Advertisement

ಪರೋಕ್ಷವಾಗಿ ಸಿದ್ದು, ಡಿಕೆಶಿಗೆ ಬಿಜೆಪಿಗೆ ಆಹ್ವಾನಿಸಿದ ಶಾಸಕ ಸಿ.ಟಿ.ರವಿ: ಹೇಳಿದ್ದೇನು?

06:57 PM Sep 17, 2022 | Team Udayavani |

ಚಿಕ್ಕಮಗಳೂರು:  ರಾಜಕೀಯದಲ್ಲಿ ಭವಿಷ್ಯ ಅಥವಾ ಆತ್ಮತೃಪ್ತಿ ಎರಡಲ್ಲಿ ಒಂದು ಇರಬೇಕು.ಈಗ ಕಾಂಗ್ರೆಸ್ ನಲ್ಲಿ ಆತ್ಮತೃಪ್ತಿ, ಅಧಿಕಾರ ಎರಡೂ ಇಲ್ಲ ಅಂದದರೆ ಯಾರಿರ್ತಾರೆ. ಅಜೆಂಡಾ ಇರಬೇಕು, ನೀತಿ ನೇತೃತ್ವ, ನಿಯತ್ತು ಮೂರು ಇಲ್ಲ ಅಂದ್ರೆ ಯಾರಿರ್ತಾರೆ ಹೆತ್ತವರಿಗೆ ಹೆಗ್ಗಣವೂ ಮುದ್ದು, ಉಳಿದವರಿಗೆ ಮುದ್ದಾಗುತ್ತಾ, ಹಾಗಾಗಿದೆ ಕಾಂಗ್ರೆಸ್ ಸ್ಥಿತಿ ಎಂದು  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳದರು.

Advertisement

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಅವರ ಸರ್ವೋಚ್ಛ ನಾಯಕರಿಗೆ ಏನೆಂದು ಕರೆಯುತ್ತಾರೆ, ಅದಕ್ಕೊಂದು ಸ್ಟ್ರೈಕ್ ಮಾಡಬಹುದು ಸೋಶಿಯಲ್ ಮೀಡಿಯಾದಲ್ಲಿ ಏನೆಂದು ಕರೆಯುತ್ತಾರೆಂದು  ಪಾದಯಾತ್ರೆ ಮಾಡುವವರನ್ನು ಕೇಳಿ ಭಾರತ್ ಜೋಡೋ, ಅವರ ಇಂಟ್ರನಲ್ ಮ್ಯಾಟರ್  ಅದಕ್ಕೆ ತಲೆಹಾಕಲ್ಲ. ಹಿರಿಯರು, ಬಹುತೇಕ ಶಾಸಕರು ಭಾರತ್ ಜೋಡೋ ಯಾತ್ರೆಯಲ್ಲಿದ್ದಾರೆ ಎಂದರು.

ಇದನ್ನೂ ಓದಿ: ಈಕೆ ಬೆಂಕಿಯಲ್ಲಿ ಅರಳಿದ ಬ್ಯೂಟಿ… ಕಾಲೇಜಿನಲ್ಲಿನ ಕರಾಳ ಘಟನೆ ಬದುಕಿಗೆ ತಿರುವು ಕೊಟ್ಟಿತ್ತು…

ಗೋವಾದಲ್ಲಿ 11ಕ್ಕೆ 9 ಜನ ಬಂದರು ಯಾರಿಗೂ ಡಿಮ್ಯಾಂಡ್ ಮಾಡಿ ಬನ್ನಿ ಅಂದಿಲ್ಲ. ನಾವೇ ಬಂದು ಸೇರುತ್ತೇವೆ ಎಂದಾಗ ಬೇಡ ಅನ್ನೋಕೆ ನಾವ್ಯಾರು ಸನ್ಯಾಸಿಯಾ. ಕಾಂಗ್ರೆಸ್ ಅನ್ಯಾಯ ಮಾಡಿದೆ ನಂಬಿ ಕೆಟ್ವಿ ಅಂತ ಬಿಜೆಪಿ ಸೇರುತ್ತೀವಿ ಅಂದರೆ ಬನ್ನಿ ಅಂತೆವೇ. ಆ ಸಾಲಿನಲ್ಲಿ ದೊಡ್ಡ ಲೀಡರ್ ಗಳು, ಮಾಜಿ ಸಿಎಂ, ವಿಪಕ್ಷ ನಾಯಕರು ಬರ್ತಿವಿ ಅಂದರೆ ಬನ್ನಿ ಅಂತೀವಿ ಎಂದು ಪರೋಕ್ಷವಾಗಿ ಸಿದ್ದು, ಡಿಕೆಶಿಗೆ ಬಿಜೆಪಿಗೆ ಆಹ್ವಾನ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next