Advertisement

ಸಂಸ್ಕೃತಿ ರಕ್ಷಣೆ ಎಲ್ಲರ ಹೊಣೆ

02:56 PM Nov 08, 2021 | Shwetha M |

ಬಸವನಬಾಗೇವಾಡಿ: ಇಂದಿನ ಆಧುನಿಕ ಯುಗದಲ್ಲಿ ಗ್ರಾಮಗಳು ತಮ್ಮ ಸಂಸ್ಕೃತಿ ಸಂಪ್ರದಾಯ ಕಳೆದುಕೊಳ್ಳುತ್ತಿರುವುದು ವಿಷಾದಕರ ಸಂಗತಿ. ಪ್ರತಿಯೊಬ್ಬರೂ ಗ್ರಾಮದ ಸಂಸ್ಕೃತಿ ಸಂರಕ್ಷಣೆ ಮಾಡುವ ಕಡೆಗೆ ಗಮನ ಹರಿಸಬೇಕಿದೆ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.

Advertisement

ಟಕ್ಕಳಕಿ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ನಮ್ಮೂರು ನನ್ನವರು ನಾನು ಸಮಾನ ಮನಸ್ಕರ ನೌಕರರ ಸಂಘ ಹಮ್ಮಿಕೊಂಡಿದ್ದ ಉಚಿತ ನೇತ್ರ ಮತ್ತು ಚರ್ಮರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನದಲ್ಲಿ ಮನಸ್ಸುಗಳು ಸಂಕುಚಿತಗೊಳ್ಳುತ್ತಿರುವ ಸಂದರ್ಭದಲ್ಲಿ ಬಸವಾದಿ ಶರಣರ ವಿಚಾರದಂತೆ ಎಲ್ಲರೂ ನಮ್ಮವರು ಎಂದು ಒಪ್ಪಿಕೊಂಡಾಗ ಸಾಮರಸ್ಯ ಮೂಡುತ್ತದೆ. ವಿಶ್ವ ಭ್ರಾತೃತ್ವದ ಕಲ್ಪನೆ ನಮ್ಮದಾಗುತ್ತದೆ. ಸಂಘವು ಜನರ ಆರೋಗ್ಯ ಸುಧಾರಣೆಗೆ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುವುದರೊಂದಿಗೆ ವಿವಿಧ ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಜಿ.ಸಿ. ವಂದಾಲ ಮಾತನಾಡಿ, ಸಮಾಜ ನಮಗೇನು ಮಾಡಿತು ಎಂಬುವುದು ಮುಖ್ಯವಲ್ಲ. ನಾವು ಸಮಾಜಕ್ಕೆ ಏನು ಮಾಡುತ್ತೇವೆ ಎಂಬುವುದು ಮುಖ್ಯವಾಗಿದೆ ಎಂದು ಹೇಳಿದರು.

ನಮ್ಮೂರು ಮತ್ತು ನನ್ನವರ ಋಣ ತೀರಿಸುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕು. ಅಂದಾಗ ಮಾತ್ರ ನಾವು ಸಮಾಜಕ್ಕೆ ಏನಾದರು ಕೊಡುಗೆ ನೀಡಲು ಸಾಧ್ಯ. ಏನಾದರು ಕೊಡುಗೆ ಕೊಟ್ಟಾಗ ಅದರಲ್ಲಿ ಸಿಗುವ ತೃಪ್ತಿ ಬೇರೆ ಯಾವ ಕಾರ್ಯದಲ್ಲಿಯೂ ಸಿಗುವುದಿಲ್ಲ ಎಂದರು.

Advertisement

ಈ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಗ್ರಾಮದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಬಸವಗೌಡ ಪಾಟೀಲ, ಡಾ| ಬಸವರಾಜ ಝಳಕಿ, ಡಾ| ಬಸವರಾಜ ವಂದಾಲ, ರಮೇಶ ದೇಸಾಯಿ ಸೇರಿದಂತೆ ಅನೇಕರು ಇದ್ದರು. ಮಹೇಶ ಬಿರಾದಾರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next