Advertisement

ಸಿಯುಇಟಿ ಅರ್ಜಿ ಸಲ್ಲಿಕೆ ಆರಂಭ

07:16 PM Feb 09, 2023 | Team Udayavani |

ನವದೆಹಲಿ : ಕಾಮನ್‌ ಯೂನಿವರ್ಸಿಟಿ ಎಂಟ್ರೆನ್ಸ್‌ ಟೆಸ್ಟ್‌ (ಸಿಯುಇಟಿ)-ಯುಜಿಯ 2ನೇ ಆವೃತ್ತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಫೆ.9ರಿಂದ ಆರಂಭಗೊಂಡಿದೆ.

Advertisement

ಮಾ.12ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.  ಮೇ 21 ರಿಂದ 31ರ ವರೆಗೆ ಪರೀಕ್ಷೆ ನಡೆಯಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಏ. 30 ರಂದು ಪರೀಕ್ಷೆ ಕೇಂದ್ರಗಳ ನಗರಗಳ ಪಟ್ಟಿ ಬಿಡುಗಡೆಗೊಳಿಸಲಾಗುತ್ತದೆ. ಮೇ 2ನೇ ವಾರದಲ್ಲಿ ಪರೀಕ್ಷೆಗೆ ಅವಕಾಶ ನೀಡುವ ಅಡ್ಮಿಟ್‌ ಕಾರ್ಡ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಕೇಂದ್ರೀಯ ವಿಶ್ವ ವಿದ್ಯಾಲಯಗಳಲ್ಲಿ 12ನೇ ತರಗತಿಯ ಅಂಕಗಳನ್ನು ಪರಿಗಣಿಸಿ ನೀಡಲಾಗುತ್ತಿದ್ದ  ಪದವಿ ಶಿಕ್ಷಣ ಪ್ರವೇಶವನ್ನು ಇನ್ನುಮುಂದೆ ಸಾಮಾನ್ಯ ಪರೀಕ್ಷೆಯನ್ನು ನಡೆಸುವ ಮೂಲಕ ನೀಡಲಾಗುತ್ತದೆ ಎಂದು ಯುಜಿಸಿ ಕಳೆದ ಮಾರ್ಚ್‌ನಲ್ಲಿ ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next