Advertisement

ಪ್ರಸ್ತುತ ಚಿತ್ರಕಲೆಗೆ ಪ್ರೋತ್ಸಾಹ ಇದೆ

08:37 AM Aug 03, 2017 | |

ಶಹಾಪುರ: ಮನುಷ್ಯನ ಮನಸ್ಸಿನ ಭಾವನೆಗಳನ್ನು ತನ್ನ ಕುಂಚ ಕಲೆಯಿಂದ ಸೆರೆ ಹಿಡಿಯುವ ಪ್ರಶಾಂತಕುಮಾರ ಗುಂಬಳಾಪುರಮಠ ಅವರು ಪ್ರತಿಭಾವಂತ ಯುವ ಕಲಾವಿದರು ಎಂದು ಕಲಬುರಗಿ ಚಿತ್ರಕಲಾ ಪ್ರಾಧ್ಯಾಪಕ ಪ್ರೊ| ಲೋಕಯ್ಯ ಹಿರೇಮಠ ಹೇಳಿದರು.

Advertisement

ನಗರದ ಕಸಾಪ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಧನ ಸಹಾಯ ವತಿಯಿಂದ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ಚಿತ್ರಕಲಾವಿದ ಪ್ರಶಾಂತಕುಮಾರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾರಂಭ ಉದ್ಘಾಟಿಸಿ ಶಾಸಕ ಗುರು ಪಾಟೀಲ ಶಿರವಾಳ ಮಾತನಾಡಿ, ಶಹಾಪುರದ ಸಾಂಸ್ಕೃತಿಕ ಪರಿಸರದಲ್ಲಿ ವೈವಿಧ್ಯಮಯ ಚಿತ್ರಕಲೆಗಳನ್ನು ಅಭಿವ್ಯಕ್ತ ಪಡಿಸುತ್ತಿರುವ ಪ್ರಶಾಂತ ಕುಮಾರ ಗುಂಬಳಾಪುರಮಠ ಅವರ ಸಾಧನೆ ನಿಜಕ್ಕೂ ಕೈಗನ್ನಡಿಯಾಗಿದೆ. ಪ್ರಸ್ತುತ ಚಿತ್ರಕಲೆಗೆ ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಶಹಾಪುರದ ಎಲ್ಲಾ ಚಿತ್ರಕಲಾವಿದರು ಒಗ್ಗಟ್ಟಾಗಿ ಚಿತ್ರಸಂತೆ ಮಾಡಿದರೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಗುಂಬಳಾಪುರ ಮಠದ ಸಿದೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಸಿದ್ಧಲಿಂಗಣ್ಣ ಆನೇಗುಂದಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ ಸೋಮಶೇಖರ ಅರಳಗುಂಡಿಗಿ, ಖಾಸಿಂಅಲಿ ಹುಜರತಿ, ಬಸವರಾಜ ಆನೇಗುಂದಿ, ಎಸ್‌.ಟಿ.ಒ
ಬಸವರಾಜ ಕುಂಬಾರ ಉಪಸ್ಥಿತರಿದ್ದರು. ಚಿತ್ರಕಲಾವಿದ ರುದ್ರಪ್ಪ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಕುಲಕರ್ಣಿ ನಿರೂಪಿಸಿದರು. ಗೀತಾ ಹಿರೇಮಠ ಪ್ರಾರ್ಥಿಸಿದರು. ಕಸಾಪ ಗೌರವ ಕಾರ್ಯದರ್ಶಿ ರಾಘವೇಂದ್ರ ಹಾರಣಗೇರಾ ಸ್ವಾಗತಿಸಿದರು. ಬಸವರಾಜ ಸಿನ್ನೂರು ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next