Advertisement

WhatsApp: ಚಾಟ್‌ ಫೋಲ್ಡರ್‌ಗೆ ಕಸ್ಟಮ್‌ ಪಾಸ್‌ವರ್ಡ್‌

10:43 PM Oct 10, 2023 | Team Udayavani |

ನವದೆಹಲಿ: ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಸಂರಕ್ಷಿತ ಚಾಟ್‌ ಫೋಲ್ಡರ್‌ಗಳಿಗಾಗಿ ಕಸ್ಟಮ್‌ ಪಾಸ್‌ವರ್ಡ್‌ ನೀಡುವ ಹೊಸ ಫೀಚರ್‌ ಅನ್ನು ಪರಿಚಯಿಸಲು ವಾಟ್ಸ್‌ಆ್ಯಪ್‌ ಮುಂದಾಗಿದೆ. ಲಾಕ್‌ ಮಾಡಿದ ಚಾಟ್‌ಗಳನ್ನು ತೆರೆಯಲು ಹಾಗೂ ಕಂಪ್ಯಾನಿಯನ್‌ ಸಾಧನಗಳಿಗೆ ಕಾನ್ಫಿಗರ್‌ ಮಾಡಲು ಬಳಕೆದಾರರು ಈ ಕಸ್ಟಮ್‌ ಕೋಡ್‌ಗಳನ್ನು ಬಳಸಬಹುದು ಎಂದು ವರದಿಗಳು ತಿಳಿಸಿವೆ.
ಈ ವೈಶಿಷ್ಟ್ಯವು ಸೂಕ್ಷ್ಮ ಸಂವಹನಗಳ ಭದ್ರತೆಯನ್ನು ಹೆಚ್ಚಿಸಲಿದೆ.

Advertisement

ಬಳಕೆದಾರರು ತಾವು ಲಾಕ್‌ ಮಾಡಿದ ಚಾಟ್‌ಗಳಿಗೆ ಪ್ರವೇಶ ಪಡೆಯಲು ವಾಟ್ಸ್‌ಆ್ಯಪ್‌ನ ಹುಡುಕಾಟ ಪಟ್ಟಿಯಲ್ಲಿ ಈ ರಹಸ್ಯ ಕೋಡ್‌ ಅನ್ನು ನಮೂದಿಸಬೇಕು. ಜತೆಗೆ, ರಹಸ್ಯ ಕೋಡ್‌ ಅನ್ನು ಕಾನ್ಫಿಗರ್‌ ಮಾಡುವುದರಿಂದ ಬಳಕೆದಾರರು ತಮ್ಮ ಕಂಪ್ಯಾನಿಯನ್‌ ಸಾಧನಗಳಿಂದ ಚಾಟ್‌ಗಳನ್ನು ಲಾಕ್‌ ಮಾಡಲು ಅನುಮತಿಸಬಹುದು ಎಂದು ವರದಿ ತಿಳಿಸಿದೆ. ಸದ್ಯಕ್ಕೆ ಈ ವೈಶಿಷ್ಟ್ಯವು ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಲಭ್ಯವಿಲ್ಲ. ಮುಂದಿನ ಅಪ್‌ಡೇಟ್‌ ಸಮಯದಲ್ಲಿ ಈ ನೂತನ ವೈಶಿಷ್ಟéದ ಸೌಲಭ್ಯವು ಬಳಕೆದಾರರಿಗೆ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next