Advertisement
ಶುಕ್ರವಾರ ಸಂಜೆ ತುರ್ತುಸುದ್ದಿಗೋಷ್ಠಿ ನಡೆಸಿದ ಅವರು, ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ ಜಾರಿಯಲ್ಲಿದ್ದಂತೆ ಅಗತ್ಯ ಸೇವೆಗಳು ಹೊರತುಪಡಿಸಿ (ಆಸ್ಪತ್ರೆ, ಮೆಡಿಕಲ್, ದಿನಸಿ ಅಂಗಡಿ, ತರಕಾರಿ, ಮಾಂಸದಂಗಡಿ) ಬೇರೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಮತ್ತು ಇತರ ವಹಿವಾಟುಗಳು ನಡೆಯುವುದಿಲ್ಲ. ಫುಡ್ ಡೆಲಿವರಿಗೆ ಅವಕಾಶವಿದೆ. ಬಾರ್ ತೆರೆಯುವುದಿಲ್ಲ ಎಂದರು.
ಇದುವರೆಗೂ ಬೆಂಗಳೂರಿನ ವಿವಿಧ ನಿಲ್ದಾಣಗಳಿಂದ 100 ರೈಲುಗಳು ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದು, ಶುಕ್ರವಾರ 101ನೇ ರೈಲು ಹೋಗಿದೆ. ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ 4500 ಕಾರ್ಮಿಕರು ಪ್ರಯಾಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಶುಕ್ರವಾರ ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಹೊರಟ ಶ್ರಮಿಕ್ ರೈಲಿಗೆ ಚಾಲನೆ ನೀಡಿದರು. ಈ ವೇಳೆ ಕಾರ್ಮಿಕರು ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದು ಕಂಡು ಬಂತು.