Advertisement

ಕಾನೂನು ಪಾಲಿಸದೆ ಇರುವವರಿಗೆ ಯೋಗಿ ಮಾದರಿ ಅನುಷ್ಠಾನ ಮಾಡಬೇಕಾಗುತ್ತದೆ: ಸಿ.ಟಿ ರವಿ

05:45 PM May 09, 2022 | Team Udayavani |

ನೆಲಮಂಗಲ: ನ್ಯಾಯಾಲಯದ ಅದೇಶವನ್ನು ಹಿಂದೂ ಮತ್ತು ಮುಸ್ಲಿಂಮರು ಪಾಲಿಸಬೇಕು. ಕೋರ್ಟ್ ಆದೇಶವನ್ನು ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡುವುದಕ್ಕೆ ಆಗುವುದಿಲ್ಲ. ಕೋರ್ಟ್ ಆದೇಶ ಪಾಲಿಸುವ ಹಾಗೇ ಸರ್ಕಾರ ನೋಡಿಕೊಳ್ಳಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಯಾರು ಸಹ ಜಾತ್ಯತೀತ ಹೆಸರಲ್ಲಿ ಒಲೈಕೆ ರಾಜಕಾರಣ ಮಾಡಬಾರದು. ಈ ವಿಚಾರದಲ್ಲಿ ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಮೈಕ್ ಯಾವ ಸಮಯದಲ್ಲಿ ಹಾಕಬೇಕು , ಯಾವ ಸಮಯದಲ್ಲಿ ಹಾಕಬಾರದು , ಹಾಗೇ ಎಷ್ಟು ಡಿಸಿಬಲ್ ಇರಬೇಕು ಎನ್ನುವುದನ್ನು ಕೋರ್ಟ್ ಹೇಳಿದೆ. ಅದನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದರು.

ಯಾವುದೇ ಆದೇಶವನ್ನು ಅನುಷ್ಠಾನ ಮಾಡದಿದ್ದಾಗ ಕ್ರಿಯೆ ಪ್ರತಿಕ್ರಿಯೆಗಳು ಪ್ರಾರಂಭವಾಗುತ್ತದೆ. ಹಾಗೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ಅಲ್ಪಸಂಖ್ಯಾತರ ನಿಯೋಗದಿಂದ ಸಿಎಂ ಭೇಟಿ ವಿಚಾರಕ್ಕೆ ಪ್ರತಕ್ರಿಯಿಸಿದ ಅವರು, ಕಾನೂನು ಪಾಲಿಸುವವರು ಹೆದರುವಂತಿಲ್ಲ. ಯಾರು ಕಾನೂನು ಪಾಲನೆ ಮಾಡುತ್ತಿಲ್ಲ .ಅವರಿಗೆ ಇಲ್ಲೂ ಸಹ ಯೋಗಿ ಮಾದರಿಯನ್ನು ಅನುಷ್ಠಾನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಜೆಡಿಎಸ್ ತೊರೆಯಲು ಮುಂದಾದ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ

ಇದು ನಮ್ಮ ನಿಮ್ಮ ನಡುವೆಯ ಖಾಸಗಿ ವಿಚಾರವಲ್ಲ. ಕಾನೂನು ಪಾಲನೆ ಮಾಡುವಂತೆ ಸರ್ಕಾರ ನೋಡಿಕೊಳ್ಳಬೇಕು. ಯಾರು ಪರ್ಮಿಷನ್ ತಗೆದುಕೊಂಡು ಮೈಕ್ ಹಾಕಿದ್ದಾರೆ ಅವರಿಗೆ ತೊಂದರೆ ಮಾಡಬಾರದು. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದೆ ಎಂದರು.

Advertisement

ಮುತಾಲಿಕ್ ಸ್ಟೇಟ್ಮೆಂಟ್ ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ದೇಶದ ಹಿತಕ್ಕಿಂತ ದೊಡ್ಡದು ಯಾವುದಿದೆ. ಯಾರಾದರೂ ಆತಂಕ ಸೃಷ್ಟಿ ಮಾಡಿದರೆ ಅವರಿಗೆ ಬೆಣ್ಣೆ ಹಚ್ಚೋಕೆ ಆಗುತ್ತಾ? ಅಂತಕ ಸೃಷ್ಟಿ ಮಾಡಬೇಕು ಅನ್ನೋರಿಗೆ ಬಿರಿಯಾನಿ ತಿನ್ನಿಸೋಕೆ ಆಗುತ್ತಾ? ಬಿರಿಯಾನಿನೂ ತಿನ್ನಿಸೋದಿಲ್ಲ ಬೆಣ್ಣೆನೂ ಹೆಚ್ಚೋದಿಲ್ಲ. ಯಾರು ಕಾನೂನು ಪಾಲಿಸಲ್ಲ ಅಂತಾರೆ ಅವರಿಗೆ ಬುಲ್ಡೋಜರ್ ಅದರೂ ಸರಿ ಯಾವ ಮಾದರಿಯಾದರೂ ಸರಿ. ಕಾನೂನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದರು

ಹನುಮಾನ್ ಚಾಲೀಸ್ ಹಾಕುವುದರಿಂದ ಸಮಸ್ಯೆ ಯಾರಿಗೆ? ಅತಿ ಹೆಚ್ಚು ಕೋರ್ಟ್ ತೀರ್ಪುನ್ನು ಯಾರು ಉಲ್ಲಂಘಿಸಿದರೋ ಅದು ಹಿಂದು ಇರಲಿ ಮುಸ್ಲಿಂ ಇರಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next