Advertisement

ಅಕ್ರಮ ಆಸ್ತಿ ಪ್ರಕರಣವನ್ನು ಮರೆಮಾಚಲು ಡಿಕೆಶಿ ಏನೇನೋ ಮಾತಾನಾಡುತ್ತಿದ್ದಾರೆ: ಸಿ.ಟಿ. ರವಿ

03:15 PM Dec 07, 2021 | Team Udayavani |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಪ್ರಕಾರ ನಾಯಕತ್ವ ಅಂದರೆ‌ ಗೂಂಡಾಗಿರಿ ಮಾಡುವುದು. ಚುನಾವಣೆಗೆ ದುಡ್ಡು ಮಾಡಿರೋರೇ ನಿಲ್ಬೇಕು ಅನ್ನೋದು ಅವರ ಮನಸ್ಥಿತಿ. ನಮ್ಮದು ಕೇಡರ್ ಆಧಾರಿತ ಪಕ್ಷ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಡಿಕೆಶಿ ಕಾಂಗ್ರೆಸ್ ನಲ್ಲಿ ಅಕ್ರಮ ಆಸ್ತಿ ಮಾಡಿಕೊಂಡಿದ್ದರು ಅಂತ ಒಪ್ಕೊಂಡ ಹಾಗಾಯ್ತು. ಅವರ ಮೇಲೆ ಅಕ್ರಮ ಆಸ್ತಿಗೆ ಸಂಬಂಧ ಕೇಸ್ ಇರುವ ಕಾರಣಕ್ಕೆ ಅವರು ಜೈಲಿಗೆ ಹೋದವರು, ವಿನಃ ಬಿಜೆಪಿಗೆ ಬರಲಿಲ್ಲಅಂತಾಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ.  ಕೇಸ್ ನಿಂದ ಬಚಾವಾಗುವ ಅವಕಾಶ ಇದ್ದಿದ್ರೆ, ಡಿಕೆಶಿ ಮೊದಲೇ ಬಂದು ಬಿಜೆಪಿಗೆ ಸೇರುತ್ತಿದ್ದರು. ಡಿಕೆಶಿ ಆಂತರಿಕ ಗೊಂದಲದಿಂದ ಪಾರಾಗಲು, ಕೇಸ್ ಮರೆ ಮಾಚಲು ಇಂಥ ಹೇಳಿಕೆ ಕೊಟ್ಟಿದಾರೆ ಎಂದು ವಾಗ್ದಾಳಿ ನಡೆಸಿದರು.

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಬಿಜೆಪಿಗೆ ಕಾಂಗ್ರೆಸ್ ಏಳು ದಶಕಗಳಿಂದಲೂ ವಿರೋಧ ಪಕ್ಷ .ಮೊದಲ ಆದ್ಯತೆ ಬಿಜೆಪಿ ಗೆಲ್ಲಿಸುವುದು, ಎರಡನೇ ಆದ್ಯತೆ ಕಾಂಗ್ರೆಸ್ ನ ಸೋಲಿಸೋದು ಎಂದರು.

ಜೆಡಿಎಸ್ ಬೆಂಬಲ ಬಗ್ಗೆ ನಾನು ಮಾತಾಡಲ್ಲ. ರಾಜಕೀಯದಲ್ಲಿ ಶತ್ರುಗಳು ಅಂತ ಇಲ್ಲ ರಾಜಕೀಯ ವಿರೋಧಿಗಳು ಇದ್ದಾರೆ ಎಂದು ಟಾಂಗ್ ಕೊಟ್ಟರು.

Advertisement

ಇದನ್ನೂ ಓದಿ: ಪರಿಷತ್ ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲವಿಲ್ಲ: ಹೆಚ್ ಡಿಕೆ ಮಾತಿಗೆ ನೋ ಕಮೆಂಟ್ ಎಂದ ಸಿಎಂ

ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಕಾಂಗ್ರೆಸ್ ನ ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿಯಿಂದಲೇ ವಿರೋಧ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಕಾಲದಲ್ಲಿ ಸಿದ್ದರಾಮಯ್ಯರನ್ನು ಪ್ರಶ್ನಾತೀತ ನಾಯಕ, ಭವಿಷ್ಯದ ಪಿಎಂ‌ ಅಂತ ತುತ್ತೂರಿ ಊದಲಾಗುತ್ತಿತ್ತು. ಈಗ ಎಂಥ ದುರವಸ್ಥೆ ಬಂದಿದೆ. ಸಿದ್ದರಾಮಯ್ಯಗೆ ತಾವು ಇರುವ ಕ್ಷೇತ್ರದಿಂದಲೂ ಓಡಿಸುವ ಕೆಲಸ ಆಗುತ್ತಿದೆ. ಪ್ರಶ್ನಾತೀತ ನಾಯಕ ಸಿದ್ದರಾಮಯ್ಯಗೆ ಇಂಥ ಸ್ಥಿತಿ ಯಾಕೆ ಆಯ್ತು? ಎಂದು ವ್ಯಂಗ್ಯವಾಡಿದರು.

ಚಿಮ್ಮನಕಟ್ಟಿಗೆ ಯಾರೋ ಹೀಗೆ ಹೇಳುವಂತೆ ಟ್ಯೂನ್ ಮಾಡಿದ್ದಾರೆ. ಇಂಥ ಹೇಳಿಕೆ ಕೊಡುವ ಧೈರ್ಯ ಚಿಮ್ಮನಕಟ್ಟಿ ಮಾಡಲ್ಲ. ಸಿದ್ದರಾಮಯ್ಯಗೆ ಆಗದೇ ಇರೋರು ಚಿಮ್ಮನಕಟ್ಟಿಗೆ ಕೀ ಕೊಟ್ಟಿರಬೇಕು ನಮಗ್ಯಾಕೆ ಬೇಕು ಅವರ ವಿಚಾರ. ಕಾಂಗ್ರೆಸ್ ನಲ್ಲಿ ದೊಡ್ಡ ವರ್ಗ ಸಿದ್ದರಾಮಯ್ಯ ವಿರುದ್ಧ ಕುದಿಯುತ್ತಿದೆ ಸಿದ್ದರಾಮಯ್ಯ ಗೆ ಈ ಸ್ಥಿತಿ ಬರಬಾರದಾಗಿತ್ತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next