ಚಿಕ್ಕಬಳ್ಳಾಪುರ: ಸತತ 40 ವರ್ಷಗಳಿಗಿಂತ ಹೆಚ್ಚು ಕಾಲ ದಕ್ಷಿಣ ಭಾರತದಲ್ಲಿ ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಗಿರಿಯಾಸ್, ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡಿ ಗ್ರಾಹಕರ ನಂಬಿಕೆ, ವಿಶ್ವಾಸವನ್ನು ಗಳಿಸಿದೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ಸೋಮೆಂದು ಮುಖರ್ಜಿ ಅಭಿಪ್ರಾಯಪಟ್ಟರು.
ನಗರದ ಬಿ.ಬಿ.ರಸ್ತೆಯ ಸಿಎಂಸಿ ಬಡಾವಣೆ ಸಮೀಪ ಹವಾನಿಯಂತ್ರಿತ 3 ಅಂತಸ್ತಿನ ಕಟ್ಟಡದಲ್ಲಿ ತೆರೆದಿರುವ ಗಿರಿಯಾಸ್‌ನ 75ನೇ ಮೇಗಾ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಸಣ್ಣ ಮಳಿಗೆಯಿಂದ ಆರಂಭಗೊಂಡ ಗಿರಿಯಾಸ್, ಇಂದು ದಕ್ಷಿಣ ಭಾರತದ ಬಹುತೇಕ ರಾಜ್ಯ ಗಳಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತ ರಿಸಿಕೊಂಡಿದೆ.
ಕರ್ನಾಟಕ, ತಮಿಳು ನಾಡು ಹಾಗೂ ಪುದುಚೇರಿಯಲ್ಲಿ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಶ್ರೀಸಾಮಾನ್ಯನಿಗೂ ಗುಣ ಮಟ್ಟದ ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರ ನಂಬಿಕೆ, ವಿಶ್ವಾಸ ಉಳಿಸಿಕೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜೊತೆಗೆ, ಗಿರಿಯಾಸ್ ಕುಟುಂಬಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗಿರಿಯಾಸ್ ಸಂಸ್ಥೆಯ ನಿರ್ದೇಶಕರಾದ ಪಿ.ಎಲ್.ಗಿರಿಯಾ, ನವೀನ್ ಗಿರಿಯಾ, ನಿತ್ಯೇಶ್ ಗಿರಿಯಾ, ಮನೀಶ್ ಗಿರಿಯಾ, ಹೆಚ್.ಆರ್.ಗಿರಿಯಾ, ಕೆ.ಎಲ್.ಗಿರಿಯಾ, ನೀತಿಶ್ ಗಿರಿಯಾ, ಮಳಿಗೆಯ ಮಾಲೀಕ, ನಗರಸಭಾ ಮಾಜಿ ಅಧ್ಯಕ್ಷ, ಕೆ.ವಿ.ಮಂಜುನಾಥ ಮತ್ತಿತರಿದ್ದರು.
ಮಳಿಗೆ ವೀಕ್ಷಣೆ: ಮಳಿಗೆ ಉದ್ಘಾಟಿಸಿದ ಬಳಿಕ ಐಜಿಪಿ ಸೋಮೆಂದ್ ಮುಖರ್ಜಿ ಯವರು, ಗಿರಿಯಾಸ್ ಪರಿವಾರ ದೊಂದಿಗೆ ಮಾರಾಟ ಮಳಿಗೆಯನ್ನು ಸುತ್ತಾಡಿ ಮಳಿಗೆಯಲ್ಲಿ ಮಾರಾಟ ಮಾಡುವ ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟ, ರಿಯಾಯಿತಿ, ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು. ಶೋರೂಂ ಆರಂಭಗೊಂಡ ಹಿನ್ನೆಲೆಯಲ್ಲಿ ಮಳಿಗೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಮೊದಲ ದಿನವೇ ಗ್ರಾಹಕರು ವಿವಿಧ ಉತ್ಪನ್ನಗಳ ಖರೀದಿಗೆ ಮುಗಿ ಬಿದ್ದಿದ್ದರು.
ಅತ್ಯಾಕರ್ಷಕ ರಿಯಾಯಿತಿಗಳ ಘೋಷಣೆ: ಗಿರಿಯಾಸ್ ತನ್ನ 75ನೇ ಮೇಗಾ ಶೋರೂಂನ್ನು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಭಾರೀ ರಿಯಾಯಿತಿಗಳನ್ನು ಘೋಷಿಸಿದೆ. ಆರಂಭದ ಮೊದಲ ದಿನ ಗಿರಿಯಾಸ್ ಕರಪತ್ರ ತೆಗೆದುಕೊಂಡು ಹೋದ ಮೊದಲ 100 ಮಂದಿಗೆ ಯಾವುದೇ ಖರೀದಿ ಇಲ್ಲದಿದ್ದರೂ ಹಲವು ಗೃಹಬಳಕೆಯ ಬೆಲೆ ಬಾಳುವ ವಸ್ತುಗಳನ್ನು ಉಚಿತವಾಗಿ ವಿತರಿಸಿತು. ಫೈನಾನ್ಸ್ ಮೇಳ ಆಯೋಜಿಸಿ, ಕೇವಲ 1 ರೂ. ಪಾವತಿಸಿ ಗ್ರಾಹಕರಿಗೆ ಹಲವು ರೀತಿಯ ಗೃಹೋಪಯೋಗಿ ವಸ್ತುಗಳನ್ನು ಸಾಲದ ರೂಪದಲ್ಲಿ ವಿತರಿಸುತ್ತಿದೆ. ಆ.25ರಂದು ಭಾನುವಾರ ಸಹ ಮೇಗಾ ಮಾರಾಟ ಮೇಳ ಮುಂದುವರಿಯಲಿದೆ.