Advertisement

ನೋಟು ವಿರೂಪ: ಸಿಬಿಐ ತನಿಖೆ?

10:35 AM Jan 09, 2020 | Hari Prasad |

ಹೊಸದಿಲ್ಲಿ: ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ‘ಕಾಶ್ಮೀರ್‌ ಗ್ರಾಫಿಟಿ’ ಸಂಘಟನೆ ಆರ್‌ಬಿಐನ ಜಮ್ಮು ಶಾಖೆಯಲ್ಲಿ ವಿರೂಪಗೊಳಿಸಿದ 30 ಕೋಟಿ ರೂ.ಗಳನ್ನು ವಿನಿಮಯ ಮಾಡಿಕೊಂಡಿದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಇದು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರ. ಸಾಧ್ಯವಿದ್ದರೆ ಪ್ರಕರಣವನ್ನು ಸಿಬಿಐನಿಂದಲೇ ತನಿಖೆಗೆ ಒಳಪಡಿಸಬೇಕು ಎಂದು ಸಿಜೆಐ ಎಸ್‌. ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಮಂಗಳವಾರ ಸೂಚಿಸಿದೆ.

Advertisement

ಕೋರ್ಟ್‌ ಹಾಲ್‌ನಲ್ಲಿ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ನ್ಯಾಯಪೀಠದ ಮುಂದೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರತಿಯನ್ನು ಪಡೆದು ಕೊಳ್ಳುವಂತೆ ನ್ಯಾಯಪೀಠ ಸೂಚಿಸಿತು. ಆದರೆ ಈ ಸಂದರ್ಭದಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ನ್ಯಾಯಪೀಠ ಅರ್ಜಿ ಸಲ್ಲಿಸಿದ ಸತೀಶ್‌ ಭಾರದ್ವಾಜ್‌ ಅವರಿಗೆ ಸೂಕ್ತ ದಿನದಂದು ಸರಕಾರದ ಗಮನಕ್ಕೆ ತಂದು ಪ್ರಕರಣದ ಬಗ್ಗೆ ಶೀಘ್ರ ವ್ಯವಸ್ಥೆ ಮಾಡುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next