Advertisement

ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು, ಸೆಲ್ಫಿ ಗುಂಗು

10:47 AM Dec 02, 2017 | |

ವಿದ್ಯಾಗಿರಿ (ಆಳ್ವಾಸ್‌): ವಿದ್ಯಾಗಿರಿ ಕ್ಯಾಂಪಸ್‌ನ ಆಳ್ವಾಸ್‌ ನುಡಿಸಿರಿಯ ಮೊದಲ ದಿನವೇ ಸೇರಿದ್ದ ಸಾವಿರಾರು ಮಂದಿಗೆ ಸಾಂಸ್ಕೃತಿಕ ರಸದೌತಣ ಲಭ್ಯವಾಯಿತು. ಒಟ್ಟು 11 ವೇದಿಕೆಗಳಲ್ಲಿ ಬೇರೆ ಬೇರೆ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡಿತ್ತು. ಬೆಳಗ್ಗಿನಿಂದ ರಾತ್ರಿವರೆಗೂ ಸಾಂಸ್ಕೃತಿಕತೆ ಮನೆಮಾಡಿತ್ತು.

Advertisement

ರತ್ನಾಕರ ವರ್ಣಿ ವೇದಿಕೆಯಲ್ಲಿ ಸೈಯದ್‌ ಇದಾಯಿತುಲ್ಲಾ ಸಾಹೇಬ್‌ ಬಳಗದಿಂದ ನಾದಸ್ವರ ವಾದನ, ಶಂಕರ್‌ ಶಾನುಭೋಗ್‌ ತಂಡದಿಂದ ಕಾವ್ಯ ಸಂಗೀತ, ನೃತ್ಯ ನಿಕೇತನದಿಂದ ನೃತ್ಯ ದರ್ಪಣ, ಆಳ್ವಾಸ್‌ ಸಾಂಸ್ಕೃತಿಕ ವೈಭವ, ನಾಡೋಜ ಏಣಗಿ ಬಾಳಪ್ಪ ವೇದಿಕೆಯಲ್ಲಿ ಸುಭದ್ರಾ ಕಲ್ಯಾಣ ನಾಟಕ ಪ್ರದರ್ಶನಗೊಂಡಿತು.

ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆಯಲ್ಲಿ ಪಿ.ಕೆ. ದಾಮೋದರ್‌ ಬಳಗದಿಂದ ಸ್ಯಾಕ್ಸೋಫೋನ್‌ ವಾದನ, ಮಲ್ಲಿಕಾರ್ಜುನ ಭಜನ ಸಂಘದಿಂದ ಚಕ್ರಿ ಭಜನೆ, ಮಾರೆಪ್ಪ ಚೆನ್ನದಾಸರ ಬಳಗದಿಂದ ಜನಪದ ಗೀತೆ, ರುದ್ರೇಶ್‌ ಬಳಗದಿಂದ ಸುಗಮ ಸಂಗೀತ,  ಜೀವನಸಾಬ ವಾಲಿಕಾರ್‌ ಬಳಗದಿಂದ ರಂಗಗೀತೆಗಳು, ಮಿಮಿಕ್ರಿ ಗೋಪಿ ಬಳಗದಿಂದ ಹಾಸ್ಯೋಲ್ಲಾಸ, ಸನಾತನ ನಾಟ್ಯಾಲಯದಿಂದ ಕನಕ ಕೌಮುದಿ, ದಶಾವತಾರ ಪ್ರದರ್ಶನಗೊಂಡಿತು.

ಕುವೆಂಪು ಸಭಾಂಗಣದಲ್ಲಿ ಯಕ್ಷ-ದಾಸ ಗಾನವೈಭವ, ಹರಿಕಥಾ ಕೀರ್ತನ, ಕರ್ನಾಟಕ ಸಂಗೀತ, ಭರತನಾಟ್ಯ, ಸುಗಮ ಸಂಗೀತ, ಹಿದೂಸ್ತಾನಿ ಸಂಗೀತ, ಭರತನಾಟ್ಯ, ರಂಗಪ್ರಯೋಗ, ನೃತ್ಯೋಲ್ಲಾಸ, ನೃತ್ಯ ಸಿಂಚನ, ಕು.ಶಿ. ಹರಿದಾಸ ಭಟ್ಟ ವೇದಿಕೆಯಲ್ಲಿ ದಶ ಅನಂತ ವೈಭವ, ನೃತ್ಯಾರ್ಪಣಂ, ನೃತ್ಯ ಸಂಗಮ, ನಾಡೋಜ ಕಯ್ನಾರ ಕಿಂಞಣ್ಣ ರೈ ವೇದಿಕೆಯಲ್ಲಿ ತುಳು ಚಿತ್ರ ರಸಮಂಜರಿ, ತೆಲಿಕೆ ಬಂಜಿ ನಿಲಿಕೆ, ಕುಸಲ್ದ ಗೌಜಿ, ತೆಲಿಕೆದ ತಮ್ಮನ ಪ್ರದರ್ಶನಗೊಂಡಿತು.

ಡಾ| ಶಿವರಾಮ ಕಾರಂತ ವೇದಿಕೆಯಲ್ಲಿ ಹಿಂದೂಸ್ಥಾನಿ ಸಂಗೀತ, ಕೂಚುಪುಡಿ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಗಮಕ ವಾಚನ, ಭರತನಾಟ್ಯ, ವೀಣಾವಾದನ, ದಾಸರ ಪದಗಳು, ನೃತ್ಯ ರೂಪಕ, ನೃತ್ಯೋತ್ಸವ, ಸಮೂಹ ಭರತನೃತ್ಯ, ಪಳಕಳ ಸೀತಾರಾಮ ಭಟ್ಟ ವೇದಿಕೆಯಲ್ಲಿ ಸುಗಮ ಸಂಗೀತ, ಕೊಳಲು ವಾದನ, ಕರ್ನಾಟಕ ಸಂಗೀತ, ಗಮಕ ವಾಚನ, ಭರತನಾಟ್ಯ, ದ್ವಂದ್ವ ಪಿಟೀಲು ವಾದನ ಪ್ರದರ್ಶನ ನಡೆಯಿತು.

Advertisement

ನುಡಿಸಿರಿ ಮೊಬೈಲ್‌ ಮಯ…!
ಇದು ಸ್ಮಾರ್ಟ್‌ಫೋನ್‌ ಯುಗವಾಗಿದ್ದು, ನುಡಿಸಿರಿಯ ಕ್ಯಾಂಪಸ್‌ನಲ್ಲೂ ಸ್ಮಾರ್ಟ್‌ ಪೋನ್‌ಗಳದ್ದೇ ಕಾರುಬಾರು ಕಂಡು ಬಂತು. ಎಲ್ಲರೂ ಕೈಯಲ್ಲಿ ಮೊಬೈಲ್‌ ಹಿಡಿದು ಪೋಟೊ, ಸೆಲ್ಫಿ ತೆಗೆಯುತ್ತಿದ್ದರು. ಏಕಕಾಲದಲ್ಲೇ ಸಾವಿರಾರು ಮಂದಿ ಕಾಲ್‌, ಇಂಟರ್‌ನೆಟ್‌ ಉಪಯೋಗಿಸುತ್ತಿದ್ದ ಕಾರಣ ಬಹುತೇಕ ಎಲ್ಲ ಕಂಪನಿಗಳ ನೆಟ್‌ ವರ್ಕ್‌ ಸಮಸ್ಯೆಯಾಗಿತ್ತು! ಬೆಳಗ್ಗೆ ಮೆರವಣಿಗೆಯಿಂದ ಹಿಡಿದು ರಾತ್ರಿವರೆಗೂ ಎಲ್ಲಿ ನೋಡಿದರೂ ಮೊಬೈಲ್‌ನಲ್ಲಿ ಪೋಟೊ ಕ್ಲಿಕ್ಕಿಸುವ ದೃಶ್ಯ ಸಾಮಾನ್ಯವಾಗಿತ್ತು. 

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next