Advertisement

ಸಾವಿರಾರು ಯುವಕರಿಗೆ ಸಂಸ್ಕೃತಿ ಅರಿವು- ರುದ್ರಾಕ್ಷಿ ದೀಕ್ಷೆ

01:22 PM Apr 25, 2022 | Team Udayavani |

 ಅಥಣಿ: ಶ್ರೀ ಶಂಕರ ಸ್ವಾಮೀಜಿ ಅಮೃತ ಮಹೋತ್ಸವ ಹಾಗೂ ನಿರಂಜನ ಚರಪಟ್ಟಾಧಿಕಾರ ಸಮಾರಂಭದಲ್ಲಿ ಸಾವಿರಾರು ಯುವಕರಿಗೆ ರುದ್ರಾಕ್ಷಿ ದೀಕ್ಷೆ ನೀಡುವ ಸಂಕಲ್ಪ ಆಮಂತ್ರಣ ಪತ್ರಿಕೆಯನ್ನು ಶೇಗುಣಸಿ ವಿರಕ್ತಮಠದ ಡಾ. ಮಹಾಂತ ದೇವರು ಬಿಡುಗಡೆ ಮಾಡಿದರು.

Advertisement

ಸಮೀಪದ ಸತ್ತಿ ಗ್ರಾಮದ ಶ್ರೀ ಬಾಳಕೃಷ್ಣ ಮಹಾರಾಜ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರುವ ಮೇ 1 ರಿಂದ 4 ರವರೆಗೆ ವಿಶೇಷ ಕಾರ್ಯಕ್ರಮಗಳು ಮಠದಲ್ಲಿ ಜರುಗಲಿದ್ದು, ನಾಡಿನ 300 ಕ್ಕೂ ಹೆಚ್ಚು ಪೂಜ್ಯರು ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಯುವ ಜನೋತ್ಸವದ ಅಂಗವಾಗಿ 5 ಸಾವಿರಕ್ಕೂ ಹೆಚ್ಚು ಯುವಕರಿಗೆ ರುದ್ರಾಕ್ಷಿ ದೀಕ್ಷೆ ನೀಡಿ ಭಾರತೀಯ ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮೇ 1 ರಂದು ಬೆಳಿಗ್ಗೆ 10 ಗಂಟೆಗೆ ಸಾವಯವ ಕೃಷಿ ಸಮ್ಮೇಳನ ಜರುಗಲಿದೆ. ಸಂಜೆ 6 ಗಂಟೆಗೆ ಶ್ರೀ ಶಂಕರ ಸ್ವಾಮಿಗಳವರ ಅಮೃತ ಮಹೋತ್ವವ ಕಾರ್ಯಕ್ರಮ ಜರುಗಲಿದೆ.

2 ರಂದು ಬೆಳಗ್ಗೆ 10 ಗಂಟೆಗೆ ಮಹಿಳಾ ಸಮಾವೇಶ ಜರುಗಲಿದೆ. ಸಂಜೆ 6 ಗಂಟೆಗೆ ಯುವ ಜನೋತ್ಸವ ಹಾಗೂ ರುದ್ರಾಕ್ಷಿ ದೀಕ್ಷಾ ಕಾರ್ಯಕ್ರಮ ಜರುಗಲಿದೆ.

3 ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಮುರುಘೇಂದ್ರ ಸ್ವಾಮೀಜಿ ವಿದ್ಯಾವರ್ಧಕ ಸಂಸ್ಥೆಯ ರಜತ ಮಹೋತ್ಸವ ಹಾಗೂ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ. ಅಂದು ಸಂಜೆ 6 ಗಂಟೆಗೆ ಬಸವ ಜಯಂತಿ ಕಾರ್ಯಕ್ರಮ ಜರುಗಲಿದೆ.

Advertisement

ದಿ. 4 ರಂದು ಬೆಳಗ್ಗೆ 10 ಗಂಟೆಗೆ ಶೂನ್ಯಸಿಂಹಾಸನಾರೋಹಣ ಹಾಗೂ ಸಂಜೆ 6 ಗಂಟೆಗೆ ಚಿನ್ಮಾನುಗ್ರಹ ದೀಕ್ಷೆ ಹಾಗೂ ಷಟಸ್ಥಲ ಬ್ರಹ್ಮೋಪದೇಶ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಶ್ರೀ ಗುರು ದೇವರು, ಜಿ.ಪಂ. ಮಾಜಿ ಸದಸ್ಯ ಶ್ರೀಶೈಲ ನಾರಗೊಂಡ, ಶಿವರಾಯ ಯಲಡಗಿ, ತಮ್ಮಣ್ಣೆಪ್ಪ ತೇಲಿ, ಪರಪ್ಪ ರಾಚಪ್ಪನವರ, ಮಲ್ಲಪ್ಪ ಕಂಕಣವಾಡಿ, ಅಶೋಕ ಜಗದೇವ, ಮಲ್ಲಪ್ಪ ಬ್ಯಾಳಗೌಡರ, ಪ್ರಕಾಶ ಭೂಷಣ್ಣವರ, ಮಲ್ಲಪ್ಪ ಹಂಚಿನಾಳ, ಅನಂತಕುಮಾರ ಪಾಟೀಲ, ರಾವಸಾಬ ಮಟ್ಟೆಪ್ಪನವರ, ಬಸವರಾಜ ಜಕ್ಕಪ್ಪನವರ, ಶ್ರೀಶೈಲ ಜಗದೇವ ಇದ್ದರು. ಇದೇ ವೇಳೆ ಪಿಎಚ್‌ಡಿ ಪಡೆದು ಪ್ರಥಮ ಬಾರಿಗೆ ಸತ್ತಿ ಗ್ರಾಮಕ್ಕೆ ಆಗಮಿಸಿದ ಡಾ| ಮಹಾಂತ ದೇವರನ್ನು ಗ್ರಾಮಸ್ಥರು ಸತ್ಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next