Advertisement
ಇದು ಸಂಪೂರ್ಣ ಡಿಜಿಟಲ್ ಕರೆನ್ಸಿ. ಸೈಬರ್ ಅಟ್ಯಾಕರ್ಸ್ ಆಯ್ಕೆ ಮಾಡಿಕೊಂಡ ಕರೆನ್ಸಿಯೂ ಇದೇ! ಸರಕುಗಳು ಮತ್ತು ಸೇವೆಗಳನ್ನು ಖರೀದಿಸಲು, ಬ್ಯಾಂಕುಗಳು, ಕ್ರೆಡಿಟ… ಕಾರ್ಡ್ ಅಥವಾ ಇತರ ಮೂರನೇ ವ್ಯಕ್ತಿಗಳನ್ನು ಹೊರತುಪಡಿಸಿ ಹಣವನ್ನು ವಿನಿಮಯ ಮಾಡಬಲ್ಲ ಕರೆನ್ಸಿ.
Related Articles
ಒಂದು ಬಿಟ್‌ಕಾಯಿನ್‌ನ ಮೌಲ್ಯವು ವರ್ಷದ ಹಿಂದೆ 457.04 ಅಮೆರಿಕನ್ ಡಾಲರ್ ಇತ್ತು. ಈಗ ಸರಿಸುಮಾರು 1819.4 ಅಮೆರಿಕನ್ ಡಾಲರ್ ಆಗಿದೆ. ಕಳೆದ 12 ತಿಂಗಳಿನಲ್ಲಿ ಸುಮಾರು 4 ಪಟ್ಟು ಏರಿಕೆ ಕಂಡಿದೆ. ಜಾಗತಿಕ ಕರೆನ್ಸಿಗಳಿಗೆ ತಕ್ಕಂತೆ ಇದರ ಬೆಲೆ ಹೆಚ್ಚಾಕಮ್ಮಿ ಆಗುತ್ತಿರುತ್ತದೆ.
Advertisement
ಚಲಾವಣೆ ಹೇಗಾಗುತ್ತೆ?ಬಿಟ್ ಕಾಯಿನ್‌ಗಳು ಕೇವಲ ಕಂಪ್ಯೂಟರ್ ಕೋಡ್‌ಗಳಷ್ಟೇ. ಒಬ್ಬ ವ್ಯಕ್ತಿಯಿಂದ ವ್ಯಕ್ತಿಗೆ ಆನ್‌ಲೈನ್ ಟ್ರಾನ್ಸಾಕ್ಷನ್ ಮೂಲಕವೇ ಚಲಾವಣೆಗೊಳ್ಳುವಂಥವು. ಟ್ರಾನ್ಸಾಕ್ಷನ್ ಅನ್ನು ಅನಾಮಧೇಯನೂ ಮಾಡಬಹುದು. ಈ ಕರೆನ್ಸಿಯು ಲಾಭವನ್ನೇ ನೆಚ್ಚಿಕೊಂಡಿರುವ ವ್ಯಕ್ತಿಗಳಿಗೆ, ಟೆಕ್ ಉತ್ಸಾಹಿಗಳಿಗೆ, ಅಪರಾಧಿಗಳಿಗೆ, ಹ್ಯಾಕರ್ಸ್‌ಗಳಿಗೆ ಹೆಚ್ಚು ಉಪಯುಕ್ತವೇ ಆಗಿದೆ. ಎಲ್ಲ ವ್ಯವಹಾರಗಳೂ ಸಾರ್ವಜನಿಕವಾಗಿ ಮತ್ತು ಶಾಶ್ವತವಾಗಿ ನೆಟ್‌ವರ್ಕ್‌ನಲ್ಲಿಯೇ ಶೇಖರಿಸಲ್ಪಡುತ್ತವೆ. ಬಿಟ್ ಕಾಯಿನ್ ಅಕೌಂಟಿನಲ್ಲಿ ಬ್ಯಾಲೆನ್ಸನ್ನೂ ನೋಡಬಹುದು.
——
ಬಿಟ್ ಕಾಯಿನ್ ಅಕೌಂಟ… ಅನ್ನು ಸೈಬರ್ ಪೋಲಿಸ್ ಭೇದಿಸಲು ಸಾಧ್ಯವಿಲ್ಲವೇ?
ಸಂಪೂರ್ಣವಾಗಿ ಸಾಧ್ಯವಿಲ್ಲ ಎಂಬ ಮಾತು ಸುಳ್ಳು. ಏಕೆಂದರೆ, ಒಂದÇÉಾ ಒಂದು ದಿನ ಬಿಟ್ ಕಾಯಿನ್ ಖಾತೆದಾರ ತನ್ನ ಬ್ಯಾಲೆನ್ಸ್ ಅನ್ನು ರಿಯಲ… ಕರೆನ್ಸಿಗೆ ಬ್ಯಾಂಕ್ ಅಕೌಂಟ…ನಲ್ಲಿ ಕನ್ವರ್ಟ್ ಮಾಡಿಕೊಂಡಾಗ ಆ ಬ್ಯಾಂಕ್ ಅಕೌಂಟ… ಮೂಲಕ ಮಾತ್ರ ಬಳಕೆದಾರನನ್ನು ಕಂಡುಹಿಡಿಯಬಹುದು. ಆದರೆ, ಈವರೆಗೂ ಬಿಟ್ ಕಾಯಿನ್ ಅನ್ನು ರಚಿಸಿದವನನ್ನೇ ನಾವು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈತನ ಅಕೌಂಟ…ನಲ್ಲಿ ಒಂದು ನೂರು ಕೋಟಿ ಡಾಲರ್‌ಗೂ ಅಧಿಕ ಬಿಟ್‌ಕಾಯಿನ್ ಜಮೆ ಆಗಿದೆ ಎಂಬ ಮಾಹಿತಿ ಇದೆ.
—–
ಬಿಟ್ ಕಾಯಿನ್ ಅವಾಂತರಗಳು
1. ಹೆಸರಾಂತ ಐಟಿ ಕಂಪನಿ ವಿಪ್ರೋಗೆ ಇತ್ತೀಚೆಗೆ ಅನಾಮಧೇಯ ಇಮೇಲ… ಬೆದರಿಕೆ ಬಂದಿತ್ತು: ಮೇ 25ರೊಳಗೆ ನಿರ್ದಿಷ್ಟ ಬಿಟ್ ಕಾಯಿನ್ ವಾಲೆಟ…ಗೆ 500 ಕೋಟಿ ರೂ. ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲದಿದ್ರೆ, ಕ್ಯಾಂಪಸ್‌ನಲ್ಲಿ ವಿಷಕಾರಿ ಅನಿಲವನ್ನು ಹರಡುವುದಾಗಿ ಬೆದರಿಕೆ ಒಡ್ಡಿ¨ªಾರೆ. 2. ಈಗ ವನ್ನಾಕ್ರೈ ವೈರಸ್ ಬಿಟ್ಟಿರುವ ಹ್ಯಾಕರ್ಸ್‌ಗಳೂ ಬಿಟ್ ಕಾಯಿನ್‌ಗೆ ಬೇಡಿಕೆ ಇಟ್ಟಿದ್ದಾರೆ. “ನಿಮ್ಮ ಅತ್ಯಮೂಲ್ಯ ಫೈಲ್‌ಗಳನ್ನು ಲಾಕ್ ಮಾಡಿ ವಶಪಡಿಸಿಕೊಂಡಿದ್ದೇವೆ. ಬಿಟ್ ಕಾಯಿನ್ ಮೂಲಕ 300 ಡಾಲರ್ ನೀಡಿದರೆ, ಅದನ್ನು ಬಿಡಿಸಿ ಕೊಡುತ್ತೇವೆ’ ಎಂದಿದ್ದಾರೆ. 3 ದಿನಗಳೊಳಗೆ ಹಣ ಪಾವತಿಸದಿದ್ದರೆ ಬೇಡಿಕೆ ಮೊತ್ತ 600 ಡಾಲರ್ ಆಗುತ್ತದೆ. ವಾರದ ಬಳಿಕವೂ ಮಣಿಯದಿದ್ದರೆ, ವನ್ನಾಕ್ರೈ ಎಲ್ಲ ದತ್ತಾಂಶಗಳನ್ನು ಅಳಿಸಲಾಗುತ್ತದೆಂಬ ಬೆದರಿಕೆ ಇದು. 3. ವನ್ನಾಕ್ರೈ ವೈರಸ್ ಅಮೆರಿಕ, ಭಾರತ ಸೇರಿದಂತೆ 150 ದೇಶಗಳ ಸುಮಾರು 2 ಲಕ್ಷಕ್ಕೂ ಅಧಿಕ ಕಂಪ್ಯೂಟರ್‌ಗಳಿಗೆ ದಾಳಿ ಇಟ್ಟಿದೆ. ತಿರುಪತಿ ತಿಮ್ಮಪ್ಪನನ್ನು ಈ ವೈರಸ್ ಬಿಟ್ಟಿಲ್ಲ. ಅಲ್ಲಿನ 30 ಕಂಪ್ಯೂಟರ್‌ಗಳು ವೈರಸ್ ದಾಳಿಗೆ ತುತ್ತಾಗಿದ್ದು, ಡಾಟಾ ಬೇರೆ ಕಡೆಯೂ ಬ್ಯಾಕಪ್ ಇರವುದರಿಂದಾಗಿ ರಿಕವರ್ ಮಾಡಬಹುದಾದ ಸಂಭವನೀಯತೆ ಇದೆ. ಹ್ಯಾಕರ್ಸ್‌ಗಳು ಇಲ್ಲೂ ಬಿಟ್‌ಕಾಯಿನ್‌ನ ಬೇಡಿಕೆ ಇಟ್ಟಿದ್ದಾರೆ.
—-
ನೀವಿಷ್ಟು ಮಾಡಿ…
– ಅಪರಿಚಿತ ಇಮೇಲ್ ಲಿಂಕ್‌ಗಳನ್ನು ಓಪನ್ ಮಾಡಬೇಡಿ.
– ಆಡಿಯೋ, ವಿಡಿಯೋ ಅಥವಾ ಸಾಫ್ಟ್ವೇರ್ ಡೌನ್‌ಲೋಡ್ ಮಾಡಿಕೊಳ್ಳುವಾಗ ಯಾವ ಲಿಂಕ್‌ಗಳನ್ನೂ ಕ್ಲಿಕ್ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಗಮನವಿರಲಿ.
– ಸಿಕ್ಕ ಸಿಕ್ಕವರ ಪೆನ್‌ಡ್ರೈವ್‌ಗಳನ್ನು ನಿಮ್ಮ ಕಂಪ್ಯೂಟರ್‌ಗೆ ಹಾಕಿಕೊಳ್ಳಬೇಡಿ.
– ವಿಂಡೋಸ್ ಡಿಫೆಂಡರ್ ಅನ್ನು ಆಗಾಗ್ಗೆ ನವೀಕರಿಸಿಕೊಳ್ಳಿ. – ಪ್ರವೀಣ ದಾನಗೌಡ