ಹಾಸನ: ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆ ಯ ಲ್ಲಿಯೂ ಕಟ್ಟುನಿಟ್ಟಿನ ವಾರಾಂತ್ಯದ ಕರ್ಫ್ಯೂ ಜಾರಿ ಆಗಲಿದೆ ಎಂದು ಜಿಲ್ಲಾ ಧಿ ಕಾರಿ ಆರ್.ಗಿರೀಶ್ ಹೇಳಿದರು.
ವಾರಂತ್ಯದ ಕರ್ಫ್ಯೂ: ಸುದ್ದಿಗಾರರೊಂದಿಗೆ ಮಾತನಾಡಿ, ಶುಕ್ರವಾರ ರಾತ್ರಿ 10 ಗಂಟೆಯಿಂ ದ ಸೋಮವಾರ ಮುಂ ಜಾನೆ 5 ಗಂಟೆವರೆಗೂ ಜ.19 ರವರೆಗೂ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಆನಂತರ ವಾರದ 5 ದಿನ ರಾತ್ರಿ ಕಫೂì ಜಾರಿಯಲ್ಲಿರಲಿದೆ ಎಂದು ಹೇಳಿದರು.
ಸಹಕಾರ ಅವಶ್ಯ: ಸರ್ಕಾರದ ನಿರ್ದೇಶನದಂತೆ ಭಾಗಶಃ ಲಾಕ್‌ಡೌನ್ ಜ.19ರವರೆಗೂ ಜಾರಿಯಲ್ಲಿದ್ದು, ರ್ಯಾಲಿ, ಧರಣಿ, ಪ್ರತಿಭಟನಾ ಸಭೆ ಹಾಗೂ ಮುಷ್ಕರ ನಿರ್ಬಂಧಿಸಲಾಗಿದೆ. ಎಲ್ಲಾ ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಅನಗತ್ಯ ಸಂಚಾರ ಬೇಡ: ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದು ಶನಿವಾರ ಮತ್ತು ಭಾನುವಾರ ಜನ ತುರ್ತು ಸಂದರ್ಭ ಹೊರತುಪಡಿಸಿ ಅನಗತ್ಯವಾಗಿ ಸಂಚರಿಸಬಾರದು.
ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿದೆ. ಹಾಲು, ಹಣ್ಣು, ತರಕಾರಿ ಮಾರಾಟಕ್ಕೆ ನಿರ್ಬಂಧವಿಲ್ಲ. ವಾರಾಂತ್ಯದ ಕರ್ಫ್ಯೂ ಹೊರತಾದ 5 ದಿನಗಳಲ್ಲಿ ಸಿನಿಮಾ ಮಂದಿರ, ಬಾರ್, ಪಬ್, ಕ್ಲಬ್‌ಗಳಲ್ಲಿ ಶೇ.50 ಗ್ರಾಹಕರ ಹಾಜರಾತಿಗೆ ಮಾತ್ರ ಅವಕಾಶವಿದೆ ಎಂದು ಹೇಳಿದರು. ಕೊರೊನಾ ಸೋಂಕು ಹೆಚ್ಚಳ: ಜಿಲ್ಲೆಯಲ್ಲಿ ಪ್ರಸ್ತುತ ಪಾಸಿ ಟಿವಿಟಿ ದರ ಶೇ.0.36 ಇದೆ. ಕಳೆದ ಒಂದು ವಾರ ದಿಂದ ಪಾಸಿಟಿವ್ ಪ್ರಕರಣ ಏರುತ್ತಲೇ ಇವೆ. ಹೀಗಾಗಿ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ವಾಗಿದೆ.
ಸರ್ಕಾರದ ಮಾರ್ಗಸೂಚಿ ಪಾಲಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು. ಕೊರೊನಾ ಲಸಿಕೆ: ಜಿಲ್ಲೆಯಲ್ಲಿ ಶೇ.99ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ಹಾಗೂ ಶೇ.85 ರಷ್ಟು ಜನರಿಗೆ 2ನೇ ಡೋಸ್ ಲಸಿಕೆ ಹಾಕಲಾಗಿದೆ. ಜ.3ರಿಂದ ಆರಂಭವಾಗಿರುವ ಲಸಿಕೆ ಅಭಿಯಾನದಲ್ಲಿ 15 ರಿಂದ 18 ವರ್ಷದೊಳಗಿನ ಶೇ.50 ಮಂದಿ ಲಸಿಕೆ ಪಡೆದುಕೊಂಡಿದ್ದಾರೆಂದರು.