Advertisement

ಭಾರತದ ಚಾಲ್ತಿ ಖಾತೆ ಕೊರತೆ ಹೆಚ್ಚಳ

11:55 PM Sep 29, 2022 | Team Udayavani |

ಮುಂಬಯಿ: ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ  (ಆಯಾತ-ನಿರ್ವಾತದ ನಡುವಿನ ಅಂತರ) 23.9 ಶತಕೋಟಿ ಡಾಲರ್‌ ಆಗಿದೆ. ಅಂದರೆ ಜಿಡಿಪಿಯ ಶೇ.2.8 ರಷ್ಟು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ವರದಿ ಹೇಳಿದೆ.

Advertisement

ಕಳೆದ ಹಣಕಾಸು ವರ್ಷದ ಕೊನೆಯ ತ್ತೈಮಾ ಸಿಕದಲ್ಲಿ (ಜನವರಿ- ಮಾರ್ಚ್‌) ಚಾಲ್ತಿ ಖಾತೆ ಕೊರತೆ 13.4 ಬಿಲಿಯನ್‌ ಅಮೆರಿಕನ್‌ ಡಾಲರ್‌ ಅಂದರೆ, ಜಿಡಿಪಿಯ ಶೇ. 1.5ರಷ್ಟಿತ್ತು. ಆದರೆ, ಅನಂತರದ ತ್ತೈಮಾಸಿಕದಲ್ಲಿ ಅದು ಇನ್ನಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next