Advertisement

ಸಂಸ್ಕೃತಿಯ ಅನಾವರಣ: ಸಚಿವೆ ಶ್ಲಾಘನೆ 

11:56 AM Aug 07, 2018 | Team Udayavani |

ಬಂಟ್ವಾಳ : ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಸ್ಕೃತಿಯ ಪ್ರತೀಕ. ಆದರೆ ಅಬ್ಬಕ್ಕನ ಚರಿತ್ರೆಯನ್ನು ಸೂಕ್ತವಾಗಿ ಪ್ರತಿಬಿಂಬಿಸುವ ಕೆಲಸ ಆಗಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರು ಹೇಳಿದರು. ಅವರು ಸೋಮವಾರ ಬಿ.ಸಿ. ರೋಡು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ  ಐತಿಹಾಸಿಕ ತುಳು ಬದುಕು ಸಂಗ್ರಹಗಳನ್ನು ವೀಕ್ಷಿಸಿ ಮಾತನಾಡಿದರು.

Advertisement

ಮ್ಯೂಸಿಯಂ ಕಲ್ಚರ್‌ ಭಾರತದಲ್ಲಿ ಸಾಕಷ್ಟು ಬೆಳವಣಿಗೆ ನಡೆದಿಲ್ಲ. ವಿದೇಶಗಳಲ್ಲಿ ಪ್ರವಾಸೋದ್ಯಮ ಜತೆಗೆ ಮ್ಯೂಸಿಯಂ ಬೆಳೆಯುತ್ತದೆ. ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಒಂದು ಸಂಸ್ಕೃತಿಯ ಅನಾವರಣ ಆಗಿದೆ. ಇದು ಪ್ರಪಂಚವೇ ಕಣ್ತೆರೆದು ನೋಡ ಬೇಕಾದ ಸಂಗತಿ. ಕೇಂದ್ರದ ಅಧ್ಯಕ್ಷ ಪ್ರೊ| ತುಕರಾಂ ಪೂಜಾರಿ ಅವರ ಕಾರ್ಯ ಅಭಿನಂದನೀಯ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಬಿ. ಪದ್ಮಶೇಖರ ಜೈನ್‌, ಎಪಿಎಂಸಿ ಅಧ್ಯಕ್ಷ ಕೆ. ಪದ್ಮನಾಭ ರೈ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಮುಖಂಡ ರಾದ ಬೇಬಿ ಕುಂದರ್‌, ಕೆ. ಮಾಯಿಲಪ್ಪ ಸಾಲ್ಯಾನ್‌, ಮಧುಸೂದನ ಶೆಣೈ, ಲೋಕೇಶ ಸುವರ್ಣ ಉಪಸ್ಥಿತರಿದ್ದರು. ಪ್ರೊ| ತುಕರಾಂ ಪೂಜಾರಿ ಸ್ವಾಗತಿಸಿ, ಡಾ| ಆಶಾಲತಾ ಸುವರ್ಣ ಅವರು ವಂದಿಸಿದರು.

ಸಿನೆಮಾದಲ್ಲಿ  ಅಬ್ಬಕ್ಕ
ನಾನು ಉದ್ದೇಶಿಸಿರುವ ಸಿನೆಮಾದಲ್ಲಿ ರಾಣಿ ಅಬ್ಬಕ್ಕ ಅವರ ಕಲ್ಪನೆಗಳನ್ನು ಕಟ್ಟಿಕೊಡುವ ಚಿಂತನೆ ಇದೆ. ಕೆಲವನ್ನು ಆ್ಯನಿಮೇಷನ್‌ ಕಾಟೂìನ್‌ ಮೂಲಕ ಅಳವಡಿಸಬೇಕು. ಅದೊಂದು ದೊಡ್ಡ ಪ್ರಾಜೆಕ್ಟ್. ಮುಂದಿನ ದಿನಗಳಲ್ಲಿ ಈ ಅಧ್ಯಯನ ಕೇಂದ್ರದ ಅಧ್ಯಕ್ಷರ ಕನಸಿನಂತೆ ಹೆರಿಟೇಜ್‌ ವಿಲೇಜ್‌ ನಿರ್ಮಿಸಲು ಮುಂದಾದರೆ ನನ್ನ ಬೆಂಬಲ ಮತ್ತು ಸಹಕಾರ ಇದೆ   ಎಂದು ಸಚಿವೆ ಜಯಮಾಲಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next