ಚಿಕ್ಕಮಗಳೂರು: ರಾಮನ ಜನ್ಮಸ್ಥಾನಕ್ಕಾಗಿ ಐನೂರು ವರ್ಷದ ಹೋರಾಟ ಬೇಕಾಯಿತು. ಅದೇ ಮಾದರಿಯಲ್ಲಿ ದತ್ತಪೀಠದ ಹೋರಾಟವನ್ನು 500 ವರ್ಷ ತೆಗೆದುಕೊಂಡು ಹೋಗುತ್ತಿದ್ದೀರಿ. ಸಿ.ಟಿ.ರವಿಯವರೇ ನಿಮಗೆ ನಾಚಿಕೆ ಆಗಬೇಕು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆಯಲ್ಲಿ ಮಾತನಾಡಿದ ಅವರು, ಅಧಿಕಾರ ಇರುವಾಗಲೇ ದತ್ತಪೀಠದ ವಿವಾದವನ್ನು ಪರಿಹಾರ ಮಾಡಬಹುದು. ಹಿಂದೂ ಅರ್ಚಕರನ್ನು ನೇಮಿಸಿ ಪರಿಹಾರ ಮಾಡಿ ಎಂದು ಕೋರ್ಟ್ ಹೇಳಿದೆ. ಕೋರ್ಟ್ ಹೇಳಿದ 24 ಗಂಟೆಯೊಳಗಡೆ ಅರ್ಚಕರನ್ನು ನೇಮಿಸಬಹುದಿತ್ತು. ಪೂಜೆ ಪ್ರಾರಂಭ ಮಾಡಿದ್ದರೆ ನಿಮ್ಮಪ್ಪನ ಗಂಟು ಏನ್ ಹೋಗುತ್ತಿತ್ತು ಸಿ.ಟಿ ರವಿಯವರೇ, ತಡೆಯಾಜ್ಞೆ ತರುತ್ತಾರೆಂದು ಭಾರಿ ದೊಡ್ಡ ದೊಡ್ಡ ಮಾತಾನಾಡ್ತೀರಿ ಎಂದರು.
ಮುಸ್ಲಿಮರ ಜೊತೆ ಕುಳಿತುಕೊಂಡು ಸೌಹಾರ್ದತೆಯಿಂದ ಬಗೆಹರಿಸಲು ಆಗುವುದಿಲ್ಲವೇ? ಪರಿಹರಿಸಲು ಧೈರ್ಯ ಬೇಕಾಗಿದೆ, ಇಚ್ಛಾಶಕ್ತಿ ಬೇಕಾಗಿದೆ. ಅದಿಲ್ಲದ ಪರಿಣಾಮದಿಂದ ರಾಜಕೀಯ ನಾಟಕ ಆಡುತ್ತಿದ್ದೀರಿ. ಆದರೆ ನಾವು ನಮ್ಮ ಕೊನೆ ಉಸಿರು ಇರುವವರೆಗೂ ದತ್ತಪೀಠಕ್ಕಾಗಿ ಹೋರಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.