ್ದೇನೆ. ಜನರಿಗೆ ತೊಂದರೆಯಾಗಬಾರ ದೆಂಬ ಕಾರಣಕ್ಕೆ ಭಾನುವಾರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ತಪಾಸಣೆ ವೇಳೆ ಹತ್ತಾರು ಕಾರುಗಳಲ್ಲಿ ಓಡಾಡುವುದಕ್ಕಿಂತ ಮೂರು ಬಸ್‌ಗಳಲ್ಲಿ ಪ್ರಯಾಣ ಮಾಡಲಾಗಿದೆ ಎಂದು ತಿಳಿಸಿದರು.
ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಟಾಳದವರೆಗೆ 102 ಕಿ.ಮೀ. ಉದ್ದದ ಎಲಿವೇಟೆಡ್ ಕಾಮಗಾರಿ ಯೋಜನೆ ಬಗ್ಗೆ ಚರ್ಚಿಸಲಾಗಿದೆ. ವೈಜ್ಞಾನಿಕ ವಿಧಾನದಲ್ಲಿ ಸಂಚಾರ ದಟ್ಟಣೆ ನಿವಾರಣೆಯತ್ತ ಪರಿಶೀಲಿಸಲಾಗುವುದು. ಹಾಗೆಯೇ ನಗರದಲ್ಲಿ ಜಾಹೀರಾತು ಪ್ರದರ್ಶನಕ್ಕೆ ನಿಷೇಧವಿದ್ದು, ಅನುಮತಿ ನೀಡುವ ಬಗ್ಗೆಯೂ ಪರಿಶೀಲಿಸಲಾಗುವುದು.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ