Advertisement

ಜಿಲ್ಲಾಸ್ಪತ್ರೆಗಳಲ್ಲಿ CT ಸ್ಕ್ಯಾನ್‌, MRI ಸೌಲಭ್ಯ

09:59 PM Aug 10, 2023 | Team Udayavani |

ಬೆಂಗಳೂರು: ಮಂಗಳೂರಿನ ವೆನ್‌ಲಾಕ್‌ ರಾಜ್ಯದ ಐದು ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್‌ ಹಾಗೂ 15 ಜಿಲ್ಲಾಸ್ಪತ್ರೆಗಳಲ್ಲಿ ಖಾಸಗಿ -ಸರಕಾರಿ ಸಹಭಾಗಿತ್ವದಲ್ಲಿ ಎಂಆರ್‌ಐ ಸ್ಕ್ಯಾನ್‌ ಸೌಲಭ್ಯ ನೀಡುವ ಮಹತ್ವದ ನಿರ್ಣಯಕ್ಕೆ ಸಮ್ಮತಿ ಸೂಚಿಸಲಾಗಿದೆ. ಮಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಒಟ್ಟು 47.41 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಪ್ರಾರಂಭವಾಗಲಿದ್ದು, ಮೈಸೂರು, ಚಿತ್ರದುರ್ಗ, ಇಂದಿರಾನಗರ ಆಸ್ಪತ್ರೆ, ಕೆ.ಸಿ.ಜನರಲ್‌ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್‌ ಸೌಲಭ್ಯ ಒದಗಿಸಲಾಗುತ್ತದೆ.

ಬೆಂಗಳೂರಿನ ಜಯನಗರ, ಇಂದಿರಾನಗರದ ಸಿ.ವಿ.ರಾಮನ್‌ ನಗರ ಸರ್ಕಾರಿ ಆಸ್ಪತ್ರೆ, ಕೆ.ಸಿ.ಜನರಲ್‌ ಆಸ್ಪತ್ರೆ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಧಾರವಾಡ, ಹಾವೇರಿ, ರಾಮನಗರ, ಯಾದಗಿರಿ, ಮೈಸೂರು, ವೆನ್‌ಲಾಕ್‌, ವಿಜಯನಗರ, ಚಿಕ್ಕೋಡಿ ಹಾಗೂ ಅರಸೀಕೆರೆ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್‌ ಸೌಲಭ್ಯ ಒದಗಿಸಲಾಗುತ್ತದೆ.

ಸಿಎಂ ವಿವೇಚನೆಗೆ
ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗೆ ನಬಾರ್ಡ್‌ನಿಂದ 1,600 ಕೋ. ರೂ. ಸಾಲ ಸೌಲಭ್ಯ ಪಡೆಯುವುದಕ್ಕೆ ಸರಕಾರದಿಂದ ಖಾತ್ರಿ ನೀಡಲಾಗಿದ್ದು, ಈ ಖಾತ್ರಿಗೆ ವಿಧಿಸುತ್ತಿದ್ದ ಶೇ.1ರಷ್ಟು ಲೆವಿ ರದ್ದು ಪಡೆಸುವ ನಿರ್ಧಾರ ಸಿಎಂ ವಿವೇಚನೆಗೆ ಬಿಡಲಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವಾಹನಗಳಲ್ಲಿ ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆಗೆ 30.74 ಕೋ. ರೂ. ಯೋಜನೆಗೆ ಸಂಪುಟದಲ್ಲಿ ಅಂಗೀಕಾರ ನೀಡಲಾಗಿದೆ.

ವಜಾ-ನಿವೃತ್ತಿ
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಡಾ| ಎಂ.ಎಚ್‌. ನಾಗೇಶ್‌ 5 ವರ್ಷ ಕಾರಾಗೃಹ ಶಿಕ್ಷೆಗೆ ಒಳಪಟ್ಟ ಕಾರಣ ಸೇವೆಯಿಂದ ವಜಾಗೊಳಿಸಲಾಗಿದೆ. ರಾಮನಗರ ಮಹಿಳಾ ತಜ್ಞೆ ಡಾ| ಉಷಾ ಕದರಮಂಡಲಗಿ ಹಾಗೂ ಸಿ.ವಿ. ರಾಮನ್‌ ಆಸ್ಪತ್ರೆಯ ಡಾ| ಎಸ್‌.ಡಿ. ನಾಗಮಣಿ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಲಾಗಿದೆ.

Advertisement

ಮೇಕೆದಾಟು ಪಾದಯಾತ್ರೆ ಪ್ರಕರಣ ವಾಪಸ್‌
ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕೋವಿಡ್‌ ನಿಯಮ ಉಲ್ಲಂ ಸಿದ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್‌ ನಾಯಕರನ್ನು ವಿಚಾರಣೆಯಿಂದ ಪಾರು ಮಾಡುವ ಮಹತ್ವದ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಒಟ್ಟು 9 ಕ್ರಿಮಿನಲ್‌ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಪೈಕಿ ಕನಕಪುರದ ಐಜೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಸಹಿತ ಕಾಂಗ್ರೆಸ್‌ ನಾಯಕರ ವಿರುದ್ಧ ಕೋವಿಡ್‌ ನಿಯಮ ಉಲ್ಲಂಘನೆ ಮಾಡಿದ ಆರೋಪ ಸಂಬಂಧ ಸೆಕ್ಷನ್‌ 144, 143, 240, 236ಸಹಿತ ವಿವಿಧ ಕಲಂಗಳ ಅನ್ವಯ ತಹಶೀಲ್ದಾರ್‌ ವಿಜಯ್‌ ಕುಮಾರ್‌ ಸ್ವಯಂ ಪ್ರೇರಿತ ದೂರು ನೀಡಿದ್ದರು.
ಈ ಪ್ರಕರಣವನ್ನು ಹಿಂಪಡೆಯುವ ಬಗ್ಗೆ ಗೃಹ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಈ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಿ ಪ್ರಕರಣವನ್ನು ವಿಚಾರಣೆಯಿಂದ ಕೈಬಿಡಲು ನಿರ್ಧರಿಸಲಾಗಿದೆ. ಇದರಲ್ಲಿ ಯಾವುದೇ ಕೋಮು ದ್ವೇಷದ ಪ್ರಕರಣಗಳು ಇಲ್ಲ ಎಂದು ಸಂಪುಟ ಸಭೆ ಬಳಿಕ ಸಚಿವ ಎಚ್‌.ಕೆ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಸಂಪುಟದ ಇತರ ತೀರ್ಮಾನಗಳು
*ಬೆಂಗಳೂರಿನ ನಾಗರಬಾವಿಯಲ್ಲಿ ಏರೋಸ್ಪೇಸ್‌ ಹಾಗೂ ರಕ್ಷಣ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ಅನುಮೋದನೆ. ಡೆಸಾಲ್ಟ್ ಸಿಸ್ಟಮ್‌ ಸಂಸ್ಥೆಯ ಸಹಯೋಗದೊಂದಿಗೆ ಅಂದಾಜು 391 ಕೋಟಿ ರೂ. ಯೋಜನೆಗೆ ಒಪ್ಪಿಗೆ.
*ಬೆಳಗಾವಿ ವೈದ್ಯಕೀಯ ಕಾಲೇಜಿನಲ್ಲಿ 325 ಹಾಸಿಗೆಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ 189 ಕೋಟಿ ರೂ.ಗಳ ಪರಿಷ್ಕೃತಾ ಅಂದಾಜಿಗೆ ಅನುಮೋದನೆ.

*ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎನ್‌. ಹಳ್ಳಿಗುಡಿ ಸೇವೆಯಿಂದ ವಜಾ. ಪೋಕೊÕà ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ನಿರ್ಧಾರ.
*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅನ್ವಯ ಪೂರೈಸುತ್ತಿದ್ದ ಪಾಮ್‌ ಎಣ್ಣೆ ಸ್ಥಗಿತಗೊಳಿಸಿ ಸೂರ್ಯಕಾಂತಿ ಎಣ್ಣೆ ಪೂರೈಕೆಗೆ ನಿರ್ಧಾರ. 9.9 ಕೋಟಿ ರೂ. ಹೆಚ್ಚುವರಿ ಹೊರೆಯೊಂದಿಗೆ 66.04 ಕೋಟಿ ರೂ.ಮೊತ್ತದಲ್ಲಿ ಪೂರೈಕೆಗೆ ಟೆಂಡರ್‌ ಕರೆಯಲು ತೀರ್ಮಾನ.
*ಬಿಬಿಎಂಪಿಯಲ್ಲಿ ಜಾರಿಯಲ್ಲಿರುವಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಯಮ ಉಲ್ಲಂ ಸಿದ ಕಟ್ಟಡಗಳಿಗೆ ತೆರಿಗೆ ವಿಧಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಂಪುಟ ಉಪಸಮಿತಿ ರಚನೆಗೆ ತೀರ್ಮಾನ.

 

Advertisement

Udayavani is now on Telegram. Click here to join our channel and stay updated with the latest news.

Next