Advertisement
ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಸಂಸ್ಕಾರ ಶಿಬಿರದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
Related Articles
Advertisement
ತಹಶೀಲ್ದಾರ್ ನಾಹಿದಾ ಮಾತನಾಡಿ ನಾವು ಮಕ್ಕಗೆ ಎಂದೂ ಮೇಲು-ಕೀಳು ಎನ್ನುವ ಭಾವನೆಗಳನ್ನು ತುಂಬಬಾರದು ಹಣಗಳಿಸಲು ಇರುವಂತಹ ಮಾರ್ಗ ಗಳನ್ನೇ ಯಾವಾಗಲು ತಿಳಿಸಬಾರದು, ಅಂತಹ ವಿಚಾರಗಳನ್ನು ಹೇಳಿ ಪ್ರೇರೇಪಿಸುವುದು ನಿಲ್ಲಬೇಕು ಮಗುವಿಗೆ ಅಭಿವ್ಯಕ್ತಿ ಸ್ವಾತಂತ್ರವನ್ನು ಕಲ್ಪಿಸಬೇಕು, ಪ್ರತಿಯೊಂದು ಮಗುವೂ ಭಿನ್ನವಾಗಿರುತ್ತದೆ ಒಬ್ಬರನ್ನು ತೋರಿಸಿ ಹೀಗೆ ಆಗು ಎನ್ನುವ ಮಾತುಗಳನ್ನು ಬಿಟ್ಟು ಮಗುವಿನಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಜಿ.ಪಂ ಮಾಜಿ ಸದಸ್ಯ ಶಿವರಾಮಯ್ಯ ಮಾತನಾಡಿ, ಸಮಾಜ ಅದಪತ್ತನತ್ತ ಸಾಗಿದೆ ಹಿಂದೆ ಸಂಜೆಯಾದರೆ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು ಆದರೆ ಇಂದು ಸಮಾಜ ಮತ್ತು ನಮ್ಮ ಸಂಸ್ಕೃತಿ ಬದಲಾಗಿ ದೇವಾಲಯ ಬದಲು ಮದ್ಯದಂಗಡಿಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ನಮ್ಮ ಮುಂದಿನ ಸಮಾಜಕ್ಕೆ ಸಂಸ್ಕಾರಯುತ ಶಿಕ್ಷಣವನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠದ ನಿರ್ದೇಶಕ ನರಸಿಂಹ ಮೂರ್ತಿ ,ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಚಂದ್ರ, ಧಾರ್ಮಿಕ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ,ಉಪನ್ಯಾಸಕ ಭೋಗಣ್ಣ ಮಾತನಾಡಿದರು.
ವೇದಿಕೆಯಲ್ಲಿ ಎಲೆರಾಂಪು ಗ್ರಾ.ಪಂ ಅಧ್ಯಕ್ಷೆ ಗಂಗಾದೇವಿ, ಬೆಂಗಳೂರಿನ ಅಂಜನಾದ್ರಿ ವಿದ್ಯಾಕೇಂದ್ರದ ಪಿನ್ಸಿಪಾಲ್ ಡಾ. ಗಣೇಶ್, ಉದ್ಯಮಿ ನಿಲೇಶ್ , ಕುಂಚಿಟಿಗ ಸಂಘದ ಮಹಿಳಾ ಅಧ್ಯಕ್ಷೆ ಲಲಿತಾ ಮಲ್ಲಣ್ಣ,ಮಧುಗಿರಿ ಕುಂಚಿಟಿಗರ ಸಂಘದ ತಾಲೂಕು ಅಧ್ಯಕ್ಷ ರಾಜಶೇಖರ್,ಶಿಕ್ಷಕರಾದ ಕುಮಾರಸ್ವಾಮಿ, ರವಿಚಂದ್ರ,ಜಗದೀಶ್, ಮುಖಂಡರಾದ ಶಶಿಧರ್,ಈರಣ್ಣ, ಕಾಂತರಾಜು, ಚಂದ್ರಶೇಖರ್, ಸೇರಿದಂತೆ ಇತರರು ಇದ್ದರು.