Advertisement

ನಾಳೆಯಿಂದ ಸಿಯುಇಟಿ-ಯುಜಿ ಪರೀಕ್ಷೆ ಆರಂಭ

01:49 AM Jul 14, 2022 | Team Udayavani |

ಹೊಸದಿಲ್ಲಿ: ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇರುವ ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ-ಯುಜಿ) ಶುಕ್ರವಾರದಿಂದ (ಜು.15) ಆರಂಭವಾಗಲಿದ್ದು, ಆಗಸ್ಟ್‌ 20ರ ವರೆಗೆ ನಡೆಯಲಿದೆ.

Advertisement

ಮೊದಲ ಹಂತದ ಪರೀಕ್ಷೆಗೆ ಮಂಗಳವಾರದಿಂದಲೇ ಅಡ್ಮಿಟ್‌ ಕಾರ್ಡ್‌ ವಿತರಣೆ ಆರಂಭವಾಗಿದೆ. 14.9 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದು, ನೀಟ್‌ ಬಳಿಕ ಸಿಯುಇಟಿ-ಯುಜಿ ಪರೀಕ್ಷೆಯೇ ದೇಶದ ಎರಡನೇ ಅತಿದೊಡ್ಡ ಪರೀಕ್ಷೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

ಇದೇ ವೇಳೆ ಸಿಬಿಎಸ್‌ಇ 12ನೇ ತರಗತಿ ಫ‌ಲಿತಾಂಶ ಪ್ರಕಟಗೊಂಡ ಬಳಿಕವೇ ಪದವಿ ತರಗತಿಗಳಿಗೆ ಪ್ರವೇಶ ದಿನಾಂಕ ನಿಗದಿ ಮಾಡಿ ಎಂದು ಎಲ್ಲ ವಿವಿಗಳಿಗೆ ಯುಜಿಸಿ ಸೂಚನೆ ನೀಡಿದೆ.

ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫ‌ಲಿತಾಂಶಗಳು ಮಾಸಾಂತ್ಯಕ್ಕೆ ಪ್ರಕಟವಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next