Advertisement

Sumalatha Ambareesh:ಮಂಡ್ಯ ಕ್ಷೇತ್ರದ ಕುತೂಹಲಕ್ಕೆ ತೆರೆ,ಬೆಂಬಲಿಗರ ಸಭೇಲಿ ನಿರ್ಧಾರ ಘೋಷಣೆ

01:15 PM Apr 03, 2024 | Team Udayavani |

ಮಂಡ್ಯ: ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ(sumalatha ambareesh) ಸುಮಲತಾ ಅಂಬರೀಶ್‌, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡದೇ, ಎನ್‌ ಡಿಎ ಮೈತ್ರಿ ಅಭ್ಯರ್ಥಿಯಾದ ಎಚ್.ಡಿ.ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ಬುಧವಾರ (ಏಪ್ರಿಲ್‌ 03) ಘೋಷಿಸಿದ್ದಾರೆ.

Advertisement

ಇದನ್ನೂ ಓದಿ:Arunachal Pradesh ಹೊಟೇಲ್‌ನಲ್ಲಿ ಶವವಾಗಿ ಪತ್ತೆಯಾದ ಕೇರಳದ ಮೂವರು; ಮಾಟಮಂತ್ರವೇ ಕಾರಣ?

ಮಂಡ್ಯದಲ್ಲಿ(Mandya) ನಡೆದ ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುಮಲತಾ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ಹೇಳುವ ಮೂಲಕ ಜಿದ್ದಾಜಿದ್ದಿನ ಕಣದಿಂದ ಹಿಂದೆ ಸರಿದಂತಾಗಿದೆ.

ಬೆಂಬಲಿಗರ ಸಭೆಗೂ ಮುನ್ನ ಸುಮಲತಾ ಅಂಬರೀಶ್‌ ಅವರು ಕಾಳಿಕಾಂಬ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಸ್ಯಾಂಡಲ್‌ ವುಡ್‌ ನಟ ದರ್ಶನ್‌, ಅಭಿಷೇಕ್‌ ಅಂಬರೀಶ್‌ ಜತೆಗಿದ್ದರು.

ಕಳೆದ ಚುನಾವಣೆ ಒಂದು ರೀತಿಯ ಸವಾಲು ಒಡ್ಡಿದ್ದರೆ, ಈ ಬಾರಿಯದ್ದು ಮತ್ತೊಂದು ತೆರನಾದ ಸವಾಲಾಗಿದೆ. ಕೆಲವರು ಪಕ್ಷೇತರವಾಗಿ ಸ್ಪರ್ಧಿಸಿ ಎಂದು ಸಲಹೆ ನೀಡಿದ್ದರು. ಬಿಜೆಪಿ(BJP) ಕೂಡಾ ನನಗೆ ಹಲವಾರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಫರ್‌ ನೀಡಿತ್ತು. ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರೊಬ್ಬರು ಸುಮಲತಾ ಅವಶ್ಯಕತೆ ನಮಗಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾನು ನನ್ನ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕಾದರೆ, ನನ್ನ ನಿರ್ಧಾರವನ್ನು ತಿಳಿಸಬೇಕಾದ ಅವಶ್ಯಕತೆ ಇದೆ ಎಂದು ಸುಮಲತಾ ಹೇಳಿದರು.

Advertisement

ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ನನ್ನ ಬೆಂಬಲಿಗರ ಜತೆ ನಾನು ಸದಾ ಇರುತ್ತೇನೆ. ಅಧಿಕಾರಕ್ಕೆ ಬರುತ್ತೆ, ಹೋಗುತ್ತೆ. ಆದರೆ ಪ್ರೀತಿ ಮುಖ್ಯ. ನಾನು ಪಕ್ಷೇತರ ಸಂಸದೆಯಾದರು ಕೂಡಾ ನಾಲ್ಕು ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದು ಬಿಜೆಪಿ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಹೀಗಾಗಿ ನಾನು ಶೀಘ್ರದಲ್ಲೇ ಬಿಜೆಪಿ ಪಕ್ಷ ಸೇರಲು ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಸುಮಲತಾ ಅವರು ಘೋಷಿಸುವ ಮೂಲಕ ಮಂಡ್ಯ ಕ್ಷೇತ್ರದ ರಾಜಕೀಯ ಅಖಾಡದಲ್ಲಿನ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next