Advertisement

“ಸಂಸ್ಕೃತಿ, ಸಂಪ್ರದಾಯ ಉಳಿವಿಗೆ ಧಾರ್ಮಿಕತೆ ಸಹಕಾರಿ’

03:19 PM Dec 28, 2017 | Team Udayavani |

ಹೆಬ್ರಿ: ಚಂಚಲವಾಗಿರುವ ಮನಸ್ಸನ್ನು ಸಂಸ್ಕೃತಿಯತ್ತ ಒಯ್ಯ ಬೇಕಾದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಕಟೀಲು ಶ್ರೀ ದುರ್ಗಾ ಸಂಸ್ಕೃತ ಪ್ರತಿಷ್ಠಾನದ ಪ್ರಾಂಶುಪಾಲ ಡಾ| ಪದ್ಮನಾಭ ಮರಾಠೆ ಹೇಳಿದರು.

Advertisement

ಅವರು ಡಿ. 24ರಂದು ಹೆಬ್ರಿ ಬಚ್ಚಪ್ಪು ಶ್ರೀ ದುರ್ಗಾಪರಮೇಶ್ವರೀ ಗದ್ದುಗೆ ಅಮ್ಮನವರ ಸನ್ನಿಧಿಯಲ್ಲಿ ನಡೆದ ವಾರ್ಷಿಕ ಮಹೋತ್ಸವದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ಶ್ರೀ ಕ್ಷೇ.ಧ.ಗ್ರಾ. ಯೋ. ಹೆಬ್ರಿ ವಲಯದ ಮೇಲ್ವಿಚಾರಕ ಹರೀಶ್‌ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾನದಿ ವಿಟuಲ ಶೆಟ್ಟಿ ಮಾತನಾಡಿ ಮನೆಯ ಹೆಂಗಸರು ಮಕ್ಕಳು ಮನೆ ಮನಸ್ಸನ್ನು ಕೆಡಿಸು ವಂತಹ ಧಾರವಾಹಿಯಿಂದ ದೂರವಿದ್ದು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಮನೆಯ ಸಂಬಂಧಗಳು ಗಟ್ಟಿಯಾಗಿ ನಮ್ಮ ಸಂಪ್ರದಾಯಗಳು ಉಳಿಯಲು ಸಾಧ್ಯ. ಇಂದು ಈ ಪರಿಸರದಲ್ಲಿ ಮಹಿಳೆಯರು ಮಕ್ಕಳು ಹೆಚ್ಚಾಗಿ ಪಾಲ್ಗೊಂಡಿರುವುದು ಜನರಲ್ಲಿ ಜಾಗೃತಿ ಮೂಡಿದೆ ಎಂದರು. ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಭಜನ ಮಂಡಳಿಯ ಸದಸ್ಯ ಅಕ್ಷಯ ಕುಮಾರ್‌ ಅವರನ್ನು ಮಂಡಳಿಯ ವತಿಯಿಂದ ಸಮ್ಮಾನಿಸಲಾಯಿತು.

ಸಮಾರಂಭದಲ್ಲಿ  ತಾಲೂಕು ಮರಾಠಿ ಸಂಘದ ಅಧ್ಯಕ್ಷ ರಾಘವ ನಾಯ್ಕ, ಮಾಡಿಗೆಮನೆ ಶಿವರಾಮ ಹೆಗ್ಡೆ, ಅಣ್ಣಾಜು ನಾಯ್ಕ, ಭಜನಾ ಮಂಡಳಿ ಅಧ್ಯಕ್ಷ ದಿವಾಕರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಹರಿದಾಸ ಹೆಗ್ಡೆ ಸ್ವಾಗತಿಸಿ, ಮಹಾಬಲ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಪ್ರಸಾದ್‌ ಶೆಟ್ಟಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next