ಸೇರಿ ಹಬ್ಬಗಳಲ್ಲಿ ನಾಟಕ ಮಾಡೋ ಖಯಾಲಿ. ತಂದೆಗೋ, ಅದು ಇಷ್ಟವಿಲ್ಲ. ಆ ಊರಲ್ಲಿದ್ದ ಡಾ.ಶಂಕರ್‌ಶೆಟ್ಟಿ ತೋಟಕ್ಕೆ ಕೂಲಿ ಹೋಗುತ್ತಿದ್ದ ಆ ಹುಡುಗ, ಕೂಲಿ ಹಣದಲ್ಲಿ ಸಂತೆ ಮಾಡಿ ಮನೆಗೊಂದಷ್ಟು ನೆರವಾಗುತ್ತಿದ್ದ. ಅವನ ಕಷ್ಟವನ್ನು ಕಂಡ ತೋಟದ ಮಾಲೀಕ ಡಾ.ಶಂಕರ್‌ಶೆಟ್ಟಿ, ಜಯಲಕ್ಷ್ಮೀ ಬ್ಯಾಂಕ್‌ನಲ್ಲಿ ಅಟೆಂಡರ್ ಕೆಲಸ ಕೊಡಿಸಿದರು. ತಿಂಗಳಿಗೆ 50 ರೂ.ಸಂಬಳ! ಆ ಕೆಲಸ ಬದುಕಿಗೊಂದಷ್ಟು ಸಹಾಯವಾಗಿದ್ದೇ ತಡ, ಮತ್ತೆ ನಾಟಕ ಕಡೆ ವಾಲಿಬಿಟ್ಟ. ಹಾಗೆ ಶುರುವಾದ ಆ ಹುಡುಗನ ಬಣ್ಣದ ಬದುಕಿಗೆ ಈಗ ನಾಲ್ಕು ದಶಕಗಳೇ ಕಳೆದಿವೆ. ಸಾವಿರಾರು ನಾಟಕಗಳು, ನೂರಾರು ಧಾರಾವಾಹಿಗಳು ಬರೋಬ್ಬರಿ 750 ಸಿನಿಮಾಗಳಲ್ಲಿ ನಟಿಸಿ,
“ಮೈಲಿಗಲ್ಲು’ ಸಾಧಿಸಿರುವ ಕಲಾವಿದ ಬೇರಾರೂ ಅಲ್ಲ. ಬ್ಯಾಂಕ್ ಜನಾರ್ದನ್.
Advertisement
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯವರಾದ ಬ್ಯಾಂಕ್ ಜನಾರ್ದನ್ “ಗೌಡ್ರ ಗದ್ಲ’ ನಾಟಕದಲ್ಲಿ ಗೌಡನಾಗಿ ನಟಿಸುತ್ತಿದ್ದರು. ಅದು ತುಂಬಾ ಫೇಮಸ್ ಆಗಿತ್ತು. ಆಗ ಆ ಊರಿಗೆ ನಾಟಕ ಕಂಪೆನಿಯೊಂದು ಬಂತು. ಅದೇ “ಗೌಡ್ರ ಗದ್ಲ’ ನಾಟಕ ಮಾಡುವಾಗ, ಕಂಪೆನಿ ಲಾಸ್ ಆಗಿತ್ತು. ಆಗ ಕಂಪೆನಿಯ ಕೆಲ ಕಲಾವಿದರು ಹೊರಟು ಹೋಗಿದ್ದರು. ಆ ಸಮಯದಲ್ಲಿ ಬ್ಯಾಂಕ್ ಜನಾರ್ದನ್ ಚೆನ್ನಾಗಿ ನಟಿಸುವ ಸುದ್ದಿ ಹರಡಿ, ಆ ಕಂಪೆನಿ ಮಾಲೀಕ, ನಾಟಕದಲ್ಲಿ ನಟಿಸುವಂತೆ ಕೇಳಿದ್ದರು. ಜನಾರ್ದನ್ ಗೆ ಮೊದಲು ಭಯವಿತ್ತು. ಅದುವರೆಗೆಹವ್ಯಾಸಿ ಕಲಾವಿದರಾಗಿದ್ದವರಿಗೆ ಕಂಪೆನಿ ನಾಟಕದಲ್ಲಿ ಅವಕಾಶ ಸಿಕ್ಕಾಗ ಭಯ ಸಹಜವಾಗಿತ್ತು. ನಾಟಕ ಮಾಡಿದರು. ಸೈ
ಎನಿಸಿಕೊಂಡರು. ಅಲ್ಲೇ ಬಿಜಿಯಾದರು.
ಇಷ್ಟವಿರಲಿಲ್ಲ. ಹೇಗೋ ಬ್ಯಾಂಕ್ ಕೆಲಸ ಮಾಡುತ್ತಲೇ ನಾಟಕ ಮಾಡಿಕೊಂಡುರಾತ್ರಿ ವೇಳೆ “ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್’ನಲ್ಲಿ ಕಾರ್ಬನ್ ಆಪರೇಟರ್ ಆಗಿಯೂ ಬದುಕು ಸವೆಸುತ್ತಿದ್ದರು. ಅತ್ತ ಮನೆಯಲ್ಲಿ ಸಿನಿಮಾ ಬಿಟ್ಟು, ಬ್ಯಾಂಕ್ ಕೆಲಸ
ಮಾಡು ಅನ್ನೋ ಜಗಳ ಶುರುವಾಗಿತ್ತು. ಆದರೂ ಬಣ್ಣದ ನಂಟು, ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವಾಗ, ಅವರ ತಂದೆ ತೀರಿದರು. ಅಲ್ಲಿಂದ ಬೆಂಗಳೂರಿಗೆ ವರ್ಗಗೊಂಡರು. ಆಗಲೇ ಧಿರೇಂದ್ರಗೋಪಾಲ್ ಅವರ ಪರಿಚಯವಾಗಿ, ಅವರ ಮೂಲಕ ಸಿನಿಮಾ ರಂಗಕ್ಕೂ ಪಾದಾರ್ಪಣೆ ಮಾಡಿದರು.
ಅದು 1979. ವಿಷ್ಣುವರ್ಧನ್ ಅಭಿನಯದ “ಊರಿಗೆ ಉಪಕಾರಿ’ ಚಿತ್ರ ಶುರುವಾಗುವುದರಲ್ಲಿತ್ತು. ಜೋಸೈಮನ್ ನಿರ್ದೇಶಕರು. ಕುಣಿಗಲ್ ನಾಗಭೂಷಣ್ ಸಂಭಾಷಣೆ ಬರೆಯುತ್ತಿದ್ದರು. ಧಿರೇಂದ್ರ ಗೋಪಾಲ್ ನಿರ್ದೇಶಕರನ್ನು ಪರಿಚಯಿಸಿ, “ಈ ಹುಡುಗ ಚೆನ್ನಾಗಿ ಪಾರ್ಟ್ ಮಾಡ್ತಾನೆ, ಒಂದ್ ಚಾನ್ಸ್ ಕೊಡಿ’ ಅಂದಿದ್ದರು. ಆಗ ಜೋಸೈಮನ್, ವಜ್ರಮುನಿ, ಧೀರೇಂದ್ರಗೋಪಾಲ್ ಅವರೊಂದಿಗೆ ಐವರು ಬಾಡಿಗಾರ್ಡ್ ಜತೆ ನಿಲ್ಲುವ ಚಾನ್ಸ್ ಕೊಟ್ಟರು! ಅದು ಮೊದಲ ಸಿನಿಮಾ. ಆ ಚಿತ್ರದ ಮೊದಲ ದೃಶ್ಯ ಹೀಗಿತ್ತು.
“ವಿಷ್ಣುವರ್ಧನ್ ಆ ಹಳ್ಳಿಗೆ ಪ್ರವೇಶ ಮಾಡಿದಾಗ, ಅವರನ್ನು ಅಡ್ಡಗಟ್ಟಿ, “ಇಲ್ಲಿ ಗೌಡ್ರ ಅಪ್ಪಣೆ ಇಲ್ಲದೆ ಯಾರೂ ಬರಕೂಡದು’ ಎಂಬ ಡೈಲಾಗ್ ಹೇಳಬೇಕು.
Related Articles
ಅಂದಿದ್ದರು. ದೇವರನ್ನ ನೆನಪಿಸಿಕೊಂಡು ನಟಿಸಿದರು ಆ ಶಾಟ್ ಓಕೆ ಆಯ್ತು. ಆಗ ವಿಷ್ಣುವರ್ಧನ್, “ಯಾರ್ರೀ ಅವರು ಚೆನ್ನಾಗಿ
ಮಾಡ್ತಾರೆ’. ಅಂತ ಕರೆದು ಪರಿಚಯ ಮಾಡಿಕೊಂಡ್ರು. ಆ ಸಿನಿಮಾದಲ್ಲಿ 3 ಸಾವಿರ ಸಂಭಾವನೆ ಸಿಕು¤. ಅಲ್ಲಿಂದ ಹಾಗೇ ಸಣ್ಣಪುಟ್ಟ
ಪಾತ್ರ ಮಾಡುತ್ತ ಸುಮಾರು 150 ಸಿನಿಮಾ ಮಾಡುವಲ್ಲಿ ಯಶಸ್ವಿಯಾದರು ಬ್ಯಾಂಕ್ ಜನಾರ್ದನ್. ಅಷ್ಟಾದರೂ ಬ್ಯಾಂಕ್
ಜನಾರ್ದನ್‌ಗೆ ಬೇಸರವಿತ್ತು. ಕಾರಣ, ಸೂಕ್ತ ಸಂಭಾವನೆ ಸಿಗದಿರುವುದು. ಆ ವೇಳೆ ಬ್ಯಾಂಕ್‌ನಲ್ಲಿ ಅಟೆಂಡರ್ ಆಗಿದ್ದ ಅವರಿಗೆ ಕ್ಲರ್ಕ್ ಭಡ್ತಿ ಹಿರಿಯೂರಿಗೆ ವರ್ಗಾವಣೆ ಮಾಡಲಾಯಿತು.
Advertisement
ಹೇಗೋ, ಆಗಷ್ಟೇ ಸಿನಿಮಾದಲ್ಲಿ ಭವಿಷ್ಯ ಕಂಡುಕೊಳ್ಳುತ್ತಿದ್ದ ದಿನಗಳಲ್ಲಿ ಪುನಃ ಹಿರಿಯೂರಿಗೆ ಹೋದರೆ ಹೇಗೆ ಎಂಬ ಲೆಕ್ಕಾಚಾರ ಹಾಕಿ ಪುನಃ ಬೆಂಗಳೂರಿಗೇ ವರ್ಗಾವಣೆ ಮಾಡಿಸಿಕೊಂಡರು. ಬೆಳಗ್ಗೆ 7.30 ರಿಂದ 10 ತನಕ ಗಾಂಧಿನಗರ ಸುತ್ತಾಡಿ ಅವಕಾಶ ಕೇಳ್ಳೋದು, ಮತ್ತೆ ಬ್ಯಾಂಕ್ ಕೆಲಸ ಮುಗಿಸಿ, 5 ರಿಂದ 8 ರ ತನಕ ಅವಕಾಶಕ್ಕೆ ಅಲೆದಾಡೋದು ಹೀಗೆ ಮಾಡುತ್ತಲೇ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿದ್ದರು. ಆಗ ಜಗ್ಗೇಶ್ ಪರಿಚಯವಾಯ್ತು. ಅತ್ತ ಮನೆ, ಹೆಂಡತಿ, ಮಕ್ಕಳು ಸಾಲ, ಸಮಸ್ಯೆ ಎಲ್ಲವೂ ಶುರುವಾಯ್ತು. ಸಿನ್ಮಾ ಅವಕಾಶ ಸರಿಯಾಗಿ ಸಿಗದೆ ಬೇಸರಗೊಂಡ ಬ್ಯಾಂಕ್ ಕೆಲಸವೇ ಸರಿ ಅಂತ ಡಿಸೈಡ್ ಮಾಡಿ 1980 ರ ದಶಕದಲ್ಲಿ ಮೂರ್‍ನಾಲ್ಕು ತಿಂಗಳು ಸಿನಿಮಾ ಕಡೆ ಮುಖ ಮಾಡಲಿಲ್ಲ. ಅಷ್ಟೊತ್ತಿಗೆ ಎಲ್ಲಾ ಹೀರೋಗಳ ಸಿನಿಮಾಗಳಲ್ಲೂ ಕೆಲಸ ಮಾಡಿದ್ದರು. ಅಣ್ಣಾವ್ರ ಜತೆ 6 ಚಿತ್ರ ಮಾಡಿದ್ದು ಮರೆಯದ ಅನುಭವ. ಸಿನಿಮಾ ಸಹವಾಸ ಬೇಡ ಅಂದುಕೊಂಡಿದ್ದವರಿಗೆ ಪುನಃ ಅವಕಾಶ ಸಿಕು¤. ಅದು ಕಾಶಿನಾಥ್ ಅವರ “ಅಜಗಜಾಂತರ’ ಚಿತ್ರದ ಮೂಲಕ. ಅದರಲ್ಲಿ ಬ್ರೋಕರ್ ಭೀಮಯ್ಯ ಪಾತ್ರ ಮಾಡಿದರು. ಅವರ ಸಿನಿ ಬದುಕಿನಲ್ಲಿ ಆ ಚಿತ್ರ 100 ದಿನ ಪೂರೈಸಿದ ಮೊದಲ ಚಿತ್ರವಾಯ್ತು. ಬ್ಯಾಂಕ್ ಜನಾರ್ದನ್ ಬೇಡಿಕೆ ಹೆಚ್ಚಾಯ್ತು. ನಂತರದ ದಿನಗಳಲ್ಲಿ ಬಿಜಿಯಾಗುತ್ತಲೇ, “ತರೆಲ ನನ್ಮಗ’ ಮಾ ಮಾಡಿದರು. ಅದೂ ೂರು ದಿನ ಕಂಡಿತು.
ಆಮೇಲೆ “ಶ್’ ಮಾಡಿದ್ರು. ದೂ ಸಕ್ಸಸ್ ಆಯ್ತು. ಸಂಭಾವನೆ ಈಗಿನಷ್ಟು ಇರಲಿಲ್ಲದಿದ್ದರೂ, ಚಿತ್ರಗಳ ಮೇಲೆ ಚಿತ್ರಗಳಲ್ಲಿನೆ ಮಾಡುತ್ತಿದ್ದರು. ಡಿಮ್ಯಾಂಡ್ ಮಾಡುತ್ತಿರಲಿಲ್ಲ ಹೀಗೆ ಸಿನಿಮಾ ಬಂದ ಜನಾರ್ದನ್ ಈಗ 750 ಸಿನಿಮಾ ಮಾಡಿದ್ದಾರೆ. ಈಗಲೂ ಉತ್ಸಾಹದಲ್ಲೇ ಕ್ಯಾಮೆರಾ ಮುಂದೆ ನಿಲ್ಲುವ ಜನಾರ್ದನ್ ಅವರಿಗೆ ಯಾರೊಬ್ಬರೂ ಗುರುತಿಸಿ, ಕರೆಯಲ್ಲ ಎಂಬ ನೋವಿದೆ. ಆ ದಿನಗಳೇ ಚೆನ್ನಾಗಿದ್ದವು ಎನ್ನುವ ಜನಾರ್ದನ್, ಈ ದಿನಗಳನ್ನು ದೂರುತ್ತಾರೆ. “ಅಣ್ಣಾವ್ರು ಸಣ್ಣ ಪಾತ್ರವಿದ್ದರೂ, ಕರೆದು ಅವರಿಗೆ ಕೆಲಸ ಕೊಡಿ ಅನ್ನುತ್ತಿದ್ದರು. ಆದರೆ, ಈಗಿನವರು ಹಾಗಿಲ್ಲ. ಬ್ಯಾಂಕ್ ಕೆಲಸಕ್ಕೆ 2000 ಇಸವಿಯಲ್ಲೇ ವಿಆರ್‌ಎಸ್ ಪಡೆದ ಅವರಿಗೆ ಹೃದಯ ಶಸOಉ ಚಿಕಿತ್ಸೆಯಾಗಿದೆ. ಕಲೆಯೇ ಬದುಕು ಅಂದುಕೊಂಡಿರೋ ಅವರಿಗೆ ಬಣ್ಣ ಬಿಟ್ಟರೆ ಬೇರೆ ಗೊತ್ತಿಲ್ಲ. “ಉದಯ ನಿಮಿತ್ತಂ ಬಹುಕೃತ ವೇಷಂ’ ಎನ್ನುವಂತೆ ಬೆಳಗಾಗುತ್ತಿದ್ದಂತೆ, ಬಣ್ಣದ ತುಡಿತ ಹೆಚ್ಚಾಗುತ್ತದೆ. “ಮನುಷ್ಯ ಎಷ್ಟೇ ಗುರುತಿಸಿಕೊಂಡರೂ, ನೆಮ್ಮದಿ ಇಲ್ಲದ ಮೇಲೆ ಎಲ್ಲವೂ ವ್ಯರ್ಥ’ ಎಂದಷ್ಟೇ ಹೇಳಿ ಮೌನಿಯಾಗುತ್ತಾರೆ ಬ್ಯಾಂಕ್ ಜನಾರ್ದನ್.
ವಿಜಯ್ ಭರಮಸಾಗರ