Advertisement

ಕ್ಯೂಬಾದಲ್ಲಿ ಸಲಿಂಗ ವಿವಾಹಕ್ಕೆ ಸಮ್ಮತಿ

09:30 AM Sep 28, 2022 | Team Udayavani |

ಹವಾನಾ: ಕ್ಯೂಬಾದಲ್ಲಿ ಸಲಿಂಗ ವಿವಾಹಕ್ಕೆ ಅನುಮೋದನೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಇದರ ಜತೆಗೆ, ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರ ಕಲ್ಯಾಣಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಚುನಾವಣಾ ಮಂಡಳಿ ದೇಶವ್ಯಾಪಿ ಅಭಿಪ್ರಾಯ ಸಂಗ್ರಹಿಸಿದೆ.

ಅದರಂತೆ ಶೇ.66.9 ಮಂದಿ ಹೊಸ ಬದಲಾವಣೆಗೆ ಸಮ್ಮತಿ ಸೂಚಿಸಿದ್ದಾರೆ. ಹೊಸ ನಿಯಮಗಳ ಬಗ್ಗೆ ಪ್ರಚಾರ ಕೈಗೊಂಡಿದ್ದರೂ, ವಿರೋಧಗಳೂ ವ್ಯಕ್ತವಾಗಿವೆ.

ಕ್ಯೂಬಾದಲ್ಲಿ ಕಮ್ಯೂನಿಸ್ಟ್‌ ಪಕ್ಷ ಹೊರತು ಪಡಿಸಿ ಇತರ ಪಕ್ಷಗಳಿಗೆ ಸ್ಪರ್ಧಿಸಲು ಅವಕಾಶ ಇಲ್ಲ. ಇದರ ಹೊರತಾಗಿಯೂ ಕೂಡ ಇವಾಂಜಲಿಕಲ್‌ ಮೂವ್‌ಮೆಂಟ್‌ ಹೊಸ ನಿಯಮಗಳಿಗೆ ಆಕ್ಷೇಪ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next