ಮುಂಬೈ: ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 20 ಪ್ರಕರಣಗಳಲ್ಲಿ 8.17 ಕೋಟಿ ರೂ. ಮೌಲ್ಯದ 12.74 ಕೆಜಿ ಚಿನ್ನಾಭರಣ, 10 ಲಕ್ಷ ಮೌಲ್ಯದ ಐಫೋನ್ ವಶಪಡಿಸಿಕೊಂಡಿದ್ದಾರೆ. ಐವರು ಪ್ರಯಾಣಿಕರನ್ನು ಬಂಧಿಸಲಾಗಿದೆ.
ನಿಷಿದ್ಧ ಚಿನ್ನವನ್ನು ವಿವಿಧ ರೂಪಗಳಲ್ಲಿ ಬಟ್ಟೆಗಳು, ಕಚ್ಚಾ ಆಭರಣಗಳು ಮತ್ತು ಚಿನ್ನದ ಕಡ್ಡಿಗಳನ್ನು ನೀರಿನ ಬಾಟಲಿಯಲ್ಲಿ ಮತ್ತು ದೇಹದ ಮೇಲೆ ಚತುರ ರೀತಿಯಲ್ಲಿ ಮರೆಮಾಡಿ ಸಾಗಿಸಲಾಗುತ್ತಿತ್ತು.
ಮೊದಲ ಪ್ರಕರಣದಲ್ಲಿ ವಿಮಾನ ನಿಲ್ದಾಣದ ಗುತ್ತಿಗೆ ಸಿಬಂದಿಯನ್ನು ಸಿಐಎಸ್‌ಎಫ್ ತಡೆಹಿಡಿದು ಕಸ್ಟಮ್ಸ್‌ಗೆ ಹಸ್ತಾಂತರಿಸಲಾಗಿತ್ತು, ನೀರಿನ ಬಾಟಲಿಯಲ್ಲಿ 2580.00 ಗ್ರಾಂ ನಿವ್ವಳ ತೂಕದ ಮೇಣದ ರೂಪದಲ್ಲಿ 24 ಕೆಟಿ ಚಿನ್ನವನ್ನು ಸಾಗಾಟ ಮಾಡಲಾಗುತ್ತಿತ್ತು. 12.74 ಕೆಜಿ ಚಿನ್ನ ಮತ್ತು ಒಟ್ಟು 8.37 ಕೋಟಿ ಮೌಲ್ಯದ ಸರಕುಗಳನ್ನು ವಶಪಡಿಸಿಕೊಂಡಿದೆ.
ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯುನಿಟ್ ದುಬೈನಿಂದ ಬಂದ ನಾಲ್ವರು ಭಾರತೀಯ ಪ್ರಜೆಗಳನ್ನು ಒಳ ಉಡುಪು ಮತ್ತು ಗುದನಾಳದಲ್ಲಿ ಬಚ್ಚಿಟ್ಟ 3335 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಒಳ ಉಡುಪು, ಜೀನ್ಸ್ ಪಾಕೆಟ್, ಬ್ಯಾಗೇಜ್‌ನಲ್ಲಿ, ಗುದನಾಳದಲ್ಲಿ ಬಚ್ಚಿಟ್ಟಿದ್ದ 5323 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.