Advertisement
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾರ್ಮಿಕರ ದುಡಿಮೆಯಲ್ಲಿ ದೇಶದ ಭವಿಷ್ಯವಿದೆ ಪ್ರಧಾನಿ ತಮ್ಮನ್ನ ಪ್ರಧಾನ ಸೇವಕ ಎಂದು ಕರೆದಿದ್ದಾರೆ ಅವರು ನಾಡಿನ ಪ್ರಧಾನ ಸೇವಕ ಅವರ ಉದ್ದೇಶ ರಾಜಕಾರಣ ನಾಡಿನ ಸೇವೆಗೆ ಇರಬೇಕು ಎಂದವರು, ಪ್ರಧಾನಿ ಮೋದಿ ಅವರು ಒಂದು ದಿನವೂ ರಜೆ ಪಡೆಯದೇ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದ್ದಾರೆ ಹಾಗಾಗಿ ಈ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಮುಂದುವರೆಯಬೇಕು ಎಂದು ವಿಕಸಿತ ಭಾರತದ ಸಂಕಲ್ಪ ಪತ್ರ ಜನರ ಮುಂದಿಟ್ಟು ಮತಯಾಚನೆ ಮಾಡಿದೆ ಎಂದು ಹೇಳಿದರು.
Related Articles
Advertisement
ಚುನಾವಣೆಯಲ್ಲಿ ಖರ್ಗೆ ಅಳಿಯನ ಗೆಲ್ಲಿಸಲು ಪ್ರಯತ್ನಗಳು ನಡೆಯುತ್ತಿವೆ ಕಾಂಗ್ರೆಸ್ ಗೆ ಸಾಧನೆಯ ಬಲ ಇಲ್ಲ , ಅವರಿಗೆ ಅಪ ಪ್ರಚಾರ, ಅಪನಂಬಿಕೆ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ ಹಾಗಾಗಿ ಜಾಹಿರಾತಿನಲ್ಲಿ ಚಂಬು ಬಳಸಿದರು. ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಬೇದಿ ಜಾಸ್ತಿ ಆದಂತೆ ಕಾಣುತ್ತಿದೆ ಹಾಗಾಗಿ ನೀವು ಚೆಂಬು ಬಿಡುವಂತಿಲ್ಲ.
ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಜಿನ್ನಾ ಕನಸು ನನಸು ಮಾಡುವ ರೀತಿ, ಅಂಬೇಡ್ಕರ್ ಗೆ ಅಪಮಾನ ಮಾಡುವ ರೀತಿ ಅವರ ಪ್ರಣಾಳಿಕೆ ಇದೆ. ನಮಗೆ ಜಾತಿ ಆಧಾರಿತ ಮೀಸಲಾತಿ ಇದೆ. ಓಬಿಸಿ ಒಳಗೆ ಮತ ಆಧಾರಿತ ಮೀಸಲಾತಿ ತುರುಕಿದೆ. ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸ್ಲಿಂಗೆ ಎಂದು ಮನಮೋಹನ್ ಸಿಂಗ್ ಹೇಳಿದ್ದರು. ನಾವು ಬಡವರಿಗೆ ಮೊದಲ ಅಧಿಕಾರ ಎಂದಿದ್ದೇವೆ, ಜನರ ಸಂಪತ್ತಿನ ಮೇಲೆ ಕಾಂಗ್ರೆಸ್ ಕಣ್ಣು ಇಟ್ಟಿದೆ ವ್ಯಕ್ತಿಗತ ಜನರ ಸಂಪತ್ತು ಗಣತಿಗೆ ಕಾಂಗ್ರೆಸ್ ಮುಂದಾಗಿದೆ ಅವರಿಗೆ ಸೋಲಿನ ಭಯ ಕಾಡುತ್ತಿದೆ.
ಸುಳ್ಳು- ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳು 1.42 ಲಕ್ಷ ಕೋಟಿ ಕೇಂದ್ರ 2004-14ರ ವರೆಗೂ ರಾಜ್ಯಕ್ಕೆ ಕೊಟ್ಟಿದೆ ಅವರು ಚೆಂಬಿನ ಜಾಹಿರಾತು ಕೊಟ್ಟಿದ್ದಾರೆ. ಅಪಪ್ರಚಾರ ಅಪನಂಬಿಕೆ ಮಾಡುತ್ತಿದೆ ಬರ ನಿರ್ವಹಣೆಯಲ್ಲಿ ನಿಮ್ಮ ಖಜಾನೆಯಿಂದ ಏಷ್ಟು ಹಣ ಕೊಟ್ಡಿದ್ದಾರೆ. ಈ ಬಗ್ಗೆ ಸಿಎಂ, ಸಚಿವರು ತಲೆ ಕೆಡಿಸಿಕೊಂಡಿಲ್ಲ ಕಾಂಗ್ರೆಸ್ ಅವರನ್ನು ಮಂಪರು ಪರೀಕ್ಷೆ ಮಾಡಿದರೆ ಮಷಿನ್ ಸಹ ತನ್ನ ಮಿತಿ ದಾಟುತ್ತೆ ಎಂದು ಗುಡುಗಿದರು.
ಯಾವುದೇ ಅನ್ಯಾಯ ಸಹಿಸಲ್ಲ, ನ್ಯಾಯ ಸಮಾನವಾಗಿರಬೇಕು ಎಸ್ಐಟಿ ತನಿಖೆ ಮಾಡಲಿ ಪ್ರಜ್ವಲ್ ಪರ ಹಿಂದೆ ಸಿಎಂ ಸೇರಿ ಕಾಂಗ್ರೆಸ್ ನಾಯಕರೇ ಪ್ರಚಾರ ಮಾಡಿದ್ದರು ಉಪ್ಪು ತಿಂದವನು ನೀರು ಕುಡಿಯಬೇಕು ಇದು ಎಲ್ಲರಿಗೂ ಆಗಬೇಕು ನಾವು ಪ್ರಕರಣ ಖಂಡಿಸಿದ್ದೇವೆ ತನಿಖೆ ನಂತರ ಸತ್ಯ ಸುಳ್ಳು ಹೊರಬರಲಿದೆ. ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿ, ನೇಹಾ ಹತ್ಯೆಯಾದ ನಂತರ ಸಿಎಂ, ಗೃಹ ಸಚಿವರ ಹೇಳಿಕೆ ಖಂಡಿಸುವೆ ಕಾಂಗ್ರೆಸ್ ಓಲೈಕೆ ರಾಜಕಾರಣದ ವಿರುದ್ದ ನಮ್ಮ ಧ್ವನಿ ಕಾಂಗ್ರೆಸ್ ದ್ವಂದ್ವ ನಿಲುವು ಇದೆ ನಾವು ಪ್ರಜ್ವಲ್ ಪರ ವಕಾಲತ್ತು ವಹಿಸಲ್ಲ ಎಂದು ಹೇಳಿದರು.
ಗ್ಯಾರಂಟಿ ಯಿಂದ ಹಾಲಿನ ದರ ಬಂದಿಲ್ಲ ಗ್ಯಾರಂಟಿಗಳಿಗೆ ಅವರ ಫಾದರ್ ಮನೆ ಆಸ್ತಿ ಮಾರಿಯಾದರೂ ಹಣ ಕೊಡಲಿ ಆದರೆ ರಾಜ್ಯ ಮಾರಬೇಡಿ ನಾವು ಕೇಂದ್ರದಿಂದ ಪರಿಹಾರ ಕೊಟ್ಟಿದ್ದೇವೆ ನೀವು ಏಷ್ಟು ಕೊಟ್ಟಿದ್ದೀರಿ ? ನಿಮ್ಮ ಚಂಬು ಖಾಲಿಯಾಗಿದೆಯಾ ? ತೂತು ಬಿದ್ದಿದೆಯಾ ? ಎಂದು ರಾಜ್ಯ ಕಾಂಗ್ರೆಸ್ ವಿರುದ್ದ ಸಿ ಟಿ ರವಿ ಗುಡುಗು.
ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ