ಚಿಕ್ಕಮಗಳೂರು: ರಾಜ್ಯದಲ್ಲಿ ಎಲ್ಲಿ ನೋಡಿದರು ಹುಲಿ ಉಗುರು, ಜುಲೈ ಚರ್ಮ ಇದರದ್ದೇ ವಿಚಾರ, ಅವರ ಬಳಿ ಇದೆಯಂತೆ ಇವರ ಬಳಿ ಇದೆಯಂತೆ ಇದೆಲ್ಲವೂ ಕಾಂಗ್ರೆಸ್ ಸರಕಾರ ಜನರ ದಾರಿ ತಪ್ಪಿಸುವ ನಾಟಕ ಎಂದು ಮಾಜಿ ಸಚಿವ ಸಿ.ಟಿ. ರವಿ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಲಿ ಉಗುರು, ಹುಲಿ ಚರ್ಮದ ವಿಚಾರವಾಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಲಿ ಉಗುರು ಪ್ರಕರಣ, ಐಟಿ ದಾಳಿಯಲ್ಲಿ ಪತ್ತೆಯಾದ ಕೋಟ್ಯಾಂತರ ಹಣದ ಚರ್ಚೆಯ ದಾರಿ ತಪ್ಪಿಸುವ ನಾಟಕವಾಗಿದೆ, ಜನರ ಆಕ್ರೋಶಕ್ಕೆ ವಿರಾಮ ಹಾಕಲು ಕಮಿಷನ್ ಕಲೆಕ್ಟರ್ (CM) ಡೆಪ್ಯೂಟಿ ಕಮಿಷನ್ ಕಲೆಕ್ಟರ್ (DCM) ಅವರ ಹುಲಿ ಉಗುರು ನಾಟಕವಾಸ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಜನ ನೂರಾರು ವರ್ಷಗಳಿಂದ ಹುಲಿಯುಗುರನ್ನ ಆಭರಣವಾಗಿ ಧರಿಸಿದ್ದಾರೆ, ಇಲಾಖೆಗೆ ಕಾಣದ್ದೇನು ಅಲ್ಲ, ಈಗ ಸರ್ಕಾರದ ವೈಫಲ್ಯ, ಬೋಗಸ್ ಭರವಸೆಗಳಿಗೆ ಜನ ಆಕ್ರೋಶಿತರಾಗಿದ್ದಾರೆ. ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಸ್ತಿಲ್ಲ, ಕತ್ತಲೆ ಭಾಗ್ಯ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸರಕಾರ ವೈಫಲ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚ ರಾಜ್ಯ ಚುನಾವಣೆಗೆ ನಡೆಸಿದ ಕಲೆಕ್ಷನ್ ಐಟಿ ಇಲಾಖೆ ಪಾಲಾಗಿದೆ, ಸರ್ಕಾರಕ್ಕೆ ಜನರ ಎದುರು ತಲೆಯೆತ್ತಿ ನಡೆಯಲಾಗ್ತಿಲ್ಲ, ಒಮ್ಮೆ ನಿಮ್ಮ ಮಂತ್ರಿ ಮಂಡಲದ ಒಳಗೆ ಇಣುಕಿ ನೋಡಿ ಕಾಡು ಪ್ರಾಣಿ ಬಂಧನದಲ್ಲಿರಿಸಿ ಹತ್ಯೆ ಮಾಡಿದವರು ಸಿಕ್ಕಿಯಾರು ಎಂದು ಹೇಳಿದರು.
ಜನ ಸಾಮಾನ್ಯರಿಗೆ FSL ವರದಿ ಬರುವುದಕ್ಕೆ ಮುಂಚೆಯೇ ಬಂಧನ, ಸೆಲೆಬ್ರಿಟಿಗಳಿಗೆ ನೋಟಿಸ್… ಇದೆಲ್ಲವೂ ಈ ನಾಟಕದ ಭಾಗವಲ್ಲವೇ ? ಇದು ನಿಮ್ಮ ಸರಕಾರದ ಪ್ರಾಮಾಣಿಕತೆಯ ಬಗ್ಗೆ ಸಂಶಯ ಮೂಡಿಸುವುದಿಲ್ಲವೇ ? ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Dharwad; ಅರವಿಂದ ಜತ್ತಿ ಸೇರಿದಂತೆ ಮೂವರಿಗೆ ಕವಿವಿ ಗೌರವ ಡಾಕ್ಟರೇಟ್