Advertisement

ಉತ್ತಮ ಆರೋಗ್ಯಕ್ಕೆ ಕರಿಬೇವು

09:38 PM Mar 16, 2020 | mahesh |

ಕರಿಬೇವಿನ ಎಲೆಗಳನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಅದು ಆಹಾರಕ್ಕೆ ಪರಿಮಳದೊಂದಿಗೆ ರುಚಿಯನ್ನು ನೀಡುತ್ತದೆ. ಆಯುರ್ವೇದದ ಪ್ರಕಾರ ಇದನ್ನು ಕಡಿಪತ್ರ ಎಂದು ಕರೆಯಲಾಗುತ್ತದೆ.

Advertisement

ಪೋಷಕಾಂಶಗಳು
ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ,ಆ್ಯಂಟಿ ಆಕ್ಸಿಡೆಂಟ್ಸ್‌ , ಕಬ್ಬಿನಾಂಶ, ಮ್ಯಾಗ್ನಿàಶಿಯಂ, ಎಡಿಮಿಸ್‌-ಎಬಿಸಿಇ, ಸಿಕೋಟಿನಿಕ್‌ ಆಮ್ಲ ಈ ಎಲ್ಲ ಅಂಶಗಳನ್ನು ಕರಿಬೇವಿನ ಎಲೆಗಳು ಹೊಂದಿರುತ್ತದೆ. ಇದರಿಂದಾಗಿ ಕರಿಬೇವು ಸೇವೆನೆ ದೇಹದ ಆರೋಗ್ಯಕ್ಕೆ ಪೂರಕವಾದುದಾಗಿದೆ.

ಸಂಶೋಧನೆಯ ಪ್ರಕಾರ ಹಲ್ಲು ಮತ್ತು ವಸಡಿನ ಆರೋಗ್ಯಕ್ಕೂ ಕೂಡ ಕರಿಬೇವು ಸಹಾಯಕವಾಗುತ್ತದೆ. ಬಾಯಿಯ ಆರೋಗ್ಯ ಕಾಪಾಡಲು ಉಪಯೋಗಿಸಲಾಗುತ್ತದೆ. ಕರಿಬೇವಿನಲ್ಲಿರುವ ಫೋಲಿಕ್‌ ಆಮ್ಲ ಮತ್ತು ಅಧಿಕವಾಗಿ ಕಬ್ಬಿಣಾಂಶವು ರಕ್ತಹೀನತೆಗೆ ಪರಿಹಾರ ನೀಡುತ್ತದೆ. ದೇಹದಲ್ಲಿ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ. ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಇವಿಷ್ಟು ಆರೋಗ್ಯದ ಉಪಯುಕ್ತವಾದ ಅಂಶಗಳನ್ನು ಕರಿಬೇವು ಹೊಂದಿದೆ.

ಕರಿಬೇವಿನ ಔಷಧೀಯ ಉಪಯೋಗಗಳು
1 ಹೃದಯದ ಆರೋಗ್ಯ ಹಾಗೂ ಸೋಂಕಿನ ವಿರುದ್ಧ ಹೋರಾಡುತ್ತದೆ.

2 ಕೂದಲಿನ ಬೆಳವಣಿಗೆಗೆ ಕರಿಬೇವಿನ ಎಲೆ ಉತ್ತಮ ಔಷಧವಾಗಿದೆ.

Advertisement

3 ಕೂದಲು ಉದುರುವಿಕೆ ಯನ್ನು ಕಡಿಮೆ ಮಾಡುತ್ತದೆ.

4 ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಕೊಬ್ಬು ಕಡಿಮೆ ಮಾಡುತ್ತದೆ.

5 ಉತ್ತಮ ದೃಷ್ಟಿ

6 ಮಧುಮೇಹ ನಿಯಂತ್ರಣ

7 ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ

8 ದೇಹದಲ್ಲಿರುವ ಟಾಕ್ಸಿಕ್‌ ಅಂಶವನ್ನು ಹೊರಹಾಕುತ್ತದೆ.

 ಡಾ| ರಶ್ಮಿ

Advertisement

Udayavani is now on Telegram. Click here to join our channel and stay updated with the latest news.

Next