ಬೆಳಗಾವಿ: ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಸೋಂಕಿತರ ಬಿಡುಗಡೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಒಂದೇ ದಿನ 644 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 263 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ.
ಬೆಳಗಾವಿಯ 60 ವರ್ಷದ ವ್ಯಕ್ತಿ ಹಾಗೂ ಬೆಳಗಾವಿಯ 76 ವರ್ಷದ ವೃದ್ಧ ಕೋವಿಡ್ ಗೆ ಬಲಿಯಾಗಿದ್ದಾರೆ. ಒಟ್ಟು 226 ಮಂದಿ ಕೊರೊನಾಗೆ ಬಲಿಯಾದಂತಾಗಿದೆ. 263 ಹೊಸ ಪ್ರಕರಣಗಳಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15619 ಆಗಿದೆ. ಸೋಂಕಿನಿಂದ ಒಟ್ಟು 11446 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್-19 ಆಸ್ಪತ್ರೆಯಲ್ಲಿ 3947 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿನವರೆಗೆ 117990 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 26523 ಜನರು 14 ದಿನಗಳ ಕಾಲ ಗೃಹ ನಿಗಾದಲ್ಲಿದ್ದರೆ, ಒಟ್ಟು 27623 ಜನರು 14 ದಿನಗಳ ಗೃಹ ನಿಗಾ ಪೂರ್ಣಗೊಳಿಸಿದ್ದಾರೆ.
59897 ಜನರು 28 ದಿನಗಳ ಗೃಹ ನಿಗಾ ಅವಧಿ ಮುಕ್ತಾಯಗೊಳಿಸಿದ್ದಾರೆ. ಇಂದಿನವರೆಗೆ 116694 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆಕಳುಹಿಸಲಾಗಿದ್ದು, 99643 ಜನರ ವರದಿ ನಕಾರಾತ್ಮಕವಾಗಿದೆ. ಒಟ್ಟು 415 ಜನರ ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ.
18 ಜನರಿಗೆ ಸೋಂಕು : ಖಾನಾಪುರ: ತಾಲೂಕಿನಲ್ಲಿ 18 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಪಟ್ಟಣದ ರುಮೇವಾಡಿ ಕ್ರಾಸ್ 2, ಬರುಡ ಗಲ್ಲಿ 1, ಶಿರೋಲಿ 1, ಮಂತುರ್ಗಾ 7,ಬೀಡಿ 3, ಜಾಡನಾವಗಾ 1, ಕುಪ್ಪಟಗೇರಿ 1, ಹೆಮ್ಮಡಗಾ 1, ಮನಸಾಪುರದಲ್ಲಿ 1 ಪ್ರಕರಣ ಕಂಡು ಬಂದಿದೆ.
7 ಜನರಿಗೆ ಸೋಂಕು ಗೋಕಾಕ: ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಗುರುವಾರ 7 ಜನರಿಗೆ ಕೊರೊನಾ ದೃಢಪಟ್ಟಿದೆ ಎಂದು ತಾಲೂಕಾ ಆರೋಗ್ಯಾ ಧಿಕಾರಿ ಡಾ| ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರ, ಜೋಕಾನಟ್ಟಿ ಹಾಗೂ ಮದವಾಲ ತಲಾ ಮೂರು, ಅಕ್ಕತಂಗೇರಹಾಳ ಗ್ರಾಮದಲ್ಲಿ ಒಬ್ಬರಿಗೆ ಸೋಂಕುದೃಢಪಟ್ಟಿದೆ. ಸೋಂಕಿತರಿಗೆ ಸಮೀಪದಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.