Advertisement
ಆರೋಗ್ಯ ಇಲಾಖೆಯಲ್ಲಿ ಸೆಪ್ಟೆಂಬರ್ 25 ರವರೆಗೆ ದಾಖಲಾದ ಮಾಹಿತಿ ಪ್ರಕಾರ (ಸೆ.25ರ ನಂತರದ ಅಂಕಿ-ಸಂಖ್ಯೆ ಆರೋಗ್ಯ ಇಲಾಖೆ ಡಾಟಾ ಎಂಟ್ರಿ ನೌಕರರ ಪ್ರತಿಭಟನೆಯಿಂದ ದಾಖಲಾಗಿಲ್ಲ) ಜಿಲ್ಲೆಯಲ್ಲಿ 86 ವರ್ಷ ಮೇಲ್ಪಟ್ಟ 55 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇವರಲ್ಲಿ ಮೂವರು ಮೃತಪಟ್ಟಿದ್ದಾರೆ. 47 ಮಂದಿ ಕೊರೊನಾ ಗೆದ್ದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 86 ವರ್ಷ ಮೇಲ್ಪಟ್ಟವರಲ್ಲಿ ಇನ್ನೂ ಐವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
Related Articles
Advertisement
ಸಾವಿನ ವಿವರ: 16-25 ವರ್ಷದೊಳಗಿನ ಇಬ್ಬರು, 26-35 ವರ್ಷದೊಳಗಿನ ಐವರು, 36-45 ವರ್ಷದೊಳಗಿನ 21 ಮಂದಿ, 46-55ವರ್ಷದೊಳಗಿನ 48 ಜನ, 56-65ವರ್ಷದೊಳಗಿನ 81 ಜನ, 66-75ವರ್ಷದೊಳಗಿನ 55ಜನ, 76-85ವರ್ಷದೊಳಗಿನ 19ಜನ ಹಾಗೂ 86 ಮೇಲ್ಪಟ್ಟ ಮೂವರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಐದು ವರ್ಷದೊಳಗಿನ ಹಾಗೂ 6-15 ವರ್ಷದೊಳಗಿನ ಮಕ್ಕಳ ಸಾವು ಸಂಭವಿಸದೇ ಇರುವುದು ಸಮಾಧಾನಕರ ಸಂಗತಿಯಾಗಿದೆ.
ಗುಣಮುಖರಾದವರ ಮಾಹಿತಿ: ಐದು ವರ್ಷದೊಳಗಿನ 183 ಮಕ್ಕಳು, 6-15 ವರ್ಷದೊಳಗಿನ 519 ಮಕ್ಕಳು, 16-25 ವರ್ಷದೊಳಗಿನ 1512 ಮಕ್ಕಳು, 26-35ವರ್ಷದೊಳಗಿನ 2310 ಯುವಜನರು, 36-45 ವರ್ಷದೊಳಗಿನ 2204 ಮಂದಿ, 46-55 ವರ್ಷದೊಳಗಿನ 1976 ಜನ, 56-65 ವರ್ಷದೊಳಗಿನ 1673 ಜನ, 66-75 ವರ್ಷದೊಳಗಿನ 749 ಹಿರಿಯರು, 76-85 ವರ್ಷದೊಳಗಿನ 210 ಹಿರಿಯರು ಹಾಗೂ 86 ವರ್ಷ ಮೇಲ್ಪಟ್ಟ 47 ಅತಿ ಹಿರಿಯರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಆರಂಭದ ದಿನಗಳಲ್ಲಿ ಮರಣ ಪ್ರಮಾಣ ಜಾಸ್ತಿಯಾಗುವ ಮೂಲಕ ಜನರಲ್ಲಿ ಆತಂಕ ಮೂಡಿಸಿತ್ತು. ಈಗ ಕೆಲವು ದಿನಗಳಿಂದ ಮರಣ ಪ್ರಮಾಣ ಇಳಿಕೆಯಾಗಿರುವುದು, ಗುಣಮುಖರಾಗುತ್ತಿರುವ ಪ್ರಮಾಣ ಏರಿಕೆಯಾಗುತ್ತಿರುವುದು ಕೊಂಚ ಸಮಾಧಾನ ಮೂಡಿಸಿದೆ.
ಜಿಲ್ಲೆಯಲ್ಲಿ ಆರಂಭದ ದಿನಗಳಲ್ಲಿ ಮರಣ ಪ್ರಮಾಣ ಹೆಚ್ಚಾಗಿತ್ತು. ಈಗ ಮರಣ ಪ್ರಮಾಣ ಇಳಿಕೆಯಾಗುತ್ತಿದ್ದು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಜನರು ಕೋವಿಡ್ ಸೋಂಕು ಲಕ್ಷಣ ಕಂಡ ಕೂಡಲೇ ತಪಾಸಣೆ ಮಾಡಿಸಿಕೊಂಡರೆ ಶೀಘ್ರ ಗುಣಮುಖರಾಗಬಹುದಾಗಿದೆ. -ಡಾ| ರಾಘವೇಂದ್ರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ
ರೋಗ ಲಕ್ಷಣ ಕಂಡ ಆರಂಭದಲ್ಲಿಯೇ ನಮ್ಮ ಮಕ್ಕಳು ಆಸ್ಪತ್ರೆಗೆ ದಾಖಲಿಸಿದರು. ಕೋವಿಡ್ ಸುರಕ್ಷತಾ ಕ್ರಮ, ಔಷಧ ಕ್ರಮ ಹಾಗೂ ಮನೆಮದ್ದು ಎಲ್ಲವನ್ನೂ ಸರಿಯಾಗಿ ಪಾಲಿಸಿದ್ದರಿಂದ ಈಗ ಆರೋಗ್ಯವಾಗಿ ಮನೆಯಲ್ಲಿದ್ದೇನೆ. -ಅಮಿನಾಬಿ, ಗುಣಮುಖರಾದ ಹಿರಿಯಜ್ಜಿ
-ಎಚ್.ಕೆ. ನಟರಾಜ