ಮೆಲ್ಬೋರ್ನ್: ಟೆಸ್ಟ್ ಕ್ರಿಕೆಟ್ ನ ನಂ.1 ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಭಾರತೀಯ ಬ್ಯಾಟ್ಸಮನ್ ಓರ್ವನಿಗೆ ಬೌಲಿಂಗ್ ಮಾಡಲು ಹೆದರುತ್ತಾರಂತೆ. 2018-19ರ ಐತಿಹಾಸಿಕ ಆಸೀಸ್ ಟೆಸ್ಟ್ ಸರಣಿ ಭಾರತ ಗೆದ್ದು ವರುಷ ಒಂದು ಕಳೆದರೂ ಕಮಿನ್ಸ್ ಗೆ ಅದರ ನೆನಪು ಇನ್ನೂ ಕಾಡುತ್ತಿದೆ.
ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಶನ್ ನಡೆಸಿದ್ದ ಲೈವ್ ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಪ್ಯಾಟ್ ಕಮಿನ್ಸ್ ಈ ರೀತಿ ಹೇಳಿದ್ದರೆ.
ಯಾವ ಬ್ಯಾಟ್ಸಮನ್ ಗೆ ಬಾಲ್ ಹಾಕಲು ನಿಮಗೆ ಕಷ್ಟವಾಗುತ್ತದೆ ಎಂದು ಕಮಿನ್ಸ್ ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪ್ಯಾಟ್, ನನ್ನ ದುರದೃಷ್ಟದಿಂದ ಕೆಲವರಿದ್ದಾರೆ. ಭಾರತದ ಚೇತೇಶ್ವರ ಪೂಜಾರಗೆ ಬೌಲಿಂಗ್ ಮಾಡುವುದು ಎಂದರೆ ನಿಜಕ್ಕೂ ಕಷ್ಟವಾಗುತ್ತದೆ ಎಂದಿದ್ದಾರೆ.
ಕಳೆದ ಆಸೀಸ್ ಟೆಸ್ಟ್ ಸರಣಿಯಲ್ಲಿ ಪೂಜಾರ ನಿಜಕ್ಕೂ ಬಂಡೆಯಂತೆ ನಿಂತು ಆಡಿದ್ದರು. ಆತನನ್ನು ಔಟ್ ಮಾಡುವುದು ನಿಜಕ್ಕೂ ಕಷ್ಟ. ಆತನ ಏಕಾಗ್ರತೆ ನಿಜಕ್ಕೂ ಅದ್ಭುತ. ಟೆಸ್ಟ್ ಕ್ರಿಕೆಟ್ ನಲ್ಲಿ ಆತನಷ್ಟು ಗಟ್ಟಿಗ ಸದ್ಯ ಬೇರೆ ಯಾರು ಇಲ್ಲ ಎಂದು ಪೂಜಾರ ಹೇಳಿದ್ದಾರೆ.
2018-19ರ ಆಸೀಸ್ ಟೆಸ್ಟ್ ಸರಣಿಯಲ್ಲಿ ಪೂಜಾರ 1258 ಎಸೆತ ಎದುರಿಸಿ 521 ರನ್ ಗಳಿಸಿದ್ದರು.