Advertisement

ಸಾವಿರಕ್ಕೇರಿದ ಗುಣಮುಖರ ಸಂಖ್ಯೆ

12:48 PM Aug 04, 2020 | Suhan S |

ಬೆಳಗಾವಿ: 15 ದಿನಗಳ ಅವಧಿಯಲ್ಲಿ ಅತಿ ಕಡಿಮೆ ಸಂಖ್ಯೆ ಕೋವಿಡ್ ಪ್ರಕರಣಗಳು ಸೋಮವಾರ ಪತ್ತೆಯಾಗಿದ್ದು, ಕೇವಲ 60 ಹೊಸ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಆದರೆ ಒಂದೇ ದಿನ 10 ಜನ ಕೋವಿಡ್ ಗೆ ಬಲಿಯಾಗಿರುವುದು ಭಯ ಹುಟ್ಟಿಸಿದೆ.

Advertisement

ಜಿಲ್ಲೆಯಲ್ಲಿ ಒಟ್ಟಾರೆ 3688 ಮಂದಿ ಕೋವಿಡ್ ಸೋಂಕಿತರಾಗಿದ್ದು, ಇದರಲ್ಲಿ ಸೋಮವಾರ 29 ಜನ ಬಿಡುಗಡೆ ಆಗಿದ್ದಾರೆ. ಒಟ್ಟು 1080 ಜನ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇನ್ನೂ 868 ಜನರ ವರದಿ ಬರುವುದು ಬಾಕಿ ಇದೆ. ಬೈಲಹೊಂಗಲದ 54 ವರ್ಷದ ವ್ಯಕ್ತಿ, ಬೆಳಗಾವಿಯ 56 ವರ್ಷದ ವ್ಯಕ್ತಿ, ಬೆಳಗಾವಿಯ 68 ವರ್ಷದ ವ್ಯಕ್ತಿ, ರಾಮದುರ್ಗದ 50 ವರ್ಷದ ವ್ಯಕ್ತಿ, ಬೆಳಗಾವಿಯ 47 ವರ್ಷದ ಮಹಿಳೆ, ಅಥಣಿಯ 70 ವ ವರ್ಷದ ವೃದ್ಧ, ರಾಮದುರ್ಗ 51 ವರ್ಷದ ವ್ಯಕ್ತಿ, ಚಿಕ್ಕೋಡಿಯ 75 ವರ್ಷದ ವೃದ್ಧ, ಬೆಳಗಾವಿಯ 56 ವರ್ಷದ ವ್ಯಕ್ತಿ, ಅಥಣಿಯ 70 ವರ್ಷದ ವೃದ್ಧ ಕೋವಿಡ್ ಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 85ಕ್ಕೇರಿಕೆ ಆಗಿದೆ.

ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌-19 ವಾರ್ಡ್‌ನಲ್ಲಿ ಸದ್ಯ 2523 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿನವರೆಗೆ 44479 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 8975 ಜನರು 14 ದಿನಗಳ ಕಾಲ ಗೃಹ ನಿಗಾದಲ್ಲಿದ್ದರೆ, ಒಟ್ಟು 7839 ಜನರು 14 ದಿನಗಳ ಗೃಹ ನಿಗಾ ಪೂರ್ಣಗೊಳಿಸಿದ್ದಾರೆ. 25278 ಜನರು 28 ದಿನಗಳ ಗೃಹ ನಿಗಾ ಅವಧಿ  ಮುಕ್ತಾಯಗೊಳಿಸಿದ್ದಾರೆ. ಇಂದಿನವರೆಗೆ 43183 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 37853 ವರದಿ ನಕಾರಾತ್ಮಕವಾಗಿದೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next